HomePage_Banner
HomePage_Banner
HomePage_Banner
HomePage_Banner

ಹಳೆ ಮೋಟಾರ್ ಬೈಕ್ ಎಂಜಿನಿಂದ ಅಡಿಕೆ ಮರಕ್ಕೆ ಔಷಧಿ ಸಿಂಪಡನೆ ಯಂತ್ರ ಆವಿಷ್ಕಾರ ಮಾಡಿದ ನಂದನ್ ಮರ್ದಾಳ ಅವರಿಗೆ ಕಾಂಗ್ರೆಸ್ ಕಿಸಾನ್ ಘಟಕದಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಕಡಬ: ಹಳೆ ಬೈಕ್‌ಗಳ ಇಂಜಿನಿಂದ ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ಯಂತ್ರವನ್ನು ನಿರ್ಮಾಣ ಮಾಡಿದ ವಿಶೇಷ ಸಾಧಕ ಯುವಕ ನಂದನ್ ಮರ್ದಾಳ ಅವರಿಗೆ ಕಡಬ ಬ್ಲಾಕ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಜು.29ರಂದು ಸನ್ಮಾನಿಸಲಾಯಿತು.

ನಂದನ್ ಅವರ ಮನೆಯಲ್ಲಿ ದ.ಕ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೋಹನ ಗೌಡ ಕಲ್ಮಂಜ ಅವರು ಸನ್ಮಾನಿಸಿ ಹಾಗೂ ಯಂತ್ರದ ಪ್ರಾತ್ಯಕ್ಷಿತೆ ನೆರವೇರಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್‌ನ ವತಿಯಿಂದ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು, ಬ್ಲಾಕ್‌ಗಳಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು. ನಂದನ್‌ಕುಮಾರ್ ಅವರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೆಷ ಸನ್ಮಾನ ಮಾಡಲಾಗಿದ್ದು ಇದೀಗ ಕಡಬ ಬ್ಲಾಕ್‌ನಲ್ಲಿ ಎರಡನೇ ಕಾರ್ಯಕ್ರಮ ಇದಾಗಿದೆ. ಹಾಗೆ ಸದಾ ಚಟುವಟಿಕೆಯಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾದ್ಯಂತ ಎಲ್ಲಾ ಬ್ಲಾಕ್‌ಗಳ ನೂತನ ಸಮಿತಿಗಳನ್ನು ರಚನೆ ಮಾಡಿ ಬ್ಲಾಕ್ ಅಧ್ಯಕ್ಷರಿಗೆ ಹೊಸ ಹೊಸ ಕಾರ್ಯಕ್ರಮ ಟಾಸ್ಕ್‌ಗಳನ್ನು ನೀಡಿ ಸಂಘಟನೆಗೆ ಆಧ್ಯತೆ ನೀಡಲಾಗುವುದು. ಇಂತಹ ಯುವ ಕೃಷಿಕರು ಅವರ ಸಾಧನೆ ನಮ್ಮ ಕೃಷಿಕ ಸಮಾಜಕ್ಕೆ ಒಂದು ದೊಡ್ಡ ಆಸ್ತಿಯಾಗಿದೆ.

ಸರಕಾರಗಳ ಸಂಶೋಧನಾ ಇಲಾಖೆಗಳು ಮಾಡಬೇಕಾದ ಕೆಲಸ ಕಾರ್ಯಗಳನ್ನು ಇಂತಹ ಯುವ ಕೃಷಿಕ ವಿಜ್ಞಾನಿಗಳು ಅವಿಷ್ಕಾರ ಮಾಡಿ ಸಮಾಜಕ್ಕೆ ನೀಡುತ್ತಿರುವುದು. ಶ್ಲಾಘನೀಯ ಇಂತಹ ಯುವ ಪ್ರತಿಭೆಗಳನ್ನು ಕೃಷಿಕರನ್ನು ಜಿಲ್ಲೆಯಾದ್ಯಂತ ಕಿಸಾನ್ ಕಾಂಗ್ರೆಸ್ ಗುರುತಿಸಿ ಪ್ರೋತ್ಸಾಹ ನೀಡಲಿದೆ ಎಂದರು. ಕಿಸಾನ್ ಘಟಕದ ಪ್ರಧಾನ ಕಾರ್‍ಯದರ್ಶಿ ಯತೀಶ್ ಕುಮಾರ್ ಬಾನಡ್ಕ, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಕಡಬ, ನೆಲ್ಯಾಡಿ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೊತ್ತಮ ಗೌಡ. ಕೆಪಿಸಿಸಿ ಸದಸ್ಯ ಡಾ| ರಘು, ಅವರು ಮಾತನಾಡಿ ನಂದನ್ ಅವರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಿಸಾನ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸಬಾಸ್ಸನ್ ಕೆ.ಕೆ ಶಿರಾಡಿ, ಸಮಿತಿಯ ಸದಸ್ಯರಾದ ಶಿವರಾಮ ರೈ,ಗಂಗಾಧರ ಶೆಟ್ಟಿ ನೆಲ್ಯಾಡಿ, ಅಚ್ಚುತ ಜೆ. ರೈ ಪೆರಾಬೆ. ಸುಳ್ಯ ಕಿಸಾನ್ ಬ್ಲಾಕ್ ಅಧ್ಯಕ್ಷ ಸುರೇಶ್ ಅಮೈ, ಜತ್ತಪ್ಪ ಶೆಟ್ಟಿ ಮಜಲು, ಶಿವರಾಮ ಯಂ. ಪಿ ಉಬರಡ್ಕ, ಅನಿಲ್ ಬಲ್ಲಡ್ಕ,ವೆಂಕಟರಮಣ ಗೌಡ, ಸುಲೈಮಾನ್ ಉಪಸ್ಥಿತರಿದ್ದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೌಡ ಕೈಕುರೆ ಸಾಧಕರ ಪರಿಚಯ ಮಾಡಿದರು, ಕಡಬ ಬ್ಲಾಕ್ ಅಧ್ಯಕ್ಷ ಭವಾನಿ ಶಂಕರ್ ಸ್ವಾಗತಿಸಿ, ಜಿಲ್ಲಾ ಸಮಿತಿಯ ಸುಲೈಮಾನ್ ಕೊಲ ವಂದಿಸಿದರು.

ಕಾಂಗ್ರೆಸ್‌ನಿಂದ ಮೊದಲ ಸನ್ಮಾನ-ನಂದನ್
ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದನ್ ಮರ್ದಾಳ ಅವರು, ಈಗಾಗಲೇ ನಾನು ಮಾಡಿದ ಚಿಕ್ಕ ಸಾಧನೆಗೆ ಕಾಂಗ್ರೆಸ್ ವತಿಯಿಂದ ದೊಡ್ಡ ಸನ್ಮಾನ ನಡೆದಿದೆ, ಈ ಸನ್ಮಾನಗಳಿಂದ ನನಗೆ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ದೊರಕಿದಂತಾಗಿದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.