ಲಾಕ್ಡೌನ್ ವೇಳೆಯೂ ಕಿತ್ತಾಟ! ಬಿಳಿನೆಲೆ: ಅಂಗಡಿಯ ಸಮೀಪ ಶೆಡ್ ನಿರ್ಮಾಣ | ಮಹಿಳೆಯ ಮೇಲೆ ಹಲ್ಲೆ ಆರೋಪ-ಆಸ್ಪತ್ರೆ ದಾಖಲು

Puttur_Advt_NewsUnder_1
Puttur_Advt_NewsUnder_1

ಕಡಬ: ಲಾಕ್ಡೌನ್ ಇದ್ದರೂ ಜನರು ಬೀದಿಗೆ ಬಂದು ಕಿತ್ತಾಟದಲ್ಲಿ ತೊಡಗಿದ್ದಾರೆ. ಬಿಳಿನೆಲೆ ಪೇಟೆಯಲ್ಲಿ ಅಂಗಡಿಯೊಂದರ ಸಮೀಪ ಇನ್ನೊಂದು ಅಂಗಡಿ ನಿರ್ಮಿಸಲು ಶೆಡ್ ನಿರ್ಮಾಣವಾಗಿದ್ದು ಇದನ್ನು ವಿರೋಧಿಸಿದ ಅಂಗಡಿ ಮಾಲಕಿ ಹಾಗೂ ಅವರ ಪುತ್ರನ ಮೇಲೆ ಐವರು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಂಗಡಿ ಮಾಲಕಿ ಅನ್ನಪೂರ್ಣ ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಆಸ್ಪತ್ರೆಗೆ ದಾಖಲಾಗಿರುವ ಅಂಗಡಿ ಮಾಲಕಿ ಅನ್ನಪೂರ್ಣ ಅವರು ಹೇಳಿಕೆ ನೀಡಿ, ನಾವು ಕಳೆದ 30 ವರ್ಷಗಳಿಂದ ಅಂಗಡಿ ವ್ಯಾಪಾರ ಮಾಡುತ್ತಿದ್ದು ಅಂಗಡಿಯ ಹಿಂದುಗಡೆ ನಮ್ಮ ಸ್ವಾಧಿನ ಇರುವ ಜಾಗದಲ್ಲಿ ಮಾಜಿ ತಾ.ಪಂ. ಸದಸ್ಯೆ ಸರೋಜಿನಿ ಜಯಪ್ರಕಾಶ್ ಅವರ ಕುಮ್ಮಕ್ಕಿನಿಂದ ಪ್ರಕಾಶ್, ಸಂದೀಪ್, ಪ್ರೀತಮ್, ಜನ ಕಾರ್ತಿಕ, ದಯಾನಂದ ಸೇರಿದಂತೆ ಇತರರು ಶೆಡ್ ನಿರ್ಮಿಸಿದ್ದು ಅಲ್ಲದೆ. ಆ ಜಾಗದಲ್ಲಿ ಇದ್ದ ಕೊಕ್ಕೊ ಗಿಡ, ತೆಂಗಿನ ಸಸಿ, ಡಿಶ್ ಮೊದಲಾದ ವಸ್ತುಗಳನ್ನು ಹಾನಿಗೊಳಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಸಂದೀಪ್ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.


ಲಾಕ್ಡೌನ್ ಆದೇಶ ಉಲ್ಲಂಘನೆ-ಇತ್ತಂಡಗಳ ವಿರುದ್ದ ಪ್ರಕರಣ ದಾಖಲು ಸಾಧ್ಯತೆ!
ಜು.26ರಂದು ಲಾಕ್ಡೌನ್ ಇದ್ದರೂ ಮನೆಯಿಂದ ಹೊರಬಂದು ಕಿತ್ತಾಟದಲ್ಲಿ ತೊಡಗಿದ್ದ ಇತ್ತಂಡಗಳ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರಸ್ತೆ ಮಾರ್ಜಿನ್ ನಲ್ಲಿಯೇ ಕಟ್ಟಡ ನಿರ್ಮಾಣ !

ಬಿಳಿನೆಲೆಯಲ್ಲಿ ಈಗಾಗಲೇ ಪಂಚಾಯತ್ ಅನುಮತಿ ಪಡೆಯದೆ, ರಾಜರೋಷವಾಗಿ ರಸ್ತೆ ಮಾರ್ಜಿನ್ ನಲ್ಲಿಯೇ ಆರ್.ಸಿ.ಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸರಕಾರಿ ಜಾಗಕ್ಕೋಸ್ಕರ ಕಿತ್ತಾಟ ನಡೆದಿದೆ, ಈಗಾಗಲೇ ಅಕ್ರಮ ಕಟ್ಟಡಗಳ ಬಗ್ಗೆ ಸಂಬಂಧಪಟ್ಟವರಿಗೆ ದೂರು ಸಲ್ಲಿಕೆಯಾಗುವ ಸಾಧ್ಯತೆ ಇದೆ, ಬಿಳಿನೆಲೆ ಪಂಚಾಯತ್ ರಸ್ತೆಯಲ್ಲಿಯೇ ಇಂತಹ ಅಕ್ರಮ ಕಟ್ಟಡಗಳು ತಲೆ ಎತ್ತಿದ್ದರೂ ಪಂಚಾಯತ್ ಮಾತ್ರ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.