ಅಮೇರಿಕಾದ ಸರ್ಜಿಕಲ್ ಸಮ್ಮೇಳನಕ್ಕೆ ಧನ್ವಂತರಿ ಆಸ್ಪತ್ರೆಯ ಡಾ.ವಿವೇಕ್ ಕಜೆಗೆ ಆಹ್ವಾನ

Puttur_Advt_NewsUnder_1
Puttur_Advt_NewsUnder_1
  • ಜಟಿಲ ಸಮಸ್ಯೆಯಿದ್ದರೂ ವೃದ್ಧೆಗೆ ಯಶಸ್ವಿ ಲ್ಯಾಪರೋಸ್ಕೋಪಿಕ್ ಹರ್ನಿಯಾ ಶಸ್ತ್ರಚಿಕಿತ್ಸೆ
  • ಭಾರತದ ಆರೋಗ್ಯ ಚಿಕಿತ್ಸೆಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸುವ ಸದವಕಾಶ

ಪುತ್ತೂರು: ವಿಶ್ವದ ಯಾವುದೇ ಮೂಲೆಯಲ್ಲಿರುವ ವೈದ್ಯರಿಗೆ ಹೋಲಿಸಿದರೆ ಭಾರತೀಯ ವೈದ್ಯರು ಹೆಚ್ಚು ಪ್ರತಿಭಾವಂತರು ಮತ್ತು ಸಮರ್ಥರು.ಇದಕ್ಕೆ ಮಾದರಿಯಾಗಿ ಪುತ್ತೂರಿನ ಯುವ ವೈದ್ಯರೊಬ್ಬರು ವೃದ್ಧೆಯೋರ್ವರಿಗೆ ಜಟಿಲ ಸಮಸ್ಯೆಯಿದ್ದರೂ ಯಶಸ್ವಿಯಾಗಿ ನಡೆಸಿದ ಲ್ಯಾಪರೋಸ್ಕೋಪಿಕ್ ಹರ್ನಿಯಾ ಚಿಕಿತ್ಸೆಯ ಕಾರ್ಯವಿಧಾನವನ್ನು ಅಮೇರಿಕಾದ ವೈದ್ಯರ ಸಂಘ ಗುರುತಿಸಿರುವುದಲ್ಲದೆ ಆಗಸ್ಟ್ ತಿಂಗಳಲ್ಲಿ ಅಮೇರಿಕಾದಲ್ಲಿ ನಡೆಯುವ ವಿಶ್ವಮಟ್ಟದ ಸರ್ಜಿಕಲ್ ಸಮ್ಮೇಳನಕ್ಕೆ ವೈದ್ಯರನ್ನು ಆಹ್ವಾನಿಸಿದೆ.

