ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ| ಮಹೇಶ್ ಪ್ರಸನ್ನ | ಸ್ಥಳೀಯ ಅವಶ್ಯಕತೆ ಕಡೆಗೆ ಫೋಕಸ್-ಡಾ| ಮಹೇಶ್ ಪ್ರಸನ್ನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅದೇ ಕಾಲೇಜಿನಲ್ಲಿ ೬ ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿದ್ದ ಮೂಲತಃ ಪಾಣಾಜೆಯ ಡಾ. ಮಹೇಶ್ ಪ್ರಸನ್ನರವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ಹಿಂದೆ ಪ್ರಾಂಶುಪಾಲರಾಗಿದ್ದ ಡಾ. ಎಂ.ಎಸ್. ಗೋವಿಂದೇ ಗೌಡರ ತೆರವಾದ ಸ್ಥಾನಕ್ಕೆ ಕಾಲೇಜಿನ ಆಡಳಿತ ಮಂಡಳಿ ಡಾ. ಪ್ರಸನ್ನರವರನ್ನು ನಾಮ ನಿರ್ದೇಶಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.


ಪಾಣಾಜೆ ಗ್ರಾಮದ ಕುರಿಯತ್ತಡ್ಕ ಗೋಪಾಲಕೃಷ್ಣ ಶಾಸ್ತ್ರಿ ಮತ್ತು ಸುಶೀಲಾ ದಂಪತಿ ಪುತ್ರರಾಗಿರುವ ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಅಳಿಕೆ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದ್ದು, ಪಿಯುಸಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿ, ಬಿ.ಇ. ಇಂಜಿನಿಯರಿಂಗ್ ಪದವಿಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ್ತು ಎಂ.ಟೆಕ್. ಸ್ನಾತಕೋತ್ತರ ಶಿಕ್ಷಣವನ್ನು ಕಾರ್ಕಳ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದ್ದಾರೆ. ಬಳಿಕ ಪಿ.ಎಚ್‌ಡಿ ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರೋನಿಕ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ಪಡೆದಿರುತ್ತಾರೆ. ೬ ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕದ ೧೫ ವರ್ಷಗಳಿಂದ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತುಮಕೂರಿನ ಸಿದ್ದಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ೩ ವರ್ಷ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 7 ವರ್ಷಗಳ ಕಾಲ ಎಲೆಕ್ಟ್ರೋನಿಕ್ಸ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ವಿಶೇಷವಾಗಿ ಮೈಕ್ರೋಸಾಫ್ಟ್ ಕಂಪೆನಿಯ ‘ಸರ್ಟಿಫೈಡ್ ಸೊಲ್ಯೂಷನ್ ಡೆವಲಪ್ಪರ್’ ಆಗಿಯೂ ಪ್ರಮಾಣೀಕರಿಸಲ್ಪಟ್ಟಿದ್ದಾರೆ.

 

…………………………………………………………………..

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾದ ಡಾ| ಮಹೇಶ್ ಪ್ರಸನ್ನ ಜೊತೆ ಸಂದರ್ಶನ ಇಲ್ಲಿದೆ.

ಸಂದರ್ಶನ – ಉಮೇಶ್ ಮಿತ್ತಡ್ಕ

ಕೋವಿಡ್ 19 ವಿಷಮ ಪರಿಸ್ಥಿತಿಯಲ್ಲಿ ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಕಂಡಿರುವ ಹಿನ್ನೆಲೆಯಲ್ಲಿ ಮತ್ತು ಭವಿಷ್ಯದಲ್ಲಿ ಇಂಜಿನಿಯರಿಂಗ್ ಶಿಕ್ಷಣದಲ್ಲಿನ ಸಂಭಾವ್ಯ ಬದಲಾವಣೆಯ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾಗಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನರವರನ್ನು ‘ಸುದ್ದಿ’ ಸಂದರ್ಶನ ಮಾಡಿದೆ. ಅವರ ಸಂದರ್ಶನದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಸಂ: ಕೋವಿಡ್ ೧೯ ನಂತಹ ವಿಷಮ ಪರಿಸ್ಥಿತಿಯ ವೇಳೆ ನೂತನ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತೀರಿ ?
