ಜು.29ರ ಪುತ್ತೂರು, ಕಡಬ ತಾಲೂಕಿನಲ್ಲಿ 13 ಕೊರೋನಾ ದೃಢ 

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ಉಭಯ ತಾಲೂಕುಗಳಲ್ಲಿ ಜು.29ರ ಆರೋಗ್ಯ ಇಲಾಖೆಯ ಮಾಹಿತಿಯಂತೆ 13 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಪುತ್ತೂರು ತಾಲೂಕಿನಲ್ಲಿ 2, ಕಡಬ ತಾಲೂಕಿನಲ್ಲಿ ಒಂದೇ ಮನೆಯ 6 ಮಂದಿ ಸದಸ್ಯರ ಸಹಿತ 11 ಪ್ರಕರಣಗಳು ವರದಿಯಾಗಿವೆ.

ಮಣಿಕ್ಕರ ನಿವಾಸಿ 78 ವರ್ಷ ವಯಸ್ಸಿನ ವೃದ್ಧ, ಉಪ್ಪಿನಂಗಡಿ ಕಾವಲುಗಾರ ಕೆಲಸ ನಿರ್ವಹಿಸುವ 70 ವರ್ಷ ವಯಸ್ಸಿನ ಉತ್ತರ ಪ್ರದೇಶದ ವ್ಯಕ್ತಿಯಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿದೆ. ಕಾವಲುಗಾರ ವ್ಯಕ್ತಿ ಈಗಾಗಲೇ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲ್ಪಿಟ್ಟಿದ್ದಾರೆ.

ಕಡಬ ತಾಲೂಕಿನ ಬೆಳಂದೂರು ರೈಲ್ವೇಗೇಟ್ ಬಳಿಯ 65, 43, 28 ವರ್ಷದ ಮಹಿಳೆಯರಿಗೆ, 27, 32 ವರ್ಷದ ಯುವಕರಿಗೆ ಹಾಗೂ 6 ವರ್ಷದ ಬಾಲಕ ಸಹಿತ ಒಂದೇ ಮನೆಯ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಬಲ್ಯ ನಿವಾಸಿ 36 ವರ್ಷದ ಮಹಿಳೆ,  ಕೋಣಾಜೆ ಕಡ್ಯ 37 ವರ್ಷದ  ವ್ಯಕ್ತಿ, ಆಲಂಕಾರು ನಿವಾಸಿ 41 ವರ್ಷದ ವ್ಯಕ್ತಿ,  ಚಾರ್ವಕ ನಿವಾಸಿ 41 ವರ್ಷದ ವ್ಯಕ್ತಿ,  ಕಡಬ 39 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.