ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ ಕುರಿತು ಸಾರ್ವಜನಿಕ ವಲಯದಲ್ಲಿ ಅನೇಕ ಊಹಾಪೋಹಗಳು ಎದ್ದಿದ್ದು ಶಾಸಕ ಯು.ಟಿ ಖಾದರ್ ಕೂಡ ಇದು ರಾಜಕೀಯ ಪ್ರೇರಿತವೆಂದು ಹೇಳಿಕೆ ನೀಡಿದ್ದರು.ಇದೀಗ ಉಸ್ತುವಾರಿ ಸಚಿವ ವರ್ಗಾವಣೆ ಕುರಿತು ಮೊದಲ ಪ್ರತಿಕ್ರೀಯೆ ನೀಡಿದ್ದಾರೆ.
“ಕಾಲ ಕಾಲಕ್ಕೆ ರಾಜ್ಯ ಸರ್ಕಾರ ಮಾಡುವ ವರ್ಗಾವಣೆ ಅನ್ವಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ವರ್ಗಾವಣೆಯಾಗಿದೆ.
ಆದರೆ ಯು.ಟಿ ಖಾದರ್ ರಾಜಕೀಯ ಬಣ್ಣ ಹಚ್ಚಿ ಇದು ರಾಜಕೀಯ ಪ್ರೇರಿತ ಜಿಲ್ಲಾಧಿಕಾರಿಗಳಿಗೆ ಬಂದಿರುವ ಬೆದರಿಕೆ ಕರೆಯ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.ಅವರ ಆರೋಪದಲ್ಲಿ ಹುರುಳಿಲ್ಲ ಈಗಾಗಲೇ ಬೆದರಿಕೆ ಹಾಕಿದ್ದಾರೆ ಎನ್ನಲಾದವರ ಮೇಲೆ ಗೃಹ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ”ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.