HomePage_Banner
HomePage_Banner
HomePage_Banner
HomePage_Banner

‘ತ್ಯಾಜ್ಯ ಎಸೆಯುವವರ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ 2 ಸಾವಿರ ಬಹುಮಾನ ಗೆಲ್ಲಿ’ ಇಚ್ಲಂಪಾಡಿ ನೀತಿ ಟ್ರಸ್ಟ್ ಘೋಷಣೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಇಲ್ಲಿಗೆ ಸಮೀಪದ ಪೆರಿಯಶಾಂತಿಯಲ್ಲಿ ತ್ಯಾಜ್ಯ ಎಸೆಯುವುದು ನಿಲ್ಲುವುದೇ ಇಲ್ಲ. ಕಾಡಿನಿಂದ ಆವೃತ್ತವಾದ ಈ ಜಾಗದ ಸುತ್ತಲೂ ತ್ಯಾಜ್ಯಗಳ ರಾಶಿಯೇ ಇದೆ. ಕೌಕ್ರಾಡಿ ಗ್ರಾಮ ಪಂಚಾಯತ್‌ನಿಂದ ಇಲ್ಲಿ ಎಚ್ಚರಿಕೆ ಫಲಕ ಹಾಕಿದರೂ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಸ ಎಸೆಯುತ್ತಿರುವವರು ಎಸೆಯುತ್ತಲೇ ಇದ್ದಾರೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಕೋಳಿ ಹಾಗೂ ಇನ್ನಿತರ ತರಕಾರಿ ಸಾಗಾಟದ ಲಾರಿಯವರೂ ಹಗಲು-ರಾತ್ರಿ ಎನ್ನದೇ ತ್ಯಾಜ್ಯಗಳನ್ನು ಇಲ್ಲಿ ಎಸೆದು ಹೋಗುತ್ತಿರುತ್ತಾರೆ. ಇದರಿಂದಾಗಿ ಈ ಪ್ರದೇಶ ಕಲುಷಿತಗೊಂಡು ರೋಗ ಹರಡಲೂ ಕಾರಣವಾಗುತ್ತಿದೆ. ಇದನ್ನು ಮನಗಂಡ ಇಚ್ಲಂಪಾಡಿಯ ನೀತಿ ತಂಡ ಹೊಸ ಘೋಷಣೆ ಮಾಡಿದೆ.


 

ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಿಂದ ಇಚಿಲಂಪಾಡಿವರೆಗೆ ಹೆದ್ದಾರಿ ಬದಿಯಲ್ಲಿ ಕಸ, ತ್ಯಾಜ ತಂದು ಎಸೆಯುವವರ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿದವರಿಗೆ ೨ ಸಾವಿರ ರೂ.,ನಗದು ಬಹುಮಾನ ನೀಡುವುದಾಗಿ ಸಾಮಾಜಿಕ ಸಂಘಟನೆಯಾಗಿರುವ ನೀತಿ ಟ್ರಸ್ಟ್ ಘೋಷಣೆ ಮಾಡಿದೆ. ನೀತಿ ತಂಡದ ಅಧ್ಯಕ್ಷ ಜಯನ್ ಟಿ.,ಯವರು ಈ ಬಹುಮಾನ ಘೋಷಣೆ ಮಾಡಿದ್ದು ಸಾರ್ವಜನಿಕರು ಸಂಚರಿಸುವ ರಸ್ತೆಯನ್ನು ತ್ಯಾಜ್ಯ ಮುಕ್ತವನ್ನಾಗಿಸುವುದು ಬಹುಮಾನದ ಹಿಂದಿನ ಉದ್ದೇಶವಾಗಿದೆ. ಯಾರೇ ಸಾರ್ವಜನಿಕರು ಕಸ ಎಸೆಯುವವರ ಪೋಟೋ, ವೀಡಿಯೋ ಅಥವಾ ಪೂರಕ ದಾಖಲೆ ನೀಡಿ ಬಹುಮಾನ ಪಡೆಯಬಹುದಾಗಿದೆ. ಗ್ರಾ.ಪಂ.ಗಳು ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರೂ ಜನರು ಮಾತ್ರ ಜಾಗೃತರಾಗುತ್ತಿಲ್ಲ, ಎಲ್ಲೆಂದರಲ್ಲಿ ಕಸತ್ಯಾಜ್ಯ ಬಿಸಾಡಿ ಪರಿಸರ ಮಾಲಿನ್ಯ ಮಾಡಿ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗುತ್ತಿದ್ದಾರೆ ಎಂದು ಜಯನ್ ದೂರಿದ್ದಾರೆ.

ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಈ ರಾಜ್ಯ ಹೆದ್ದಾರಿ ರಸ್ತೆಯ ಪರಿಸರ ದುರ್ನಾತ ಬೀರುತ್ತಿದೆ, ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರು, ವಾಹನ ಸವಾರರು ನಿತ್ಯವೂ ದುರ್ನಾತವನ್ನು ಸಹಿಸಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೇ ನದಿ ನೀರಿಗೂ ತ್ಯಾಜ್ಯ ತಂದು ಹಾಕುವ ಸ್ಥಿತಿ ಎದುರಾಗಿದ್ದು, ಮಂಗಳೂರಿನ ಜನರೂ ಇದೇ ನೀರನ್ನು ಕುಡಿಯುತ್ತಿರುತ್ತಾರೆ. ತ್ಯಾಜ್ಯ ಎಸೆಯುವುದನ್ನು ತಡೆಯಲು ಈ ಬಹುಮಾನ ಘೋಷಣೆ ಮಾಡಿರುವುದಾಗಿ ಜಯನ್‌ರವರು ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.