ನಿಡ್ಪಳ್ಳಿ ಇಗರ್ಜಿಯ ಧರ್ಮಗುರು ಜೊನ್ ಡಿ’ಸೋಜರವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಿಡ್ಪಳ್ಳಿ ಹೋಲಿ ರೋಜರಿಯಮ್ಮನವರ ಇಗರ್ಜಿಯ ಧರ್ಮಗುರು ಫಾ| ಜೊನ್ ಡಿ’ಸೋಜರವರಿಗೆ ಚರ್ಚ್ ಪಾಲನಾ ಪರಿಷತ್ತ್ ಮತ್ತು ನಿಡ್ಪಳ್ಳಿ ಚರ್ಚಿನ ಭಕ್ತಾದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಗ್ರೇಸಿ ಕ್ರಾಸ್ತರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಗುರುಗಳು ನಿಡ್ಪಳ್ಳಿ ಚರ್ಚಿಗೆ ಕಳೆದ ೭ ವರ್ಷಗಳ ಅವಧಿಗೆ ನೀಡಿರುವ ಸೇವೆಯನ್ನು ಶ್ಲಾಘಿಸಿದರು. ಅವರು ಈಗಾಗಲೇ ಮಂಗಳೂರು ತಾಲೂಕಿನ ಎಲ್ಯಾರ್‌ಪದವು ಇಗರ್ಜಿಯ ಧರ್ಮಗುರುಗಳಾಗಿ ವರ್ಗಾವಣೆಗೊಂಡಿದ್ದು, ಮುಂದಿನ ದಿನಗಳಲ್ಲಿ ನಿಡ್ಪಳ್ಳಿ ಚರ್ಚಿಗೆ ನೀಡಿದ ಸೇವೆಗಿಂತಲೂ ಹೆಚ್ಚು ಸೇವೆಯನ್ನು ಎಲ್ಯಾರ್‌ಪದವು ಇಗರ್ಜಿಯ ಭಕ್ತಾದಿಗಳಿಗೆ ನೀಡುವ ಶಕ್ತಿ ಮತ್ತು ಚೈತನ್ಯವನ್ನು ಕರುಣಿಸಲೆಂದು ಹಾರೈಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಫ್ರಾನ್ಸಿಸ್ ಡಿ.ಸೋಜರವರು ಮಾತನಾಡಿ ಫಾ| ಜೋನ್ ಡಿ’ಸೋಜರವರು ನಿಡ್ಪಳ್ಳಿ ಚರ್ಚಿಗೆ ನೀಡಿದ ಸೇವೆಯನ್ನು ಸ್ಮರಿಸಿ ಇಗರ್ಜಿಯನ್ನು ಆರ್ಥಿಕವಾಗಿ ಸುದೃಢ ಪರಿಸ್ಥಿತಿಗೆ ತರುವಲ್ಲಿ ಧರ್ಮಗುರುಗಳು ವಹಿಸಿದಂತಹ ಶ್ರಮವನ್ನು ಶ್ಲಾಘಿಸಿದರು. ಚರ್ಚಿನ ಭಕ್ತಾಧಿಗಳ ಪರವಾಗಿ ಚರ್ಚ್ ಪಾಲನಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಡಿಸೋಜಾ, ಕಾಶ್ಮಿರ್ ಡಿಸೋಜ ನಳಿಕೆಮಜಲು ಮಾತನಾಡಿ ಶುಭಹಾರೈಸಿದರು.

ಗೌರವಾರ್ಪಣೆ : ಧರ್ಮಗುರುಗುಳಿಗೆ ಚರ್ಚ್ ಪಾಲನಾ ಸಮಿತಿಯ ವತಿಯಿಂದ ಮತ್ತು ನಿಡ್ಪಳ್ಳಿ ಚರ್ಚಿನ ಭಕ್ತಾಧಿಗಳ ಪರವಾಗಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಕ್ತಾದಿಗಳು ವೈಯುಕ್ತಿಕವಾಗಿ ಹೂಗುಚ್ಚ ನೀಡಿ ಗೌರವಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಧರ್ಮಗುರು ಫಾ| ಜೊನ್ ಡಿ’ಸೋಜರವರು ಕಳೆದ ೭ ವರ್ಷಗಳಿಂದ ಚರ್ಚಿನ ಭಕ್ತರು ತೋರಿಸಿದ ಗೌರವ, ಪ್ರೀತಿ ಮತ್ತು ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಸರ್ವರಿಗೂ ಯಶಸ್ಸನ್ನು ಹಾರೈಸಿದರು. ಚರ್ಚಿನ ಗುರಿಕಾರುಗಳಾದ ಪಾವ್ಲಿನ್ ಮೊಂತೆರೋ, ಗ್ರಗೋರಿ ಡಿಸೋಜ ಮತ್ತು ಚರ್ಚ್ ಪಾಲನಾ ಸಮಿತಿಯ ಸದಸ್ಯರುಗಳು ವೇದಿಲೆಯಲ್ಲಿ ಉಪಸ್ಥಿತರಿದ್ದರು. ಹಲವಾರು ಚರ್ಚಿನ ಭಕ್ತಾದಿಗಳು ಉಪಸ್ಥಿತರಿದ್ದರು. ನಿಡ್ಪಳ್ಳಿ ಚರ್ಚಿನ ಹೋಲಿ ರೋಜರಿಯಮ್ಮನವರ ವಾಳೆ, ನಿಡ್ಪಳ್ಳಿಯ ಗುರಿಕಾರರಾದ ನ್ಯಾಯವಾದಿ ಗ್ರೆಗೋರಿ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.