ಡಾ| : ಇದೇ ಕಾಲೇಜಿನಲ್ಲಿ 6 ವರ್ಷಗಳಿಂದ ಎಚ್‌ಒಡಿ ಆಗಿದ್ದೇನೆ. ಎನ್‌ಬಿಎ ಮಾನ್ಯತೆಯ ಸಂದರ್ಭದಲ್ಲಿ ಸಂಯೋಜಕನಾಗಿ ಸೇರಿದಂತೆ ಕಾಲೇಜಿನ ಬೇರೆ ಬೇರೆ ಸಂದರ್ಭದಲ್ಲಿ ಆಡಳಿತಾತ್ಮಕವಾಗಿಯೂ ಅನುಭವ ಗಳಿಸಿಕೊಂಡ ಪರಿಣಾಮ ಕೋವಿಡ್ ೧೯ ಪರಿಸ್ಥಿತಿ ನನಗೆ ಬಿಕ್ಕಟ್ಟಿನ ಪರಿಸ್ಥಿತಿ ಅಂತ ಗೋಚರಿಸಿಲ್ಲ. ಎಲ್ಲವೂ ಯೋಜನೆಯ ಪ್ರಕಾರ ನಡೆಯುವುದರಿಂದ ಪ್ರಾಧ್ಯಾಪಕರು, ಸಿಬಂದಿಗಳು ಮತ್ತು ಮಕ್ಕಳ ಸಹಕಾರದಿಂದಾಗಿ ಉತ್ತಮವಾಗಿ ನಡೆಸಿಕೊಂಡಲು ಹೋಗಲು ಸಾಧ್ಯವಾಗುತ್ತಿದೆ.
ಸಂ: ಆನ್‌ಲೈನ್ ತರಗತಿಗಳನ್ನು ಯಾವ ರೀತಿಯಲ್ಲಿ ನಡೆಸುತ್ತಿದ್ದೀರಿ ?
ಡಾ| : ಯೂನಿವರ್ಸಿಟಿ ನೀಡಿರುವ ಸಿಲೇಬಸ್ ಪ್ರಕಾರ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದೇವೆ. ಆದರೆ ನಮ್ಮಲ್ಲಿ ವಿಶೇಷವಾಗಿ ಯಾವುದೇ ಚೀನಿ ಆಪ್ ಬಳಸದೇ ನಮ್ಮದೇ ಆದ ಮೈಕ್ರೋಸಾಫ್ಟ್ ಟೀಮ್ ಆಪ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಎಲ್ಲಾ ಮೆಟೀರಿಯಲ್ಸ್‌ಗಳನ್ನು ‘ಮೂಡ್ಲ್’ ಸಾಫ್ಟ್‌ವೇರ್ ಮುಖಾಂತರ ನೀಡಲಾಗುತ್ತದೆ. ಕ್ವಿಝ್ ಕ್ಲಾಸ್ ಟಸ್ಟ್ ಮತ್ತು ಇಂಟರ್ನಲ್ ಟೆಸ್ಟ್‌ಗಳೂ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಇಮೇಲ್ ಐಡಿ ಮುಖಾಂತರ ಲೈವ್ ತರಗತಿಗೆ ಪ್ರವೇಶಿಸುತ್ತಾರೆ. ಅಲ್ಲದೇ ಮಕ್ಕಳಿಗೆ ನೆಟ್‌ವರ್ಕ, ಇಂಟರ್‌ನೆಟ್ ಪ್ರಾಬ್ಲಂ ತೊಡಕಾಗದಿರಲು ಎಲ್ಲಾ ವಿಭಾಗಗಳಿಗೆ ಯುಟ್ಯೂಬ್ ಚಾನೆಲ್‌ಗಳನ್ನು ಮಾಡಿ ಅವುಗಳ ಮೂಲಕ ರೆಕಾರ್ಡೆಡ್ ತರಗತಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಹೊರತಾಗಿಯೂ ಕ್ಲಾಸ್‌ಗಳನ್ನು ಪಡೆಯಬಹುದಾಗಿದೆ.
ಸಂ: ಆನ್‌ಲೈನ್ ತರಗತಿಗಳಿಗೆ ಮಕ್ಕಳಿಂದ ಹೇಗೆ ಪ್ರತಿಕ್ರಿಯೆ ಇದೆ ?
