ಕುಟ್ರುಪಾಡಿ, ಎಡಮಂಗಲ ಗ್ರಾ.ಪಂ. ಜಂಟಿ ಕೋವಿಡ್ ಕಾರ‍್ಯಪಡೆ ಸಭೆ | ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸಲು ನಿರ್ಣಯ

Puttur_Advt_NewsUnder_1
Puttur_Advt_NewsUnder_1

ಕಡಬ: ಇನ್ನು ಮುಂದೆ ಗ್ರಾಮಸ್ಥರು ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಕೋವಿಡ್ ಕಾರ‍್ಯಪಡೆಯಿಂದ ದಂಡ ವಿಧಿಸುವ ಬಗ್ಗೆ ನಿರ್ಣಯ ಕೈಗೊಂಡ ಘಟನೆ ಜು.27ರಂದು ಕುಟ್ರುಪಾಡಿಯಲ್ಲಿ ನಡೆದಿದೆ.


ಕುಟ್ರುಪಾಡಿ ಗ್ರಾ.ಪಂ. ಹಾಗೂ ಎಡಮಂಗಲ ಗ್ರಾಮ ಪಂಚಾಯತ್ ಜಂಟಿಯಾಗಿ ಆಯೋಜನೆ ಮಾಡಿದ್ದ ಕೋವಿಡ್ ಕಾರ‍್ಯಪಡೆಯ ಸಭೆಯು ಕುಟ್ರುಪಾಡಿ ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ಜು.27ರಂದು ನಡೆಯಿತು. ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎಡಮಂಗಲ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ದಾಮೋಧರ, ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯರಾದ ಗಣೇಶ್ ಕೈಕುರೆ, ಕೆ.ಟಿ.ವಲ್ಸಮ್ಮ, ಕಡಬ ಎಸ್.ಐ. ರುಕ್ಮ ನಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಆರೋಗ್ಯ ಸಹಾಯಕಿಯರಾದ ರಾಜೇಶ್ವರಿ ಎನ್.ವಿ, ಆನ್ಸಿ ತೋಮಸ್, ಕೆ.ಕೆ.ವಿಮಲ, ಗ್ರಾಮ ಕರಣಿಕ ರಂಜನ್, ಎಡಮಂಗಲ ಆಶಾ ಕಾರ‍್ಯಕರ್ತೆಯರ ಮೇಲ್ವಿಚಾರಕಿ ವಿಜಯ, ಕುಟ್ರುಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿದ್ಯಾ ಕೆ. ಗೋಗಟೆ, ಮಾಜಿ ಉಪಾಧ್ಯಕ್ಷ ಆನಂದಪೂಜಾರಿ, ಮಾಜಿ ಸದಸ್ಯರಾದ ಮಹಮ್ಮದಾಲಿ ಹೊಸ್ಮಠ, ತನಿಯ ಸಂಪಡ್ಕ, ಜಾನಕಿ ಪಟ್ಟೆ, ಶಿವಪ್ರಸಾದ್ ಪುತ್ತಿಲ, ಲಿಂಗಪ್ಪ ಗೌಡ, ಸೂಸಮ್ಮ ಮತ್ತಾಯಿ, ಎಡಮಂಗಲ ಪಂಚಾಯತ್ ಕಾರ‍್ಯಪಡೆಯ ಗೋಪಿನಾಥ್,ಡಿ, ಗಿರಿಚಂದ್ರ ಉಪಸ್ಥಿತರಿದ್ದರು. ಕಡಬ ಕಂದಾಯ ಕಛೇರಿ ಸಿಬ್ಬಂದಿ ಗ್ರಾಮ ಕರಣಿಕ ರಮೇಶ್ ಕೋವಿಡ್ ಕಾರ್ಯಪಡೆಯ ಜವಾಬ್ದಾರಿಗಳು ಹಾಗೂ ಅದರ ನಿರ್ವಹಣೆ ಬಗ್ಗೆ ಸರಕಾರದ ಆದೇಶವನ್ನು ವಿವರಿಸಿದರು. ಕುಟ್ರುಪಾಡಿ ಗ್ರಾ,ಪಂ. ಅಭಿವೃದ್ದಿ ಅಧಿಕಾರಿ ವಿಲ್ಪೈಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ವಂದಿಸಿ ಕಾರ‍್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿಗಳಾದ ಅಂಗು, ಜಿತೇಶ್, ತಾರಾನಾಥ, ಉಮೇಶ್ ಸಹಕರಿಸಿದರು.
