ಪಿಲಿಗುಂಡ ಮನೆಯಲ್ಲೊಂದು ನೋವಿನ ಕಥೆ.. ದೈವ ನರ್ತಕ ಅಣ್ಣು ಅಜಲರಿಗೆ ಬೇಕಿದೆ ಸಹಾಯಹಸ್ತ…!

✍️ಶರತ್ ಆಳ್ವ ಚನಿಲ

ನಾವೆಲ್ಲ ಜೀವನವಿಡೀ ಸುಖದಿಂದ ಜೀವನ ಸಾಗಿಸಬೇಕು ಎಂಬೆಲ್ಲ ಕನಸನ್ನು ಕಟ್ಟಿಕೊಂಡಿರುತ್ತೇವೆ. ಆದರೆ ಅದು ವಾಸ್ತವವಲ್ಲ ಎಂದು ತಿಳಿಯುವುದು ವಿಧಿಯಾಟ ಬೇರೆಯಾದಾಗ. ಇಂತಹದೊಂದು ನೋವಿನ ಕಥೆಯು ಆರ್ಯಾಪು ಗ್ರಾಮದ ಪಿಲಿಗುಂಡ ಅಣ್ಣು ಅಜಲರ ಮನೆಯಲ್ಲಿ ಕಂಡುಬಂದಿದೆ. ದೈವನರ್ತನ ಸೇವೆಯನ್ನು ಕಾಯಕವಾಗಿ ಮಾಡುತ್ತಾ ಬಂದಿರುವ ಇವರು ಕೂಲಿ ಕೆಲಸವನ್ನೂ ಮಾಡುತ್ತಿದ್ದರು.

ಅಣ್ಣುರವರು ಗ್ರಾಮದ ಹಲವು ಕಡೆಗಳಲ್ಲಿಯೂ, ಇತರ ಕಡೆಗಳಿಗೂ ಹೋಗಿ ದೈವ ನರ್ತನ ಕಾಯಕವನ್ನು ಮಾಡುತ್ತಾ ಮನೆಯ ಸಂಸಾರದ ಆಧಾರಸ್ತಂಭವಾಗಿದ್ದರು. ನಾಲ್ಕು ವರ್ಷಕ್ಕೆ ಮುಂಚೆ ಇವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆದು ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದರು.  ಹೃದಯ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಸುಮಾರು 4 ಲಕ್ಷ ರೂಪಾಯಿಗಿಂತಲೂ ಅಧಿಕ ಖರ್ಚಾಗಿದೆ. ಪ್ರಸ್ತುತ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೈವ ನರ್ತನ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಇವರಿಗೆ ಇದೀಗ ಆಸ್ಪತ್ರೆಯ ಖರ್ಚು, ದಿನದ ಊಟದ ಖರ್ಚಿಗೂ ಹಣಕ್ಕೆ ತೊಂದರೆಯಾಗಿದೆ.

 

ಅಣ್ಣುರವರ ಪತ್ನಿ ಚಂದ್ರಾವತಿಯವರು ಆಶಾಕಾರ್ಯಕರ್ತೆಯಾಗಿ ಸಮಾಜದ ಕೆಲಸ ನಿರ್ವಹಿಸುತ್ತಿದ್ದು ತನ್ನ ಕುಟುಂಬದ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ನಾಲ್ಕು ಮಕ್ಕಳೊಂದಿಗೆ ಕಷ್ಟಕರ ಜೀವನವನ್ನು ಸಾಗಿಸುತ್ತಿರುವ ಅಣ್ಣು ಅಜಲರವರ ನೋವಿನಲ್ಲಿ ಭಾಗಿಯಾಗುತ್ತಾ, ಅವರ ಮನೆಯವರ ಕಣ್ಣೀರನ್ನು ಒರೆಸುವ ದೃಷ್ಟಿಯಿಂದ ಸಹಾಯ ಹಸ್ತವನ್ನು ನೀಡಬೇಕಾಗಿದೆ. ಅಣ್ಣುರವರು ಮತ್ತೆ ಹೊಸ ಬದುಕನ್ನು ಆರಂಭಿಸಲಿ ಎಂಬುದೇ ನಮ್ಮೆಲ್ಲರ ಆಶಯವಾಗಲಿ. ಸಹಾಯ ಹಸ್ತ ನೀಡಬಯಸುವ ದಾನಿಗಳು Name chandravathi w/o Annu ajala. Bank SBI puttur. A/c 32666106865 Branch Code 4270 IFSC SBIN0004270 ಮೊಬೈಲ್ ನಂಬರ್ 9686374811 ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.