ಡಾ| : ವಿದ್ಯಾರ್ಥಿಗಳಿಂದ ಈ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ದೊರಕಿದೆ. ಈಗಾಗಲೇ ನಡೆಸಿರುವ ಕ್ಲಾಸ್ ಟೆಸ್ಟ್‌ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಯುನಿವರ್ಸಿಟಿ ನೀಡಿರುವ ನಿಯಮಗಳ ಪ್ರಕಾರ ಕ್ಲಾಸ್ ನಡೆಸಲಾಗುತ್ತಿದೆ. ಶೇಕಡಾ ೮೫ ರಷ್ಟು ವಿದ್ಯಾರ್ಥಿಗಳಿಗೆ ಲೈವ್ ಕ್ಲಾಸ್‌ಗಳು ರೀಚ್ ಆಗುತ್ತಿವೆ. ಉಳಿದ ಶೇಕಡಾ ೧೫ ವಿದ್ಯಾರ್ಥಿಗಳಿಗೆ ರೆಕಾರ್ಡೆಡ್ ಕ್ಲಾಸ್‌ಗಳು ದೊರೆಯುತ್ತಿದೆ. ವಿದ್ಯಾರ್ಥಿಗಳ ಅನುಕೂಲತೆ ಅನಾನುಕೂಲತೆ ಬಗ್ಗೆ ಪರಿಶೀಲಿಸಲು ಪ್ರತೀ ೨೦ ವಿದ್ಯಾರ್ಥಿಗಳಿಗೆ ಓರ್ವರಂತೆ ಕೌನ್ಸಿಲರ್ ಇರಿಸಿzವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಕ್ಲಾಸ್‌ಗಳ ಮಹತ್ವ ತಿಳಿಸಿ ಅವರನ್ನು ಕನ್ವೀನ್ಸ್ ಮಾಡುವ ಕಾರ್ಯ ಇವರು ಮಾಡುತ್ತಾರೆ. ಸಮಸ್ಯೆಗಳಿದ್ದಲ್ಲಿ ತಕ್ಷಣ ಪರಿಹಾರ ಸೂಚಿಸುತ್ತಾರೆ.
ಸಂ: ಪ್ರಾಧ್ಯಾಪಕರ ಪ್ರಾವೀಣ್ಯತೆಯೂ ಕಾಲೇಜಿನ ಗುಣಮಟ್ಟ ಹೆಚ್ಚಿಸುವಲ್ಲಿ ಹೇಗೆ ಸಹಕಾರಿಯಾಗುತ್ತದೆ ?
ಡಾ| : ನಮ್ಮಲ್ಲಿ ಪ್ರತೀ ವಿಭಾಗದಲ್ಲಿಯೂ ಕನಿಷ್ಟ ೨ ಮಂದಿ ಡಾಕ್ಟರೇಟ್ ಪದವಿ ಪಡೆದವರಾಗಿದ್ದಾರೆ. ವೆಲ್ ಟ್ರೈನ್ಡ್ ಉಪನ್ಯಾಸಕರಿದ್ದಾರೆ. ಪ್ರತೀ ವಿಭಾಗದ ಪ್ರೊಫೆಸರ್‌ಗಳು ಇಂಡಸ್ಟ್ರೀ ವರ್ಕ್ ಬ್ಯಾಕ್‌ಗ್ರೌಂಡ್ ಹೊಂದಿರುವ ಪರಿಣಾಮ ಕೇವಲ ಸೈದ್ದಾಂತಿಕ ಬೋಧನೆಗೆ ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಸದಾ ಪ್ರೇರಣೆ ನೀಡುತ್ತಾರೆ. ಮತ್ತು ಪ್ರತೀ ವಿದ್ಯಾರ್ಥಿಯಲ್ಲಿಯೂ ವರ್ತಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಯಾವುದಾದರೂ ಒಂದು ಅಡ್ವಾನ್ಸ್‌ಡ್ ಟೆಕ್ನೋಲಜಿ ಸಂಶೋಧನೆ ಮಾಡಿಯೇ ಹೊರಹೋಗುವಂತೆ ಯೋಜನೆ ರೂಪಿಸುತ್ತಾರೆ.
ಸಂ: ಆತ್ಮನಿರ್ಭರ ಭಾರತ್’ ಯೋಜನೆಗೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಹೇಗೆ ಪರಿವರ್ತಿಸಬಹುದು ?
ಡಾ| : ಆತ್ಮನಿರ್ಭರ ಭಾರತ್ ಯೋಜನೆಗೆ ಈಗಾಗಲೇ ನಮ್ಮ ಕಾಲೇಜಿನಿಂದ ‘ವಿವೇಕ ಜೀವವರ್ಧಕ’ ಸಾಧನದ ಮುಖಾಂತರ ಸಣ್ಣ ಕೊಡುಗೆ ನೀಡಿzವೆ. ಪ್ರತೀ ವರ್ಷ ಪ್ರತೀ ವಿಭಾಗದಿಂದ ಕನಿಷ್ಟ ಎರಡೆರಡು ‘ಸ್ಟಾರ್ಟಪ್’ ಮತ್ತು ವರ್ಷದಲ್ಲಿ ಕನಿಷ್ಟ ಅಂದರೂ ೩-೪ ಪ್ರೊಡಕ್ಟ್‌ಗಳು ಬರುವ ಹಾಗೇ ಯೋಜನೆ ಹಾಕಿzವೆ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಸ್ಥಳೀಯ ಅವಶ್ಯಕತೆಗಳನ್ನು ಸರ್ವೇ ಮಾಡಿ ಪ್ರೊಡಕ್ಟ್‌ಗಳನ್ನು ತಯಾರಿಸುವ ಪ್ಲಾನಿಂಗ್ ಇದೆ. ಪಂಚಾಯತ್ ಮಟ್ಟದಲ್ಲಿ ವಿದ್ಯಾರ್ಥಿಗಳ ಮೂಲಕ ಸರ್ವೇ ಮಾಡಿ ಈ ಯೋಜನೆ ಆರಂಭಿಸಲಿzವೆ.
