1 ತಿಂಗಳ ಬಾಡಿಗೆ ಮನ್ನಾ ಮಾಡಿದ ಹಿಂದುಸ್ತಾನ್ ಗ್ರೂಪ್ಸ್‌ನ ಡಾ.ಮಹಮ್ಮದ್ ಇಬ್ರಾಹಿಂ ಪಾವೂರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಜಾತಿ ಧರ್ಮಭೇದವಿಲ್ಲದೆ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದ ಹಾಗೂ ಸಂಘ ಸಂಸ್ಥೆಗಳ ಕಿಟ್ ವಿತರಣೆಗೆ ಸಹಾಯ ಹಸ್ತ ನೀಡಿದ ಉದ್ಯಮಿಯೊಬ್ಬರು ತಮ್ಮ ಕಟ್ಟಡದ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.


ಹಿಂದುಸ್ಥಾನ್ ಪ್ರೈವೇಟ್ ಲಿಮಿಟೆಡ್‌ನ ಅಡಳಿತ ನಿರ್ದೇಶಕ ಡಾ. ಮಹಮ್ಮದ್ ಇಬ್ರಾಹಿಂರವರು ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿನ ತಮ್ಮ ಸಂಕೀರ್ಣದಲ್ಲಿರುವ ಕೊಠಡಿಗಳ ಬಾಡಿಗೆದಾರರ 1 ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ. ಈ ಸಂಕೀರ್ಣದಲ್ಲಿ ಹಲವಾರು ವ್ಯಾಪಾರಸ್ಥರಿದ್ದಾರೆ. ಎಲ್ಲಾ ಬಾಡಿಗೆದಾರರಿಂದ ಹೆಚ್ಚಿನ ಮೊತ್ತದ ಬಾಡಿಗೆ ಪಾವತಿಯಾಗುತ್ತಿತ್ತು. ಕೊರೋನಾ ಲಾಕ್‌ಡೌನ್ ಸಂದರ್ಭ ಸಂಕಷ್ಟದಲ್ಲಿರುವವರಿಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಹಿಂದುಸ್ಥಾನ್‌ನ ಆಡಳಿತ ನಿರ್ದೇಶಕ ಮಹಮ್ಮದ್ ಇಬ್ರಾಹಿಂರವರು ತನ್ನ ಸಂಕೀರ್ಣದಲ್ಲಿರುವ ಬಾಡಿಗೆದಾರರ ನೆರವಿಗೆ ಧಾವಿಸಿದ್ದು ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದ್ದು ಶ್ಲಾಘನೆಗೆ ಪಾತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.