1965ನೇ ಇಸವಿಯಲ್ಲಿ ಶಕುಂತಳಾ ಶೆಟ್ಟಿ ಹೀಗಿದ್ದರು ಗೊತ್ತಾ..!!?? – ಶಕು ಅಕ್ಕನ ಅಂದಿನ ಫೊಟೋ ಸಖತ್ ವೈರಲ್

Puttur_Advt_NewsUnder_1
Puttur_Advt_NewsUnder_1

ಬರಹ: ಎಸ್.ಕೆ.ಎಸ್

ಪುತ್ತೂರು: ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ತಾನು 1965ನೇ ಇಸವಿಯಲ್ಲಿ ಹೀಗೆ ಇದ್ದೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಫೊಟೋ ಒಂದು ಸಖತ್ ವೈರಲ್ ಆಗಿದೆ.

             ಮಾಜಿ ಶಾಸಕಿ ಶಕುಂತಳಾ ಶೆಟ್ಟಿ

ಮೂಲತಹ ಕಾಸರಗೋಡು ತಾಲೂಕಿನವರಾಗಿರುವ ಗಡಿನಾಡ ಕನ್ನಡತಿ ಶಕುಂತಳಾ ಶೆಟ್ಟಿಯವರು ಶಿಕ್ಷಕ ವೃತ್ತಿಯಲ್ಲಿದ್ದ ಕುಂತೂರಿನ ತಿಮ್ಮಪ್ಪ ಶೆಟ್ಟಿಯವರನ್ನು ಮದುವೆಯಾದ ಬಳಿಕ ದಕ್ಷಿಣ ಕನ್ನಡದ ರಾಜಕೀಯದಲ್ಲಿ ಸಕ್ರಿಯರಾದವರು. ಬರಹಗಾರರಾಗಿಯೂ, ನಾಟಕಕಾರರಾಗಿಯೂ, ಸಾಹಿತಿಯಾಗಿಯೂ ಗುರುತಿಸಿಕೊಂಡ ಶಕುಂತಳಾ ಶೆಟ್ಟಿಯವರು ತನ್ನ ರಾಜಕೀಯ ಜೀವನದ ಪ್ರಥಮ ಮೆಟ್ಟಿಲು ಎಂಬಂತೆ ಕುಂತೂರಿನಲ್ಲಿರುವ ಮಂಡಲ ಪಂಚಾಯತ್ ಗೆ ಸದಸ್ಯರಾಗಿ ಆಯ್ಕೆಯಾಗಿದ್ದವರು.‌ ಬಳಿಕ ಬಿಜೆಪಿ ಮಹಿಳಾ ಮೋರ್ಛಾದಲ್ಲಿ ಸಕ್ರಿಯರಾದವರು. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿಯಂತವರ ಸಖ್ಯ ಬೆಳೆಸಿಕೊಂಡವರು. ಸ್ವತಹ ಶಕುಂತಳಾ ಶೆಟ್ಟಿಯವರೂ ಬಿಜೆಪಿಯ ಬೆಂಕಿ ಚೆಂಡು ಎಂದು ಕರೆಸಿಕೊಂಡವರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಕಾಂಗ್ರೆಸ್ ನಾಯಕ ಬೆಳ್ಳಿಪ್ಪಾಡಿ ರಮಾನಾಥ ರೈ ಎದುರು ಸ್ಪರ್ಧಿಸಿ ಸೋತವರು. 2004ರ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನ ನೆಲ್ಲಿಕಟ್ಟೆ ಸುಧಾಕರ ಶೆಟ್ಟಿಯವರನ್ನು ಸೋಲಿಸಿ ಪ್ರಥಮ ಬಾರಿ ವಿಧಾನಸಭೆ ಪ್ರವೇಶಿಸಿದವರು.

ಶಕುಂತಳಾ ಶೆಟ್ಟಿಯವರ 1965ರಲ್ಲಿ ಕ್ಲಿಕ್ಕಿಸಿದ ಫೊಟೋ

2009ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದಾಗ ಬಂಡಾಯದ ಸ್ವಾಭಿಮಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಮಲ್ಲಿಕಾ ಪ್ರಸಾದ್ ಎದುರು ಪರಾಜಿತರಾದವರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಯ ಸಂಜೀವ ಮಠಂದೂರುರವರನ್ನು ಮಣಿಸಿದವರು. ಈ ಅವಧಿಯಲ್ಲಿ ರಾಜ್ಯದ ಸಂಸದೀಯ ಕಾರ್ಯದರ್ಶಿಯಾಗಿದ್ದವರು. 2019ರ ಚುನಾವಣೆಯಲ್ಲಿ ಬಿಜೆಪಿಯ ಸಂಜೀವ ಮಠಂದೂರು ಎದುರು ಪರಾಜಿತರಾದವರು ಶಕುಂತಳಾ ಶೆಟ್ಟಿಯವರು.‌ ಕಂಚಿಲ್ದ ಬಾಲೆ ಎಂಬ ಸಿನಿಮಾದಲ್ಲಿ‌ ಬಣ್ಣ ಹಚ್ಚಿದವರೂ ಆಗಿರುವ ಶಕುಂತಳಾ ಶೆಟ್ಟಿಯವರು‌ ಕವಯತ್ರಿ ಆಗಿಯೂ ಗುರುತಿಸಿಕೊಂಡವರು. ಮಹಿಳಾ ಪರ ಹೋರಾಟಗಾರ್ತಿಯಾಗಿ, ರಾಮಕುಂಜ ಕುಂಡಾಜೆಯ ಶಮೀಮಾ ಮರ್ಡರ್ ಕೇಸ್ ನಲ್ಲಿ ಹೋರಾಟದ ರೂವಾರಿಯೂ ಆಗಿದ್ದ ಶಕುಂತಳಾ ಶೆಟ್ಟಿಯವರ ಬರಹ, ಕವನ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ.

ಶಕುಂತಳಾ ಶೆಟ್ಟಿಯವರು ಫೇಸ್ಬುಕ್ ನಲ್ಲಿ ಹಾಕಿರುವ ಪೋಸ್ಟ್

ಪ್ರಸ್ತುತ ಮಂಗಳೂರು ಉಳ್ಳಾಲದ ಕುತ್ತಾರ್ ಪದವು ಎಂಬಲ್ಲಿ ವಾಸವಾಗಿರುವ 70ರ ಹರೆಯದ ಶಕುಂತಳಾ ಟಿ. ಶೆಟ್ಟಿಯವರು ತಾನು 1965ನೇ ಇಸವಿಯಲ್ಲಿ ಹೀಗಿದ್ದೆ ಎಂಬ ಫೊಟೋ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ‌ ಜಾಲತಾಣದಲ್ಲಿ‌ ಸಾಕಷ್ಟು ಲೈಕ್, ಕಮೆಂಟ್ ಬಂದಿದೆ. ಆಗಿನ ಚೆಂದುಳ್ಳಿ ಚೆಲುವೆಯ ಈ ಫೊಟೋ ಹಲವರ ವಾಟ್ಸಪ್ ಡಿ.ಪಿಯಲ್ಲಿ, ಸ್ಟೇಟಸ್ ನಲ್ಲಿ ರಾರಾಜಿಸುತ್ತಿದೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.