ಸಂ: ಕೋವಿಡ್ ೧೯ ಈ ಸಮಯದಲ್ಲಿ ಕ್ಯಾಂಪಸ್ ಸೆಲೆಕ್ಷನ್‌ಗೆ ಹೇಗೆ ಸಾಧ್ಯತೆಗಳಿವೆ ?
ಡಾ| : ಪ್ರತೀ ವರ್ಷ ನಮ್ಮಲ್ಲಿ ಸುಮಾರು ೭೫ ಕಂಪೆನಿಗಳಿಂದ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತದೆ. ಕಳೆದ ವರ್ಷ ೩೯೦ ವಿದ್ಯಾರ್ಥಿಗಳಲ್ಲಿ ೩೦೦ ರಷ್ಟು ವಿದ್ಯಾರ್ಥಿಗಳು ಪ್ಲೇಸ್‌ಮೆಂಟ್ ಪಡೆದುಕೊಂಡಿದ್ದಾರೆ. ಅದರ ಪ್ರಕ್ರಿಯೆಗಳನ್ನು ಈಗಾಗಲೇ ಆನ್‌ಲೈನ್ ಮುಖಾಂತರ ನಡೆಸುತ್ತಿzವೆ. ಮುಂದಿನ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಗಳು ಸೆಪ್ಟೆಂಬರ್ ತಿಂಗಳ ಬಳಿಕ ಆರಂಭವಾಗುತ್ತದೆ. ಕೋವಿಡ್ ೧೯ ಇರುವ ಕಾರಣ ಆನ್‌ಲೈನ್ ಮುಖಾಂತರವೇ ಕಂಪೆನಿಗಳ ಸಂದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಈಗಾಗಲೇ ಕಂಪೆನಿಗಳ ಜೊತೆ ಮಾತುಕತೆ ನಡೆಯುತ್ತಿದೆ.
ಸಂ: ಕೋವಿಡ್‌ನಿಂದಾಗಿ ಇಂಜಿನಿಯರಿಂಗ್ ಸ್ಟೂಡೆಂಟ್‌ಗಳಿಗೆ ಪ್ಲೇಸ್‌ಮೆಂಟ್ ಕಷ್ಟಕರ ಎಂಬ ಮಾತಿದೆ. ಏನು ಹೇಳ್ತೀರಿ ?
ಡಾ| : ಇಂಜಿನಿಯರಿಂಗ್ ಔಟ್‌ಗೋಯಿಂಗ್ ವಿದ್ಯಾರ್ಥಿಗಳು ಸರ್ವೀಸ್ ಮತ್ತು ಪ್ರೊಡಕ್ಷನ್ ಎಂಬ ಎರಡು ವಿಭಾಗಗಳಲ್ಲಿ ಹಂಚಿಹೋಗುತ್ತಾರೆ. ಕೋವಿಡ್ ೧೯ ಬಹುತೇಕ ಸರ್ವೀಸ್ ವಿಭಾಗಕ್ಕೆ ಹೊಡೆತ ನೀಡಿದೆ. ಆದರೆ ಪ್ರೊಡಕ್ಷನ್ ವಿಭಾಗದಲ್ಲಿ ಇದರ ಅಡ್ಡಪರಿಣಾಮ ಇನ್ನೂ ಕಂಡುಬಂದಿಲ್ಲ. ಹಾಗಾಗಿ ಪ್ರೊಡಕ್ಷನ್ ಲೈನ್‌ನಲ್ಲಿ ಹೋಗಲು ವಿದ್ಯಾರ್ಥಿಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತದೆ. ಅದಕ್ಕಾಗಿ ನಮ್ಮಲ್ಲಿ ಆರಂಭದ ವರ್ಷದಿಂದಲೇ ವಿದ್ಯಾರ್ಥಿಗಳನ್ನು ಆಯಾ ವಿಭಾಗದಲ್ಲಿ ಪರಿಣತರನ್ನಾಗಿಸಲು ಪ್ರಯತ್ನಿಸುತ್ತೇವೆ. ಪ್ರಥಮ ಬ್ಯಾಚ್‌ನಲ್ಲಿ ಭಾಷಾ ಸಂವಹನ ಮತ್ತು ಜನರಲ್ ನಾಲೆಡ್ಜ್ ಹೆಚ್ಚಿಸುತ್ತೇವೆ. ಎರಡನೇ ವರ್ಷ ಎಕ್ಸ್‌ಪರ್ಟೈಸಿಂಗ್ ಮತ್ತು ಮೂರನೇ ವರ್ಷ ಪ್ಲೇಸ್‌ಮೆಂಟ್ ಹೀಗೆ ಯೋಜನಾಬದ್ದವಾಗಿ ಶಿಕ್ಷಣ ನಡೆಯುತ್ತದೆ.
