Breaking News

ದಾಖಲೆ ಮೊತ್ತಕ್ಕೆ ಹರಾಜಾದ ನೂಜಿಬಾಳ್ತಿಲ ಗ್ರಾ.ಪಂ. ಮೀನು ಮಾರುಕಟ್ಟೆ | ಬರೋಬ್ಬರಿ 1.79 ಲಕ್ಷಕ್ಕೆ ಹರಾಜು

Puttur_Advt_NewsUnder_1
Puttur_Advt_NewsUnder_1

 

ಕಡಬ: ಪ್ರತೀ ವರ್ಷ ರೂ.10ರಿಂದ 12 ಸಾವಿರಕ್ಕೆ ಏಲಂ ಆಗುತ್ತಿದ್ದ ನೂಜಿಬಾಳ್ತಿಲ ಗ್ರಾಮದ ಹಸಿ ಮೀನು ಮಾರುಕಟ್ಟೆ ಈ ಬಾರಿ ಬೃಹತ್ ಮೊತ್ತಕ್ಕೆ ಏಲಂ ಆಗಿದ್ದು ಬರೋಬ್ಬರಿ 1.79 ಲಕ್ಷಕ್ಕೆ ಏಲಂ ಆಗಿದೆ. 2020-21ನೇ ಸಾಲಿಗೆ ಹಸಿ ಮೀನು ಮಾರುಕಟ್ಟೆ ಏಲಂ ಪ್ರಕ್ರಿಯೆ ಜು.27ರಂದು ನೂಜಿಬಾಳ್ತಿಲ ಗ್ರಾ.ಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಭರತ್ ಬಿ.ಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ ಪಿಡಿಒ ಆನಂದ ಎ ಏಲಂ ಪ್ರಕ್ರಿಯೆ ನಡೆಸಿಕೊಟ್ಟರು.

ಗ್ರಾ.ಪಂ ನಿಗದಿಪಡಿಸಿದ ರೂ 10 ಸಾವಿರ ಮೊತ್ತವನ್ನು ಅರ್ಹತಾ ಠೇವಣಿಯಾಗಿ ಇಟ್ಟಿದ್ದವರಿಗೆ ಮಾತ್ರ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡವರು ಪ್ರತೀ ವರ್ಷದಂತೆ ಸಣ್ಣ ಮೊತ್ತದಿಂದ ಬಿಡ್ಡಿಗ್ ಕರೆಯಲು ಆರಂಭಿಸಿದರು. ಬಿಡ್ಡುದಾರರು ತಮ್ಮ ಪಾಲಿಗೆ ಹಸಿ ಮೀನು ಮಾರುಕಟ್ಟೆಯನ್ನು ಪಡದುಕೊಳ್ಳಬೇಕೆಂಬ ಉದ್ದೇಶಕ್ಕೆ ಬಿಡ್ಡಿಂಗ್ ಮೊತ್ತವನ್ನು ಹೆಚ್ಚಿಸುತ್ತಲೇ ಹೋದರು. ಲಕ್ಷ ಮೊತ್ತ ದಾಟಿದರೂ ಪೈಪೋಟಿ ಮುಂದುವರೆದಿತ್ತು. ಕೊನೆಗೆ ಸಜಿ ವಿಜೆ ಅವರು ಮಾರುಕಟ್ಟೆಯನ್ನು ಮುಂದಿನ ಒಂದು ವರ್ಷದ ಅವಧಿಗೆ ಏಲಂನಲ್ಲಿ ಪಡೆದುಕೊಂಡರು.

ಜಿ.ಪಂ ಸದಸ್ಯ ಪಿ.ಪಿ ವರ್ಗಿಸ್, ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ನಿಕಟಪೂರ್ವ ಸದಸ್ಯ ತೋಮಸ್ ಕೆ.ಜೆ ಉಪಸ್ಥಿತರಿದ್ದರು.

ಹರಾಜು ಪ್ರಕ್ರಿಯೆಯಲ್ಲಿ ಬಿಡ್ಡುದಾರರಾದ ಸಜಿ ವಿ.ಜೆ, ವಿ.ಜೆ, ಸಮೃದ್ಧಿ ಚಿಕನ್ ಸೆಂಟರ್‌ನ ಚಂದ್ರಶೇಖರ, ತರಕಾರಿ ವ್ಯಾಪಾರಸ್ಥ ಜಯಂತ ಬರಮೇಲು, ಹರಿಪ್ರಸಾದ್ ಎನ್ನಾಜೆ, ಉಮೇಶ್ ಆಕೊಟೆಜಾಲ್, ಅಖಿಲ್ ಗೋಳಿಯಡ್ಕ, ಹರ್ಷಿತ್ ನಡುವಳಿಕೆ, ರದೀಶ್ ಪಾಲ್ತಡ್ಕ, ಆದಂ ಸಾಹೇಬ್ ಕಡಬ, ಜೋಸೆಫ್ ಇ.ಜೆ, ಯೋಗಿಶ್, ದಿನೇಶ್, ಸತೀಶ್ ಪಾಡ್ಲ ಮೊದಲಾದವರು ಭಾಗವಹಿಸಿದ್ದರು. ಕಾರ್ಯದರ್ಶಿ ಗುರುವ ಎಸ್ ಸಹಕರಿಸಿದರು.

ಬಿಡ್ಡುದಾರರ ಮಧ್ಯೆ ಪೈಪೋಟಿ:
ಬಿಡ್ಡುದಾರರ ಮಧ್ಯೆ ಬಿರುಸಿನ ಪೈಪೋಟಿ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ಏಲಂ ಪ್ರಕ್ರಿಯೆ ಮದ್ಯಾಹ್ನ 1 ಗಂಟೆಯ ವೇಳೆಗೆ ಮುಕ್ತಾಯಗೊಂಡಿತು. ತಾಮುಂದು, ನಾಮುಂದು ಎಂಬಂತೆ ಬಿಡ್ಡಿಂಗ್ ಮೊತ್ತವನ್ನು ಏರಿಸುತ್ತಲೇ ಹೋದ ಬಿಡ್ಡುದಾರರು ಹೇಗಾದರೂ ಮಾಡಿ ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಪೈಪೋಟಿ ನಡೆಸುತ್ತಿದ್ದುದು ಕಂಡು ಬಂತು. ಕೊನೆಗೆ ವಿ.ಜೆ ಸಜಿ ಅವರು ರೂ. 1,79,500 ಕ್ಕೆ ಪಡೆದುಕೊಂಡರು.

ಸಾವಿರದಿಂದ ಲಕ್ಷಕ್ಕೆ…!
ಕಳೆದ ವರ್ಷ ಸದ್ರಿ ಮಾರುಕಟ್ಟೆ ಕೇವಲ ರೂ.6,700 ಕ್ಕೆ ಏಲಂ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೂ 1,79,500ಕ್ಕೆ ಹರಾಜಾಗಿರುವುದು ದಾಖಲೆಯೇ ಸರಿ. ಗ್ರಾಮೀಣ ಪ್ರದೇಶವೊಂದರ ಹಸಿ ಮೀನು ಮಾರುಕಟ್ಟೆ ಇಷ್ಟೊಂದು ಮೊತ್ತಕ್ಕೆ ಹರಾಜಾಗಿರುವುದು ಕುತೂಹಲಕ್ಕೂ ಕಾರಣವಾಗಿದ್ದು ಕಡಬ ತಾಲೂಕಿನಲ್ಲಿ ಇದು ಚರ್ಚೆಯ ವಿಷಯವೂ ಆಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.