ಕೊಳ್ತಿಗೆ: ಯಾಂತ್ರೀಕೃತ ಶ್ರೀ ಪದ್ಧತಿ ಭತ್ತ ಬೇಸಾಯ ಮಾಹಿತಿ, ಪ್ರಾತ್ಯಕ್ಷತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಇದರ ವತಿಯಿಂದ ಯಾಂತ್ರೀಕೃತ ಶ್ರೀ ಪದ್ಧತಿ ಭತ್ತ ಬೇಸಾಯ ಪ್ರಾತ್ಯಕ್ಷಿತೆ, ಮಾಹಿತಿ ಕಾರ್ಯಕ್ರಮ ಜು.೨೯ ರಂದು ಕೊಳ್ತಿಗೆ ಚಾಮೆತ್ತಕುಮೇರು ಶೀನಪ್ಪ ಗೌಡ ಮತ್ತು ಹೊನ್ನಪ್ಪ ಗೌಡರವರ ಗದ್ದೆಯ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಯೋಜನಾ ನಿರ್ದೇಶಕ ಸತೀಶ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ, ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ದಿನಕ್ಕೆ ನೂರು ರೂಪಾಯಿಯ ಅಕ್ಕಿ ಒಂದು ಸಾಧಾರಣ ಕುಟುಂಬಕ್ಕೆ ಬೇಕಾಗುತ್ತದೆ.

 ಕೊಳ್ತಿಗೆ ಯಾಂತ್ರೀಕೃತ ಶ್ರೀ ಪದ್ಧತಿ ಭತ್ತದ ಬೇಸಾಯ ಮಾಹಿತಿ ಕಾರ್ಯಕ್ರಮ

ಇಂದಿನ ದಿನಗಳಲ್ಲಿ ಜನರು ಕೃಷಿಯತ್ತ ಮತ್ತೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನು ನಂಬಿಕೊಂಡವರಿಗೆ ಯಾವುದೇ ಸಮಸ್ಯೆ ಬಂದಿಲ್ಲ. ಕೃಷಿಯನ್ನು ಮತ್ತಷ್ಟು ಸುಲಭವಾಗಿಸಲು ಯಂತ್ರವನ್ನು ಉಪಯೋಗಿಸುವ ಪದ್ಧತಿ ಬಂದಿದೆ. ಇದಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಸಹಾಯವನ್ನು ನೀಡುತ್ತಿದೆ. ಯಾಂತ್ರೀಕೃತ ಶ್ರೀ ಪದ್ಧತಿ ಭತ್ತ ಬೇಸಾಯದ ಮಾಹಿತಿಯನ್ನು ಯೋಜನೆಯ ಮೂಲಕ ನೀಡಲಾಗುತ್ತಿದೆ. ಯಂತ್ರಶ್ರೀ ಕಾರ್ಯಕ್ರಮದ ಮೂಲಕ ಸಾಗುವಳಿ ಆಗದೆ ಅಡೀಲು ಬಿದ್ದಿರುವ ಗದ್ದೆಯಲ್ಲಿ ಭತ್ತ ಕೃಷಿ ಮಾಡುವ ಕೆಲಸವನ್ನು ಮಾಡಲು ಮುಂದಾಗಿದ್ದು ಇದಕ್ಕೆ ಜನರು ಮುಂದೆ ಬಂದಿದ್ದಾರೆ. ಬಹಳಷ್ಟು ಅಡೀಲು ಬಿದ್ದ ಗದ್ದೆಗಳಲ್ಲಿ ಯಂತ್ರಶ್ರೀಯ ಮೂಲಕ ಭತ್ತಕೃಷಿ ನಡೆಯುತ್ತಿದೆ. ಇದಕ್ಕೆ ಯೋಜನೆಯ ಮುಖಾಂತರ ಸಾಲ ನೀಡುವ ವ್ಯವಸ್ಥೆಯು ಇದ್ದು ಎಕರೆಗೆ ೨೦ ಸಾವಿರ ಸಾಲಸೌಲಭ್ಯವನ್ನು ಕೊಡುವ ಯೋಜನೆಯು ಇದೆ ಎಂದು ಹೇಳಿ ಮಾಹಿತಿ ನೀಡಿದರು.

 

ಸತೀಶ್ ಪಾಂಬಾರು, ಕೊಳ್ತಿಗೆ ವಲಯ ಅಧ್ಯಕ್ಷೆ ನವೀನಾ ಕುಮಾರಿರವರುಗಳು ಶುಭ ಹಾರೈಸಿದರು. ಪುತ್ತೂರು ಯೋಜನಾಧಿಕಾರಿ ಜನಾರ್ದನ ಎಸ್‌ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ, ವಲಯ ಬಿ ಒಕ್ಕೂಟದ ಅಧ್ಯಕ್ಷ ವಸಂತ ಗೌಡ, ಶಿವಪ್ಪ ಗೌಡ ಉಪಸ್ಥಿತರಿದ್ದರು. ಯೋಜನೆಯ ಕೃಷಿ ಅಧಿಕಾರಿ ಉಮೇಶ್‌ರವರು ಯಂತ್ರಶ್ರೀ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಅರುಣಾ, ಒಡ್ಯಪ್ಪ ಗೌಡ, ವೆಂಕಟ್ರಮಣ ಗೌಡ, ವಿನಯ ಕುಮಾರ್, ಸುಲೋಚನ, ಗಾಯತ್ರಿ, ಶಾರದಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಶುತಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಶಾರದಾ ವಂದಿಸಿದರು. ಸೇವಾಪ್ರತಿನಿಧಿ ರಮ್ಯ ಸಹಕರಿಸಿದ್ದರು. ಪ್ರಗತಿಬಂಧು ಸ್ವಸಹಾಯ ಸಂಘ, ಜ್ಞಾನವಿಕಾಸ ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.