ಇಲ್ಲಿನ ಧನ್ವಂತರಿ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ತಜ್ಞ ವೈದ್ಯ ಡಾ.ವಿವೇಕ್ ಕಜೆ ಅವರು ನಡೆಸಿದ ಲ್ಯಾಪರೋಸ್ಕೋಪಿಕ್ ಹರ್ನಿಯಾ ಚಿಕಿತ್ಸೆಯ ಕಾರ್ಯವಿಧಾನವನ್ನು ಅಮೇರಿಕಾದ ಸೊಸೈಟಿ ಆಫ್ ಲ್ಯಾಪರೋಸ್ಕೋಪಿಕ್ ಮತ್ತು ರೋಬೋಟಿಕ್ ಸರ್ಜನ್ಸ್ (ಎಸ್.ಎಲ್.ಎಸ್) ಸಂಘವು, ಆಗಸ್ಟ್ ತಿಂಗಳ ೨೬ ಮತ್ತು ೨೭ರಂದು ಅಮೇರಿಕಾದಲ್ಲಿ ವಿಶ್ವಮಟ್ಟದಲ್ಲಿ ನಡೆಯುವ ವಾರ್ಷಿಕ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲು ಡಾ.ವಿವೇಕ್ ಕಜೆ ಅವರನ್ನು ಆಹ್ವಾನಿಸಿದೆ.
77 ವರ್ಷ ಪ್ರಾಯದ ವೃದ್ಧೆಯೊಬ್ಬರು ಯಕೃತ್ ವೈಫಲ್ಯ (cirrhosis of liver)ದಿಂದ ಬಳಲುತ್ತಿದ್ದುದಲ್ಲದೆ ಹೊಕ್ಕಳಿನ ಸಂಕೀರ್ಣ ಹರ್ನಿಯಾ (irreducible hernia) ಸಮಸ್ಯೆಯಿಂದ ಬಳಲುತ್ತಿದ್ದರು. ಇಂತಹ ಒಂದು ಸಂಕೀರ್ಣವಾದ ಸಮಸ್ಯೆಯನ್ನು ಡಾ.ವಿವೇಕ್ ಕಜೆ ಅವರು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಪರಿಹರಿಸಿದ್ದರು.ಕಳೆದ ದಶಂಬರ್‌ನಲ್ಲಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು.
ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸುವಲ್ಲಿ ಭಾರತೀಯ ವೈದ್ಯರಿಗಿರುವ ಜ್ಞಾನ, ಜಾಣ್ಮೆ ಬೇರೆಯವರಿಗಿಲ್ಲ.ವಿಶ್ವದ ಯಾವುದೇ ರಾಷ್ಟ್ರಕ್ಕೆ ಹೋದರೂ ಭಾರತೀಯ ವೈದ್ಯರಿಗೆ ಗೌರವ ಇದೆ. ವೃದ್ಧಾಪ್ಯ, ಲಿವರ್ ಕಾಯಿಲೆ ಮತ್ತು ಹರ್ನಿಯಾದ ಆಪತ್ಕಾಲೀನ ಸ್ಥಿತಿ ಇಂತಹ ಜಟಿಲ ಸಮಸ್ಯೆಗಳನ್ನು ಪಕ್ವವಾಗಿ ನಿಭಾಯಿಸಿದ ವಿಧಾನವನ್ನು ಗುರುತಿಸಿದ ಅಮೇರಿಕಾದ ವೈದ್ಯರ ಸಂಘವು, ತಮ್ಮ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲು ಡಾ.ವಿವೇಕ್ ಕಜೆಯವರಿಗೆ ಆಹ್ವಾನ ನೀಡಿದೆ.ಈ ಸಮ್ಮೇಳನಲ್ಲಿ ವಿಶ್ವದ ಅನೇಕ ಪ್ರತಿಭಾವಂತ ಶಸ್ತ್ರಚಿಕಿತ್ಸಕರು ಉಪಸ್ಥಿತರಿರಲಿದ್ದು, ಅವರೆಲ್ಲರ ಸಮ್ಮುಖದಲ್ಲಿ ನಮ್ಮ ಭಾರತ ದೇಶದ ಆರೋಗ್ಯ ಚಿಕಿತ್ಸಾ ಸ್ತರವನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸುವ ಒಂದು ಸದವಕಾಶವು ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಮೂಲಕ ಲಭಿಸಿರುವುದು ದೇಶಕ್ಕೆ ಹೆಮ್ಮೆಯ ವಿಚಾರ. ಡಾ.ವಿವೇಕ್ ಕಜೆ ಅವರು ಧನ್ವಂತರಿ ಆಸ್ಪತ್ರೆಯ ಡಾ. ಕೆ.ರವೀಂದ್ರ ಅವರ ಪುತ್ರ. ಆಸ್ಪತ್ರೆಯ ಡಾ.ಕೆ.ಚಂದ್ರಶೇಖರ್, ಡಾ.ಕೆ.ರವಿಪ್ರಕಾಶ್ ಅವರು ತಮ್ಮ ಸಹೋದರನ ಪುತ್ರನ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.