Breaking News

‘ಕೊರೊನಾ’ ರಜೆಯ ಸಾರ್ಥಕತೆ | ಮಣಿಕ್ಕಳದ ಮಣ್ಣಿನ ರಸ್ತೆಗೆ ಯುವಕರಿಂದ ಕಾಯಕಲ್ಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಮಳೆಗಾಲದ ದಿನಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅವ್ಯವಸ್ಥೆಯಿಂದ ಹಳ್ಳಿಗಳಲ್ಲಿ ಮಂದಿ ಸಂಚಾರ ಮಾಡುವುದೇ ಕಷ್ಟದಾಯಕ. ಇದರಲ್ಲೂ ಮಣ್ಣಿನ ರಸ್ತೆಗಳ ಕಥೆ ಕೇಳುವುದೇ ಬೇಡ. ಕೆಸರಕೊಚ್ಚೆಯಾಗಿ ಸಂಚಾರ ಸಾಧ್ಯವೇ ಇಲ್ಲದಂತಹ ಸ್ಥಿತಿ. ಇಂತಹ ರಸ್ತೆಗಳನ್ನು ದುರಸ್ಥಿ ಮಾಡುವ ಕೆಲಸ ಇಲಾಖೆಗಳಿಂದ ನಡೆಯುತ್ತಿಲ್ಲ. ಸ್ಥಳೀಯಾಡಳಿತಗಳೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಇದೀಗ ಕೊರೊನಾ ಸಮಸ್ಯೆಯಿಂದಾಗಿ ಮನೆಗಳಲ್ಲಿಯೇ ಉಳಿದಿರುವ ಯುವಕರೇ ಸೇರಿಕೊಂಡು ‘ನಮ್ಮ ರಸ್ತೆ-ನಮ್ಮ ದುರಸ್ಥಿ’ ಎಂಬಂತೆ ರಸ್ತೆ ಸಮರ್ಪಕಗೊಳಿಸುವ ಕಾಯಕಕ್ಕೆ ಮುಂದಾಗಿದ್ದಾರೆ.


ಬಜತ್ತೂರು ಗ್ರಾಮದ ಪೆರಿಯಡ್ಕದಿಂದ ಮಣಿಕ್ಕಳ ಬೈಲಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಕೆಲ ಭಾಗದಲ್ಲಿ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಪ್ರಸ್ತುತ ಮಳೆಗಾಲವೂ ಆದ ಹಿನ್ನಲೆಯಲ್ಲಿ ಇಲಾಖೆಗಳು ಈ ರಸ್ತೆಯ ದುರಸ್ಥಿ ಮಾಡುವುದಿಲ್ಲ. ಆದರೆ ದಿನನಿತ್ಯ ಈ ರಸ್ತೆಯಿಂದಲೇ ಓಡಾಡಬೇಕಾದ ಅನಿವಾರ್ಯತೆ. ಈ ನಿಟ್ಟಿನಲ್ಲಿ ಮಣಿಕ್ಕಳ ಬೈಲಿನ ಯುವಕರು ಸೇರಿಕೊಂಡು ರಸ್ತೆ ದುರಸ್ಥಿ ನಡೆಸಿದರು. ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ, ಕೊರೊನಾ ಹಿನ್ನಲೆಯಲ್ಲಿ ಇದೀಗ ಮನೆಯಲ್ಲಿಯೇ ಇರುವ ಯೋಗೀಶ್ ಆಲಾಜೆ, ದಿನೇಶ್, ತೇಜನ್, ಡೀಕಯ್ಯ ಓಮಂದೂರು ಮೊದಲಾದ ಯುವಕರು ಸ್ಥಳೀಯರಾದ ಜಗದೀಶ್ ರಾವ್, ರುಕ್ಮಯ್ಯ ಗೌಡ ಓಮಂದೂರು, ಸೇಸಪ್ಪ ಗೌಡ ಆಲಾಜೆ, ರಿಕ್ಷಾ ಚಾಲಕ ಚೆನ್ನಪ್ಪ ಗೌಡ, ವಿದ್ಯಾರ್ಥಿಗಳಾದ ಹರಿಪ್ರಸಾದ್, ಸೋನಿತ್ ಸೇರಿಕೊಂಡು ರಸ್ತೆ ದುರಸ್ಥಿಗೊಳಿಸುವ ಕೆಲಸ ನಡೆಸಿದರು. ತಮ್ಮೂರಿಗೆ ಹೋಗುವ ರಸ್ತೆಯನ್ನು ಸಮರ್ಪಕಗೊಳಿಸುವ ಮೂಲಕ ಕೊರೊನಾ ರಜೆಯನ್ನು ಸಾರ್ಥಕಗೊಳಿಸಿದ್ದಾರೆ. ಮಣಿಕ್ಕಳ ಬೈಲನ್ನು ಸಂಪರ್ಕಿಸುವ ಮಣ್ಣಿನರಸ್ತೆ ವಿವಿಧ ಭಾಗದಲ್ಲಿ ರಸ್ತೆ ದುರಸ್ಥಿ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.