ಕಾರ‍್ಯಪಡೆ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
ಕಾರ‍್ಯಪಡೆಯ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇನ್ನು ಮುಂದೆ ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವ ಬಗ್ಗೆ ನಿರ್ಣಯಿಸಲಾಯಿತು, ಅಲ್ಲದೆ ಯಾವುದೇ ಮನೆಯಲ್ಲಿ ಕಾರ‍್ಯಕ್ರಮ ನಡೆಯುತ್ತಿದ್ದರೆ ಅಲ್ಲಿಗೆ ಕಾರ‍್ಯಪಡೆಯ ಸದಸ್ಯರನ್ನು ನಿಯೋಜನೆ ಮಾಡಿ ಅಲ್ಲಿ ಕಾನೂನು ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ, ಗ್ರಾಮದ ಪ್ರತಿ ವಾರ್ಡಿಗೂ ಕಾರ‍್ಯಪಡೆಯ ಸದಸ್ಯರು ಅಥಾವ ಕೋವಿಡ್ ಕಾರ‍್ಯಪಡೆಯಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಇರುವವರಿಗೆ ಜವಾಬ್ದಾರಿ ನೀಡುವ ಬಗ್ಗೆ ಜಿ.ಪಂ. ಸದಸ್ಯರಾದ ಪಿ.ಪಿ.ವಗೀಸ್, ಸರ್ವೋತ್ತಮ ಗೌಡ ಒತ್ತಾಯಿಸಿದರು. ಅಲ್ಲದೆ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿ ಸ್ಯಾನಿಟೈಸರ್ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ ಅಂತವರ ವ್ಯಾಪಾರ ಪರವಾನಿಗೆಯನ್ನು ರದ್ದು ಮಾಡುವ ಬಗ್ಗೆಯೂ ನಿರ್ಣಯಿಸಲಾಯಿತು. ಲಾಕ್ ಡೌನ್ ಇರುವಾಗ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕು, ಸಾರ್ವಜನಿಕ ಸಂಚಾರವನ್ನು ನಿಷೇಧಿಸಬೇಕು, ಕ್ವಾರಂಟೈನ್‌ನಲ್ಲಿರುವವರ ಯೋಗಕ್ಷೇಮವನ್ನು ತಿಳಿದುಕೊಂಡು ಅಗತ್ಯ ಇದ್ದವರಿಗೆ ಸಹಾಯ ಮಾಡಬೇಕು ಎಂಬ ಆಗ್ರಹಗಳು ಕೇಳಿ ಬಂತು.
ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಾಯಕಿ ರಾಜೇಶ್ವರಿ ಎನ್,ವಿ ಮಾಹಿತಿ ನೀಡಿ, ಕುಟ್ರುಪಾಡಿ ಗ್ರಾಮದಲ್ಲಿ ಒಟ್ಟು ೧೦ ಪ್ರಕರಣಗಳು ದಾಖಲಾಗಿದ್ದು ಈಗಾಗಲೇ ಆಸ್ಪತ್ರೆಯಲ್ಲಿ ಓರ್ವ ಕೋರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ೫ ಮಂದಿ ಅವರವರ ಮನೆಯಲ್ಲಿಯೇ ಇರುವ ವ್ಯವಸ್ಥೆ ಮಾಡಲಾಗಿದೆ, ಉಳಿದ ನಾಲ್ಕು ಮಂದಿ ಗುಣಮುಖರಾಗಿದ್ದಾರೆ ಎಂದು ಹೇಳಿದರು. ಬಲ್ಯ ಆರೋಗ್ಯ ಸಹಾಯಕಿ ಆನ್ಸಿ ತೋಮಸ್ ಅವರು ಮಾಹಿತಿ ನೀಡಿ ಬಲ್ಯ ಪ್ರದೇಶದಲ್ಲಿ ಒಂದು ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ಹೇಳಿದರು, ಎಡಮಂಗಲದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಸಹಾಯಕಿ ಕೆ.ಕೆ.ವಿಮಲ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.