ಪುತ್ತೂರು ಅಂಚೆ ಇಲಾಖೆಯಿಂದ ವಿಶೇಷ 2 ಲಕೋಟೆಗಳು ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೂಜುಗೋಡು ಕಟ್ಟೆಮನೆ ದಿ.ವೆಂಕಟ್ರಮಣ ಗೌಡ 155ನೇ ಹುಟ್ಟುಹಬ್ಬದ ಸ್ಮರಣಾರ್ಥ ಮತ್ತು ಸಿಂಗಳೀಕ ಚಿತ್ರದ ವಿಶೇಷ ಲಕೋಟೆಗಳನ್ನು ಪುತ್ತೂರು ವಿಭಾಗದ ಅಂಚೆ ಇಲಾಖೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೆ.ವಿ.ಅನಂತರಾಮ ಅವರು ವಿಶೇಷ ಲಕೋಟೆಗಳನ್ನು ಅನಾವರಣಗೊಳಿಸಿದರು. ಧಾರ್ಮಿಕ ಚಿಂತನಕಾರ, ಸಾಮಾಜಿಕ ಸುಧಾರಕ, ರಾಜಕೀಯ ಹುರಿಯಾಳು ಮದರಾಸು ರಾಜ್ಯದಡಿಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಅವಿಭಜಿತ ಪುತ್ತೂರು ಕ್ಷೇತ್ರದಿಂದ ಪ್ರಥಮ ಬಾರಿಗೆ ಚುನಾಯಿತರಾದ ಕೂಜಗೋಡು ಕಟ್ಟೆಮನೆ ದಿವಂಗತ ವೆಂಕಟ್ರಮಣ ಗೌಡರ ೧೧೫ ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಮತ್ತು ಪಶ್ಚಿಮ ಘಟ್ಟದಲ್ಲಿ ಕಂಡುಬರುತ್ತಿರುವ ಅಳಿವಿನಂಚಿನಲ್ಲಿರುವ ಸಿಂಗಳೀಕ ಅಥವಾ ಸಿಂಹ ಬಾಲದ ಮಂಗನ ಭಾವಚಿತ್ರವಿರುವ ವಿಶೇಷ ಲಕೋಟೆಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿ ಕೋವಿಡ್ 19 ಸಾಂಕ್ರಾಮಿಕ ರೋಗದ ಈ ಪರಿಸ್ಥಿತಿಯಲ್ಲೂ ವಿಶೇಷ ಲಕೋಟೆಯ ಬಿಡುಗಡೆಗೆ ಶ್ರಮಿಸಿದ ಎಲ್ಲಾ ಸಹನೌಕರರನ್ನೂ, ಹಿರಿಯ ಅಧಿಕಾರಿಗಳನ್ನೂ ಮತ್ತು ಭಾವಚಿತ್ರದ ವಿನ್ಯಾಸ ಹಾಗೂ ಲಕೋಟೆಯಲ್ಲಿ ಮುದ್ರಿತ ಪದಪುಂಜಕ್ಕೆ ಸಹಾಯ ಮಾಡಿದ ಎಲ್ಲರನ್ನೂ ಸ್ಮರಿಸಿಕೊಂಡರು. ದಿ. ವೆಂಕಟ್ರಮಣ ಗೌಡರ ಸುಪುತ್ರರಾದ ಟಿ.ವಿ. ಸುಧೀರ್ ಅವರು ಇಲಾಖೆಯ ಈ ಕಾರ್ಯವನ್ನು ಶ್ಲಾಘಿಸಿದರು.

ಹಿರಿಯ ವೈಜ್ನಾನಿಕ ಅಧಿಕಾರಿ, ಪಿಲಿಕುಳ ಜೈವಿಕ ತೋಟ, ಮಂಗಳೂರು ಇವರು ಮಾತನಾಡಿ ನಶಿಸುತ್ತಿರುವ ವನ್ಯ ಜೀವಿಗಳ ಸಂತಾನಾಭಿವೃದ್ಧಿಯಬಗ್ಗೆ ಸರಕಾರವು ಜೈವಿಕ ಇಲಾಖೆಯ ಮೂಲಕ ಕೈಗೊಂಡಿರುವ ವಿವಿಧ ಯೋಜನೆಗಳನ್ನು ವಿವರಿಸಿದರು ಹಾಗೂ ಸಿಂಗಳೀಕನ ವಿಶೇಷ ಲಕೋಟೆಯ ಅನಾವರಣದ ಮೂಲಕ ಜನ ಜಾಗೃತಿಯನ್ನು ಮೂಡಿಸುತ್ತಿರುವ ಇಲಾಖಾ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಸಾರ್ವಜನಿಕರು ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಲು ವಿನಂತಿಸಿದರು. ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಜೋಸೆಫ್ ರೋಡ್ರಿಗಸ್ ಸ್ವಾಗತಿಸಿ, ಸ್ಥಾನೀಯ ಸಹಾಯಕ ಅಂಚೆ ಅಧೀಕ್ಷಕ ಮೋಹನ್ ಬಿ ವಂದಿಸಿದರು. ಸಭೆಯಲ್ಲಿ ಪುತ್ತೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ, ಸುಳ್ಯ ಉಪವಿಭಾಗದ ಅಂಚೆ ನಿರೀಕ್ಷಕ ಸುದೀಪ್ ಕುಮಾರ್, ಮಾರುಕಟ್ಟೆ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್, ಹಾಗೂ ವಿಭಾಗೀಯ ಕಛೇರಿಯ ನೌಕರರು ಉಪಸ್ಥಿತರಿದ್ದರು. ಉದಯೇಶ ಕೆದಿಲಾಯರು ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.