Breaking News

ಕುಂಬ್ರದಲ್ಲಿ ಸ್ಥಳಾಂತರಗೊಂಡು ಮಂದಾರ ಸ್ಟುಡಿಯೋ, ಮೊಮೆಂಟೋಸ್, ಆರ್ಟ್ ಸೆಂಟರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವು ವರ್ಷಗಳಿಂದ ಕುಂಬ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಂದರ್ ರೈ ಮಂದಾರ ಮಾಲಕತ್ವದ ಮಂದಾರ ಸ್ಟುಡಿಯೋ ಸ್ಥಳಾಂತರಗೊಂಡು ಸ್ವಂತ ಕಟ್ಟಡ ಮಂದಾರ ಸಂಕೀರ್ಣದಲ್ಲಿ ಜು.27ರಂದು ಬೆಳಿಗ್ಗೆ ಶುಭಾರಂಭಗೊಂಡಿತು.

ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ರಿಬ್ಬನ್ ತುಂಡರಿಸುವ ಮೂಲಕ ಸ್ಟುಡಿಯೋ ಉದ್ಘಾಟಿಸಿ ಶುಭ ಹಾರೈಸಿದರು. ಸುಂದರ ರೈ ಮಂದಾರರವರ ತಾಯಿ ಲಲಿತಾ ರೈಯವರು ದೀಪ ಬೆಳಗಿಸಿ ಆಶೀರ್ವದಿಸಿದರು. ಪಂಚಮಿ ಗ್ರೂಪ್ಸ್‌ನ ಮಿತ್ರಂಪಾಡಿ ಪುರಂದರ ರೈ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಪುತ್ತೂರು ತಾಲೂಕು ಮುಸ್ಲೀಂ ಜಮಾಅತ್ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಅಮೇಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಉದ್ಯಮಿ ಅಜಿತ್ ಕುಮಾರ್ ಶೆಟ್ಟಿ ಮೇರ್ಲ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜೇಶ್ ರೈ ಪರ್ಪುಂಜ, ರತನ್ ರೈ ಕುಂಬ್ರ, ಅರುಣ್ ರೈ ಬಿಜಳ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಗ್ರಾಹಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮಾಲಕರಾದ ಸುಂದರ್ ರೈ ಮಂದಾರ ಹಾಗೂ ಮಂದಾರ ಬಳಗದವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ ಸಹಕಾರ ಕೋರಿದರು.

ವೇಷಭೂಷಣ/ಮೊಮೆಂಟೋಸ್ ಲಭ್ಯ
ಮಂದಾರ ಸ್ಟುಡಿಯೋ ಒಂದು ಸಂಪೂರ್ಣ ಆರ್ಟ್ ಸೆಂಟರ್ ಆಗಿದ್ದು ಕಲಾವಿದರಿಗೆ ಬೇಕಾಗುವ ಹೆಚ್ಚಿನ ಎಲ್ಲಾ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ. ಮುಖ್ಯವಾಗಿ ಯಕ್ಷಗಾನ, ನಾಟಕಕ್ಕೆ ಬೇಕಾದ ವೇಷಭೂಷಣಗಳು ಲಭ್ಯವಿದೆ. ಇದಲ್ಲದೆ ಸನ್ಮಾನ, ಅಭಿನಂದನಾ ಸಮಾರಂಭಕ್ಕೆ ಬೇಕಾದ ಎಲ್ಲಾ ಬಗೆಯ ನವನವೀನ ಮೊಮೆಂಟೋಸ್,ಸನ್ಮಾನ ಕಿಟ್,ಶಾಲು,ಹಾರ ಇತ್ಯಾದಿಗಳು ಲಭ್ಯ ಅಲ್ಲದೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಿಸಿ ಕೊಡುವ ವ್ಯವಸ್ಥೆಯೂ ಇದೆ.

ನಾಟಕ, ಸಿನಿಮಾ ತರಬೇತಿ
ಸುಂದರ್ ರೈ ಮಂದಾರರವರು ಕಳೆದ ಹಲವು ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ, ಸಿನಿಮಾ ನಟ, ನಿದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡವರು. ಇವರ ಮಾಲಕತ್ವದಲ್ಲಿ ಮಂದಾರ ಸ್ಟುಡಿಯೋ ನಡೆಸಲ್ಪಡುವುದರಿಂದ ಕಲಾವಿದರ ನಾಡಿಮಿಡಿತವನ್ನು ಬಳ್ಳವರಾಗಿದ್ದಾರೆ. ನಾಟಕ,ಸಿನಿಮಾ ಕಲಾವಿದರಾಗಲು ಹಂಬಲಿಸುತ್ತಿರುವವರಿಗೆ ಮಂದಾರ ಸ್ಟುಡಿಯೋ ಅವಕಾಶ ಕಲ್ಪಿಸಲಾಗುತ್ತಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಯಕ್ಷಗಾನ,ನಾಟಕ ಮತ್ತು ಸಿನಿಮಾ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೮೦೨೦೨೩೦೮ ಗೆ ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.