ಆಲಂಕಾರು: ಕೋರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಮೆಡಿಕಲ್, ಪೆಟ್ರೋಲ್ ಪಂಪು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿದ್ದು ಜನ ಕೂಡ ಪೇಟೆಯಲ್ಲಿ ಇಲ್ಲದೆ ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ, ಕೆಮ್ಮಾರ ಸಂಪೂರ್ಣ ಸ್ತಬ್ದಗೊಂಡಿತ್ತು.
ಆಲಂಕಾರು ಪೇಟೆಯಲ್ಲಿ, ರಾಮಕುಂಜದಲ್ಲಿ, ಕೊಯಿಲ ದಲ್ಲಿ ಕಡಬ ಪೋಲಿಸರು ಬ್ಯಾರಿಕೇಡ್ ಅಳವಡಿಸಿದರು. ಅಗತ್ಯ ವಾಹನಗಳು ಮಾತ್ರ ಓಡಾಟ ನಡೆಸುತ್ತಿತ್ತು.