ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ನೆಲ್ಯಾಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ‘ದ ರಾಯಲ್’ ಚಿಕನ್ ಮತ್ತು ಮಟನ್ ಮಾರ್ಕೆಟ್ ಜು.29ರಂದು ಶುಭಾರಂಭಗೊಂಡಿತು.
ಅಲ್ಮಸ್ಜಿದುಲ್ ಜಲಾಲಿಯಾ ಮಸೀದಿ ಹೊಸಮಜಲು ಇಲ್ಲಿನ ಖತೀಬರಾದ ಉಮ್ಮರ್ ಕುಂಞಿ ಮುಸ್ಲಿಯಾರ್ ಹಾಗೂ ಖರೀಬರಾದ ಹನೀಫ್ ಸಖಾಫಿಯವರು ದುವಾ: ನೆರವೇರಿಸಿದರು. ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಮಾಜಿ ಸದಸ್ಯ ಹನೀಫ್ ಕರಾವಳಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು. ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡ ಮಾಲಕ ಹಸನಬ್ಬ ಪಿ.,ಹೊಸಮಜಲುರವರು ಮಾತನಾಡಿ, ಇಲ್ಲಿ ಬ್ರಾಯ್ಲರ್, ಟೈಸನ್, ನಾಟಿಕೋಳಿ, ಆಡಿನ ಮಾಂಸ(ಮಟನ್) ಹೋಲ್ಸೇಲ್ ಮತ್ತು ರಿಟೈಲ್ ದರದಲ್ಲಿ ಲಭ್ಯವಿದೆ. ದಿನದ ೨೪ ಗಂಟೆಯೂ ಸೇವೆ ಲಭ್ಯವಿದ್ದು ೨ ಕಿ.ಮೀ.ವ್ಯಾಪ್ತಿಯೊಳಗೆ ಉಚಿತ ಡೆಲಿವರಿಯೂ ಇದೆ. ಆನ್ಲೈನ್ನಲ್ಲಿಯೂ ಹಣಪಾವತಿ ವ್ಯವಸ್ಥೆ ಇದ್ದು ಗ್ರಾಹಕರು ಸಹಕಾರ ಕೋರಿದರು.