ಒಳಮೊಗ್ರು , ಕೆದಂಬಾಡಿ ಗ್ರಾಮಗಳ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ | ತಾತ್ಕಾಲಿಕವಾಗಿ ಮುಂದೂಡುವಂತೆ ಅಧಿಕಾರಿಗಳಿಗೆ ಶಾಸಕರ ಸೂಚನೆ

Puttur_Advt_NewsUnder_1
Puttur_Advt_NewsUnder_1
  • ಬಿಜೆಪಿ ಮನವಿಗೆ ಸ್ಪಂದಿಸಿದ ಶಾಸಕರು

ಪುತ್ತೂರು: ಕೆದಂಬಾಡಿ ಮತ್ತು ಒಳಮೊಗ್ರು ಗ್ರಾಮ ವ್ಯಾಪ್ತಿಯಲ್ಲಿರುವ ಅನಧಿಕೃತ ಕಟ್ಟಡವನ್ನು ತೆರವು ಮಾಡುವಂತೆ ಗ್ರಾಪಂಗಳು ಅಂಗಡಿಮಾಲಕರಿಗೆ ನೊಟೀಸ್ ಜಾರಿ ಮಾಡಿದ್ದು ಜು. ೩೧ ರೊಳಗೆ ಅಂಗಡಿ ತೆರವು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಅಧಿಕಾರಿಗಳ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪುತ್ತೂರು ಶಾಸಕರಿಗೆ ಮನವಿ ಮಾಡಲಾಗಿದ್ದು ಶಾಸಕರು ಕೂಡಲೇ ಸ್ಪಂದಿಸಿದ್ದು ತೆರವು ಮುಂದೂಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.


ಕೊರೊನಾ ಕಾರಣಕ್ಕೆ ವ್ಯಾಪಾರಸ್ಥರು ಕಂಗಾಲಾಗಿದ್ದು ಈ ವೇಳೆ ಅನಧಿಕೃತ ಅಂಗಡಿ ಎಂದು ತೆರವು ಮಾಡಿದರೆ ವ್ಯಾಪಾರಿಗಳು ಇನ್ನಷ್ಟು ತೊಂದರೆಗೆ ಒಳಗಾಗುತ್ತಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ವ್ಯಾಪಾರದಲ್ಲಿಯೇ ಜೀವನ ನಡೆಸಬೇಕಾಗಿರುವುದರಿಂದ ಬದಲಿ ವ್ಯವಸ್ಥೆ ಆಗುವವರೆಗೆ ತತ್ಕಾಲಿಕವಾಗಿ ತೆರವು ಕಾರ್ಯಚರಣೆಯನ್ನು ಮುಂದೂಡಬೇಕೆಂದು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಇಲಾಖೆಗೆ ಸೂಚನೆಯನ್ನು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿ.ಜೆ.ಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಹಾಗೂ ಪುರುಷೋತ್ತಮ ಮುಂಗ್ಲಿಮನೆ,ನೆಟ್ಟಣಿಗೆ ಮುಡ್ನರೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯ ಕುಮಾರ್ ರೈ ಕೋರಂಗ, ತಾಲೂಕು ಪಂಚಾಯತ್ ಸದಸ್ಯರಾದ ಹರೀಶ್ ಬಿಜತ್ರೆ, ಬಿ.ಜೆ.ಪಿ ಯುವಮೋರ್ಚಾ ಮಂಡಲ ಪ್ರದಾನ ಕಾರ್ಯದರ್ಶಿ ರತನ್ ರೈ ಕುಂಬ್ರ,ಬಿ.ಜೆ.ಪಿ ಕೆದಂಬಾಡಿ ಶಕ್ತಿ ಕೇಂದ್ರ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ,ಬಿ.ಜೆ.ಪಿ ಒಳಮೊಗ್ರು ಶಕ್ತಿ ಪ್ರಮುಖ್ ರಾಜೇಶ್ ರೈ ಪರ್ಪುಂಜ,ಸಹಕಾರಿ ಭಾರತಿ ಅಧ್ಯಕ್ಷರಾದ ಕೃಷ್ಣ ಕುಮಾರ ರೈ ಗುತ್ತು,ಸುಭಾಶ್ ರೈ ಕುರಿಕ್ಕಾರ, ಹರಿಪ್ರಸಾದ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.

ನಿಟ್ಟುಸಿರು ಬಿಟ್ಟ ಅಂಗಡಿಮಾಲಕರು
ಜುಲೈ 31 ರೊಳಗೆ ಅಂಗಡಿಯನ್ನು ತೆರವು ಮಾಡಬೇಕೆಂದು ಗ್ರಾಪಂ ನೊಟೀಸ್ ನೀಡಿದ್ದ ಕಾರಣ ರಸ್ತೆ ಬದಿಗಳಲ್ಲಿ ಅನಧಿಕೃತ ಅಂಗಡಿಯನ್ನಿಟ್ಟು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದರು. ಏನು ಮಾಡಬೇಕು ಯಾರಲ್ಲಿ ತಮ್ಮ ನೋವನ್ನು ಹೇಳಿಕೊಳ್ಳಬೆಕೆಂಬ ಸಂಕಷ್ಟದಲ್ಲಿದ್ದರು. ಇವರ ಸ್ಥಿತಿಯನ್ನು ಕಂಡ ಬಿಜೆಪಿ ಶಕ್ತಿ ಕೇಂದ್ರದ ಮುಖಂಡರು ಕಾರ್ಯಾಚರಣೆಯನ್ನು ತಕ್ಷಣಕ್ಕೆ ಮುಂದೂಡಿ ಬದಲಿ ವ್ಯವಸ್ಥೆ ಆಗುವ ತನಕ ಕಾರ್ಯಚರಣೆ ಮಾಡಬಾರದೆಂದು ಮನವಿಯನ್ನು ಮಾಡಿದ್ದಾರೆ. ಶಾಸಕರ ಸೂಚನೆಯಿಂದ ಅಂಗಡಿ ಮಾಲಕರು ನಿಟ್ಟುಸಿರುಬಿಡುವಂತಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.