ಜು.26ರ ಪುತ್ತೂರು, ಕಡಬ ಕೊರೋನಾ ಅಪ್‌ಡೇಟ್ | ನಗರಸಭೆ, ಚಿನ್ನಾಭರಣ ಮಳಿಗೆ ಸಿಬ್ಬಂದಿಗಳು, ಸೇರಿದಂತೆ ಉಭಯ ತಾಲೂಕಿನಲ್ಲಿ 21 ಕೊರೋನ ಪ್ರಕರಣ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆಯ ಅಭಿಯಂತರರೊಬ್ಬರು, ಚಿನ್ನಾಭರಣ ಮಳಿಗೆಯ 6 ಮಂದಿ ಮತ್ತು ಡಿವೈಎಸ್ಪಿ ಸ್ಕ್ವಾಡ್‌ನ ಸಿಬ್ಬಂದಿಯೊಬ್ಬರು ಸೇರಿದಂತೆ ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ 21 ಸೋಂಕು ಪ್ರಕರಣ ದೃಢಪಟ್ಟಿದೆ.


ಪುತ್ತೂರು ನಗರಸಭೆಯ 28 ವರ್ಷದ ಅಭಿಯಂತರರೊಬ್ಬರು, ಪುತ್ತೂರಿನ ಚಿನ್ನಾಭರಣ ಮಳಿಗೆಯ ೨೬ ವರ್ಷದ ೪ ಮಂದಿ, ೨೩ ವರ್ಷದ ೨ ಮಂದಿ ಸಿಬ್ಬಂದಿಗಳು, ಡಿವೈಎಸ್ಪಿ ಸ್ಕ್ವಾಡ್‌ನ ೪೯ ವರ್ಷದ ಸಿಬ್ಬಂದಿ, ಪುತ್ತೂರು ಪೊಲೀಸ್ ಠಾಣಾ ಸಿಬ್ಬಂದಿಗಳ ವಸತಿ ಗೃಹದಲ್ಲಿರುವ ಅರಣ್ಯ ಸಂಚಾರಿ ದಳದ ಸಿಬ್ಬಂದಿಯೊಬ್ಬರ ೬೩ ವರ್ಷ ಪ್ರಾಯದ ಅವರ ತಂದೆ. ಉರ್ಲಾಂಡಿಯ 20 ವರ್ಷದ ಯುವಕ, ಬಲ್ನಾಡಿನ 50 ವರ್ಷದ ಮಹಿಳೆ, ಕಬಕ ನಿವಾಸಿ ೫೮ ವರ್ಷದ ವ್ಯಕ್ತಿ, ನೆಟ್ಟಣಿಗೆಮುಡ್ನೂರು ಗ್ರಾಮದ ೬೮ ವರ್ಷ ಮತ್ತು ೪೯ ವರ್ಷದ ಮಹಿಳೆಯರಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕಡಬ:
ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮ ನಿವಾಸಿ ೬೫ ವರ್ಷದ ಮಹಿಳೆ, ೧೭ ಹಾಗೂ ೨೯ ವರ್ಷ ವಯಸ್ಸಿನ ಇಬ್ಬರು ಯುವತಿಯರು, ಆಲಂಕಾರು ಗ್ರಾಮದ ೩೦ ಹಾಗೂ ೩೪ ವರ್ಷದ ದಂಪತಿ, ಬಿಳಿನೆಲೆ ಗ್ರಾಮದ ೨೫ ವರ್ಷದ ಯುವಕ ಮತ್ತು ಕುಟ್ರುಪ್ಪಾಡಿ ಗ್ರಾಮದ ೫೪ ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ನಗರಸಭೆ, ಚಿನ್ನಾಭರಣ ಮಳಿಗೆ ಸೀಲ್‌ಡೌನ್:
ಕೊರೋನಾ ಸೋಂಕು ದೃಢಪಟ್ಟ ಕಡೆಗಳಲ್ಲಿ ಸರಕಾರದ ನಿಯಮದಂತೆ ಪುತ್ತೂರು ನಗರಸಭೆ ಕಚೇರಿಯನ್ನು ಜು.25ರ ಮಧ್ಯಾಹ್ನದಿಂದ ಜು. 27ರ ಬೆಳಿಗ್ಗೆಯ ತನಕ ೪೮ ಗಂಟೆ ಅವಧಿಗೆ ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ಪುತ್ತೂರಿನ ಚಿನ್ನಾಭರಣ ಮಳಿಗೆಯನ್ನೂ ಕೂಡಾ ಸೀಲ್‌ಡೌನ್ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.