Breaking News

ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಬಗ್ಗೆ ಆತಂಕ ಬೇಡ, ಧೈರ್ಯದಿಂದ ಪರೀಕ್ಷಿಸಿಕೊಳ್ಳಿ – ಬನ್ನೂರು, ಕೋಡಿಂಬಾಡಿ ಗ್ರಾ.ಪಂನ ಕಾರ್ಯಪಡೆ ಸಭೆಯಲ್ಲಿ ತಹಶೀಲ್ದಾರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೋವಿಡ್-೧೯ ಸೋಕನ್ನು ಶೀಘ್ರವಾಗಿ ಪತ್ತೆಮಾಡಿ ವರದಿ ನೀಡುವ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ನ ಬಗ್ಗೆ ಜನರು ಯಾವುದೇ ಆತಂಕ ಪಡಬೇಕಾಗಿಲ್ಲ. ಧೈರ್ಯದಿಂದ ಪರೀಕ್ಷಿಸಿಕೊಳ್ಳಬಹುದು. ಇದರ ಕುರಿತು ಕಾರ್ಯಪಡೆಯವರು ಜನರಿಗೆ ಅರಿವು ಮೂಡಿಸುವಂತೆ ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು.

ಬನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜು.೨೯ರಂದು ನಡೆದ ಬನ್ನೂರು ಹಾಗೂ ಕೋಡಿಂಬಾಡಿ ಗ್ರಾಮಗಳ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು. ರ್‍ಯಾಪಿಡ್ ಆಂಟಿಜನ್ ಟೆಸ್ಟ್ ವರದಿಯ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯವಿದೆ. ಇದರ ಬಗ್ಗೆ ಯಾವುದೇ ಸಂದೇಹ, ಆತಂಕ ಪಡೆಬೇಕಾಗಿಲ್ಲ. ಧೈರ್ಯದಿಂದ ಪರೀಕ್ಷಿಸಿಕೊಳ್ಳಬಹುದು. ಪರೀಕ್ಷೆ ಸರಿಯಾಗಿಯೇ ನಡೆಸಲಾಗುತ್ತಿದೆ. ವರದಿಯ ಕುರಿತು ಅನುಮಾನಗಳಿದ್ದರೆ ಮತ್ತೆ ವರದಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶವಿದೆ. ಪರೀಕ್ಷಿಸಿದ ಕೆಲವೇ ಕ್ಷಣದಲ್ಲಿ ವರದಿಯ ನಿಮ್ಮ ಕೈ ಸೇರಲಿದೆ. ನಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ಕುಟುಂಬದ ಹಿತ ದೃಷ್ಟಿಯಿಂದ ಪ್ರತಿಯೊಬ್ಬರೂ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಿಕೊಳ್ಳುವಂತೆ ಅವರು ತಿಳಿಸಿದರು.

ಈಗಾಗಲೇ ಸುಮಾರು ೭೫೦ಮಂದಿಗೆ ಪರೀಕ್ಷೆ ಮಾಡಲಾಗಿದ್ದು ೨೬ ಮಂದಿಗೆ ಪಾಸಿಟವ್ ವರದಿ ಬಂದಿದ್ದ ಶೇ.೩ರಷ್ಟು ಮಾತ್ರ ಪಾಸಿಟಿವ್ ಆಗಿದೆ. ಜ್ವರ ಶೀತ, ಕೆಮ್ಮುಗಳಿದ್ದರೆ ಮಾತ್ರ ಪಾಸಿಟಿವ್ ವರದಿ ಬರುವುದಿಲ್ಲ. ಕೋವಿಡ್ ಲಕ್ಷಣಗಳಿದ್ದರೆ ಮಾತ್ರ ಪಾಸಿಟಿವ್ ಬರಲಿದೆ. ರ್‍ಯಾಪಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ವರದಿ ಬಂದರೂ ಹೋಮ್ ಐಶೋಲೇಶನ್‌ಗೆ ಅವಕಾಶಗಳಿವೆ. ೬೦ ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಂಗಳೂರಿಗೆ ಕಳುಹಿಸಲಾಗುತ್ತದೆ. ನೀವು ಖಾಸಗಿಯಾಗಿ ಪರೀಕ್ಷೆ ಮಾಡಿಕೊಳ್ಳುವುದಿದ್ದರೆ ದುಬಾರಿ ಹಣ ಪಾವತಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯಿಂದ ಉಚಿತವಾಗಿ ಪರೀಕ್ಷಿಸಿಕೊಳ್ಳಲು ಅವಕಾಶವಿದೆ. ಇದರ ಕುರಿತು ಕಾರ್ಯಪಡೆ, ಆಶಾ ಕಾರ್ಯಕಯರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು ಜನರಲ್ಲಿ ಅರಿವು ಮೂಡಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲು ದಿನಾಂಕ ನಿಗಧಿಗೊಳಿಸಿ ಧ್ವನಿ ವರ್ಧಕ, ವ್ಯಾಟ್ಸಪ್ ಗ್ರೂಪ್‌ಗಳ ಮೂಲಕ, ಸ್ವಸಹಾಯ ಸಂಘಗಳ ಮುಖಾಂತರ ಪ್ರಚಾರ ನೀಡಿ ಜನರು ಈ ಯೋಜನೆಯನ್ನು ಸಧುಪಯೋಗಪಡಿಸಿಕೊಳ್ಳುವಂತೆ ಪ್ರಚಾರ ನೀಡುವಂತೆ ತಹಶೀಲ್ದಾರ್ ಸೂಚಿಸಿದರು.

ಪ್ರತಿವಾರ ಟೆಸ್ಟ್:
ಮುಂದಿನ ಮಂಗಳವಾರದಿಂದ ಎಲ್ಲಾ ಪಂಚಾಯತ್‌ಗಳಲ್ಲಿಯೂ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ನಡೆಯಲಿದೆ. ಕೊರೋನಾ ನಿಯಂತ್ರಣಕ್ಕೆ ಬರುವ ತನಕ ನಿರಂತರವಾಗಿ ರ್‍ಯಾಪಿಡ್ ಟೆಸ್ಟ್ ನಡೆಯಲಿದೆ ಎಂದು ತಹಶೀಲ್ದಾರ್ ತಿಳಿಸಿದರು.

ತಾ.ಪಂ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್, ಕೋಡಿಂಬಾಡಿ ಗ್ರಾ.ಪಂ ಪಿಡಿಓ ಚಿತ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬನ್ನೂರು ಗ್ರಾ.ಪಂ ಪಿಡಿಓ ಶಾಂತರಾಮ್ ಸ್ವಾಗತಿಸಿ, ವಂದಿಸಿದರು.

ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರಮಣಿ ಡಿ ಗಾಣಿಗ, ಉಪಾಧ್ಯಕ್ಷ ಜಿನ್ನಪ್ಪ ಗೌಡ, ಸದಸ್ಯರಾದ ಗಿರಿಜಾ, ಜಯ, ಲತಾ, ಶುಭ, ಜಿನ್ನಪ್ಪ ಗೌಡ, ಕೋಡಿಂಬಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ, ಮಾಜಿ ಉಪಾಧ್ಯಕ್ಷ ಬಾಬು ಗೌಡ ಭಂಡಾರದ ಮನೆ, ಸದಸ್ಯ ರಾಮಚಂದ್ರ, ಕಾರ್ಯದರ್ಶಿ ರಮೇಶ್ ಕೆ., ವಿವಿಧ ಶಾಲೆಗಳ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.