HomePage_Banner
HomePage_Banner
HomePage_Banner
HomePage_Banner

ಕೋವಿಡ್ -19 ನಿರ್ಮೂಲನೆಗೆ ನಾನು ರೂ. 10 ಲಕ್ಷ ಕೊಡಲು ಸಿದ್ಧ | ನೀವು ತಲಾ ರೂ. 20 ಲಕ್ಷವಾದರೂ ಕೊಡಲು ಸಿದ್ಧರಿದ್ದಿರಾ ?

Puttur_Advt_NewsUnder_1
Puttur_Advt_NewsUnder_1

ಪುತ್ತೂರಿನ ವಕೀಲೆಯಿಂದ ಶಾಸಕರು ಸಂಸದರಿಗೆ ಸವಾಲು

ಪುತ್ತೂರು: ಕೊರೋನಾ ಸೋಂಕು ನಿಮೂರ್ಲನೆಗೆ ನಾನು ರೂ. 10 ಲಕ್ಷ ಕೊಡಲು ಸಿದ್ಧನಿದ್ದೇನೆ. ಆದರೆ ನೀವು ತಲಾ ರೂ. 20 ಲಕ್ಷವಾದರೂ ಕೊಡಲು ಸಿದ್ದರಿದ್ದೀರಾ ಎಂದು ಪುತ್ತೂರಿನ ವಕೀಲೆಯೊಬ್ಬರು ಶಾಸಕರು ಮತ್ತು ಸಂಸದರಿಗೆ ಸವಾಲು ಹಾಕಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.


ಪುತ್ತೂರಿನ ಬಪ್ಪಳಿಗೆ ನಿವಾಸಿ ವಕೀಲೆಯಾಗಿರುವ ಶೈಲಜಾ ಅಮರ್‌ನಾಥ್ ಅವರು ಶಾಸಕರಿಗೆ ಮತ್ತು ಸಂಸದರಿಗೆ ಸವಾಲು ಹಾಕಿದವರು. ಅವರು ಸಾಮಾಜಿಕ ಜಾಲತಾಣವೊಂದರಲ್ಲಿ ತಾನು ಸವಾಲು ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ. ಚುನಾವಣೆ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿರುವ ಜನಪ್ರತಿನಿಧಿಗಳು ಕೋವಿಡ್ ಸಂದರ್ಭದಲ್ಲಿ ಅದರ ನಿಮೂರ್ಲನೆಗೂ ಸಹಕಾರ ನೀಡುವಂತೆ ಸವಾಲು ಹಾಕಿದ್ದಾರೆ. ‘ಶಾಸಕರೆ, ಸಂಸದರುಗಳೇ ಇದು ಚಾಲೆಂಜ್ ಅಥವಾ ಆಫರ್ ಎಂದುಕೊಳ್ಳುತ್ತಿರಾ ನಿಮಗೆ ಬಿಟ್ಟದ್ದು. ಕೋವಿಡ್ ನಿರ್ಮೂಲನಾ ಸಮಿತಿ ಎಂಬ ಸಮಿತಿ ಮಾಡೋಣ. ನಾನು ರೂ. 10 ಲಕ್ಷ ರೂಪಾಯಿ ಕೊಡಲು ಸಿದ್ಧನಿದ್ದೇನೆ. ನೀವು ಚುನಾವಣೆ ಸಂದಭದಲ್ಲಿ ಕೋಟಿ ಗಟ್ಟಲೆ ಖರ್ಚು ಮಾಡಿ ಗೆದ್ದಿರುವ ಕುರಿತು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಿನ ಪರಿಸ್ಥಿತಿಯಲ್ಲಿ ನಾನು ರೂ. 10 ಲಕ್ಷ ಕೋವಿಡ್ ನಿರ್ಮೂಲನಾ ಸಮಿತಿಗೆ ಹಾಕುತ್ತೇನೆ. ನೀವು ರೂ. 20 ಲಕ್ಷ ಹಾಕಬಹುದು. ಹೀಗೆ ಪ್ರತಿ 224 ಮಂದಿ ಶಾಸಕರು ತಲಾ ರೂ. 20 ಲಕ್ಷ ಹಾಕಿ ನಿಮ್ಮ ನಿಮ್ಮ ಕ್ಷೇತ್ರದಲ್ಲೇ ಇದನ್ನು ಖರ್ಚು ಮಾಡುವ ಮೂಲಕ ಯಾಕೆ ಕೋವಿಡ್ ನಿರ್ಮೂಲನೆ ಮಾಡಲಾಗುವುದಿಲ್ಲ ಎಂದು ನೋಡೋಣಾ ಎಂದು ಸವಾಲು ಹಾಕಿದ್ದಾರೆ. ಬೇಕಿದ್ದರೆ ನಾನು ಆ ಕೋವಿಡ್ ಸಮಿತಿಯಲ್ಲಿ ಇರುತ್ತೇನೆ. ಎಲ್ಲಿಗೆ ಎಷ್ಟೆ ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂಬ ಕುರಿತು ಆಪ್ ಮಾಡೋಣಾ. ಆ ಮೂಲಕ ಕೊರೋನಾ ನಿರ್ಮೂಲನೆ ಮಾಡೋಣ. ಮುಂದಿನ ಚುನಾವಣೆಗೆ ಎಲ್ಲಾ ಜನಪ್ರತಿನಿಧಿಗಳು ಮಾಸ್ಕ್ ಇಲ್ಲದೆ ಚುನಾವಣಾ ಪ್ರಚಾರ ಮಾಡಬಹುದು ಎಂದು ತಮ್ಮ ವಿಡಿಯೋದಲ್ಲಿ ತಿಳಿಸಿದ ಅವರು ನನ್ನ ಜೊತೆ ಕೈ ಜೋಡಿಸಿ ಕೊರೋನಾ ಗೆಲ್ಲೋನಾ ಎಂದು ಹೇಳಿದ್ದಾರೆ.

ಮುಖ ಮುಚ್ಚಿ ಓಡುವ ಜೀವನ ಬೇಡ:
ನಾವು ನಮ್ಮ ಜೀವನ ಮಾತ್ರ ಕಾಪಾಡುವುದಲ್ಲ. ಮುಂದೆ ನಮ್ಮ ಮಕ್ಕಳಿಗೆ ಸ್ವಚ್ಚಂದವಾದ ಜೀವನ ಕಲ್ಪಿಸಿಕೊಡಬೇಕು ಎಂದು ಶೈಲಜಾ ಅಮರ್‌ನಾಥ್ ಅವರು ನಾವು ಮನೆಯಲ್ಲಿ ಕೂತು ಮಾಸ್ಕ್ ಹಾಕಿರುವುದು ಅಲ್ಲ. ನಾವು ದೇಶಕ್ಕಾಗಿ ದುಡಿಯಬೇಕು. ನಾವು ಮುಖ ಮುಚ್ಚಿ ಓಡುವ ಜೀವನ ತಾತ್ಕಾಲಿಕವಾಗಿಬೇಕು. ಅದಕ್ಕಾಗಿ ಈ ವಿಡಿಯೋ ಪ್ರತಿಯೊಬ್ಬ ಸಂಸದ, ಶಾಸಕರಿಗೆ ತಲುಪಬೇಕು. ಅವರಿಗೆ ಅರ್ಥ ಮಾಡಿಸುವ ಕೆಲಸ ಆಗಬೇಕು ಎಂದು ಸವಾಲಿನಲ್ಲಿ ತಿಳಿಸಿದ್ದಾರೆ.

 

 

ವೀಡಿಯೋ ಲಿಂಕ್‌ 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.