ಪ್ರಗತಿಪರ ಕೃಷಿಕ, ಶತಾಯುಷಿ ಬಲ್ಲೇರಿ ಕಾಳಪ್ಪ ಗೌಡ ನಿಧನ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಗ್ರಾಮದ ಬಲ್ಲೇರಿ ನಿವಾಸಿ ಕಾಳಪ್ಪ ಗೌಡ (102ವ.)ರವರು ಜು.26ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಕೃಷ್ಣಮ್ಮ, ಪುತ್ರರಾದ ಮುತ್ತಪ್ಪ ಗೌಡ, ನೂಜಿಬಾಳ್ತಿಲ ಗ್ರಾ.ಪಂ ಮಾಜಿ ಸದಸ್ಯ ತಮ್ಮಯ ಗೌಡ, ಕುಶಾಲಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬಲ್ಲೇರಿ, ಸುಂದರ ಗೌಡ, ನಾರಾಯಣ ಗೌಡ, ಪುತ್ರಿ ಚಂದ್ರಾವತಿ, ಸಹೋದರಿಯರಾದ ಶಿವಮ್ಮ ಹಾಲಪ್ಪ ಪುತ್ತಿಗೆ, ವೀರಮ್ಮ ಕೊರಗಪ್ಪ ಕೊಕ್ಕಡ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.


ಮೃತರ ಮನೆಗೆ ಹಲವರ ಭೇಟಿ:
ಮೃತರ ಮನೆಗೆ ಕಡಬ ಕ್ಷೇತ್ರದ ಜಿ.ಪಂ ಸದಸ್ಯ ಪಿ ಪಿ ವರ್ಗೀಸ್, ನೆಲ್ಯಾಡಿ ಕ್ಷೇತ್ರದ ಜಿ. ಪಂ. ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ ಗೌಡ ಕೈಕುರೆ, ಉಪಾಧ್ಯಕ್ಷ ತೋಮಸ್ ಕೆ.ಜೆ, ನೂಜಿಬಾಳ್ತಿಲ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಿ.ಜೆ. ಸೈಮನ್, ಕಡಬ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಡೆನ್ನಿಸ್ ಫೆರ್ನಾಂಡಿಸ್, ಕಡಬ ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ ನೂಜಿ, ನಿವೃತ್ತ ಪೊಲೀಸ್ ವೆಂಕಟರಮಣ ಪಾಂಗ, ನೂಜಿಬಾಳ್ತಿಲ ತೆಗ್ರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ ಮತ್ತಿತರ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.