ಸಂ: ಕಾಲೇಜಿನಲ್ಲಿ ಒಟ್ಟು ಎಷ್ಟು ಶೈಕ್ಷಣಿಕ ವಿಭಾಗಗಳಿವೆ ?
ಡಾ| : ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ೨೦೦೧ ರಲ್ಲಿ ಆರಂಭವಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆರಂಭದಲ್ಲಿ ೩ ವಿಭಾಗಗಳನ್ನು ಹೊಂದಿತ್ತು. ಪ್ರಸ್ತುತ ಎಲೆಕ್ಟ್ರೋನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ಎಂಬ ೪ ವಿಭಾಗಗಳನ್ನು ಹೊಂದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿಯೇ ಸ್ಪೆಷಲೈಝೇಷನ್ ಆಗಿರುವ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೆಷಿನ್ ಲರ್ನಿಂಗ್’ ವಿಭಾಗವೂ ಸೇರ್ಪಡೆಯಾಗಲಿದೆ. ಒಟ್ಟು ೫ ಪದವಿ ವಿಭಾಗ ಮತ್ತು ೧ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವ್ಯಾಸಂಗಕ್ಕೆ ಅವಕಾಶವಿದೆ.
ಸಂ: ಕಾಲೇಜು ಯಾವೆಲ್ಲಾ ಮಾನ್ಯತೆಗೊಳಪಟ್ಟಿವೆ ?
ಡಾ| : ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳಂತೆ ಎಐಸಿಟಿಇಯಿಂದ ಮಾನ್ಯತೆಗೊಳಪಟ್ಟಿರುವ ಕಾಲೇಜು ಪ್ರಸ್ತುತ ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ಎರಡು ವಿಭಾಗಗಳಿಗೆ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ (NBA)ಯಿಂದ ೨೦೧೯ರಲ್ಲಿ ಮಾನ್ಯತೆ ಪಡೆದಿದೆ. ಮುಂದಿನ ವರ್ಷ ‘ನ್ಯಾಕ್ (NAAC)ನಿಂದ ಮಾನ್ಯತೆಗಾಗಿ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಯಲಿದೆ. ೨೦೨೧ ರಲ್ಲಿ ಎಲ್ಲಾ ವಿಭಾಗಗಳಿಗೆ ಎನ್‌ಬಿಎ ಮಾನ್ಯತೆ ದೊರೆಯುವಲ್ಲಿ ಯೋಜನೆ ರೂಪಿಸಲಾಗಿದೆ.
ಸಂ: ಯಾವೆಲ್ಲಾ ವಿಧಾನಗಳ ಮೂಲಕ ಕಾಲೇಜಿಗೆ ಅನುದಾನಗಳು ಬಂದಿವೆ ?
ಡಾ| : ವಿಷನ್ ಗ್ರೂಪ್ ಸೈನ್ಸ್ ಟೆಕ್ನೋಲಜಿ (VGST) ನಿಂದ 40 ಲಕ್ಷ ರೂ. ಅನುದಾನ ಬರುತ್ತದೆ. ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಟೆಕ್ನೋಲಜಿ (KSCST) ನಿಂದ ಪ್ರತೀ ವರ್ಷ ೧೦ ಪ್ರೊಜೆಕ್ಟ್‌ಗಳಿಗೆ ಅನುದಾನ ಲಭಿಸುತ್ತದೆ. ನ್ಯೂ ಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್ (NAIN) ನಿಂದ ಪ್ರತೀ ೩ ವರ್ಷಗಳಿಗೊಮ್ಮೆ ೧.೨ ಕೋಟಿ ಅನುದಾನ ದೊರೆಯುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.