ಉಪ್ಪಿನಂಗಡಿ: ಈಚೆರ್ ಲಾರಿ, ಬೈಕ್ ಡಿಕ್ಕಿ ಪ್ರಕರಣ: ಮೃತ ಗಣೇಶ್ ಹಿರೇಬಂಡಾಡಿಯ ಹರಿನಗರ ನಿವಾಸಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಮಠ ಎಂಬಲ್ಲಿ ಜು. 25ರಂದು ರಾತ್ರಿ ಈಚೆರ್ ಲಾರಿ ಮತ್ತು ಬೈಕ್ ಡಿಕ್ಕಿ ಘಟನೆಯಲ್ಲಿ ಮೃತಪಟ್ಟಿರುವ ಬೈಕ್ ಸವಾರ ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ನಾರಾಯಣ ಎಂಬವರ ಪುತ್ರ ಗಣೇಶ್ (27 ವ.) ಎಂಬವರಾಗಿರುತ್ತಾರೆ.

ಬೈಕ್ ಸವಾರ ಗಣೇಶ್

ಅಪಘಾತ ನಡೆದ ಸಂದರ್ಭದಲ್ಲಿ ಬಂದ ಪ್ರಥಮ ಮಾಹಿತಿಯಲ್ಲಿ ಗಣೇಶ್ ನಟ್ಟಿಬೈಲ್ ನಿವಾಸಿ ಹೇಳಲಾಗಿ ಅದರಂತೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಗಣೇಶ್‌ರವರು ಉಪ್ಪಿನಂಗಡಿಯಲ್ಲಿ ರಿಕ್ಷಾ ಚಾಲಕರಾಗಿರುತ್ತಾರೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಪುರುಷರಕಟ್ಟೆಯ ನವೀನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಘಟನೆ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.