ಶಾಸಕರು – ಸಚಿವರ ನಡುವೆ ಟ್ವಿಟರ್ ವಾರ್

ಪುತ್ತೂರು: ಜಿಲ್ಲಾಧಿಕಾರಿ ವರ್ಗಾವಣೆ ಕುರಿತು ಶಾಸಕ,ಮಾಜಿ ಸಚಿವ ಯುಟಿ ಖಾದರ್ ಹಾಗೂ ಉಸ್ತುವಾರಿ ಸಚಿವರ ನಡುವೆ ಟ್ವಿಟರ್ ವಾರ್ ನಡೆಯುತ್ತಿದ್ದು ಟ್ವಿಟರ್‌ನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಟ್ವೀಟ್ ಮಾಡಿಕೊಂಡಿದ್ದಾರೆ.ಯುಟಿ ಖಾದರ್ ಜಿಲ್ಲಾಧಿಕಾರಿಗಳ ವರ್ಗಾವಣೆ ರಾಜಕೀಯ ಪ್ರೇರಿತವಾದುದು ಎಂದು ದೂರಿದ್ದಕ್ಕೆ ಜು.29ಕ್ಕೆ ಮಧ್ಯಾಹ್ನ ಪ್ರತಿಕ್ರೀಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ವರ್ಗಾವಣೆ ಆಡಳಿತಾತ್ಮಕ ನಿರ್ವಹಣೆಗಾಗಿ ರಾಜ್ಯ ಸರ್ಕಾರ ತೆಗೆದುಕೊಂಡ ಸ್ವಾಭವಿಕ ನಿರ್ಣಯವಾಗಿದೆ.ಇಲ್ಲಿ ಯಾವುದೇ ರಾಜಕೀಯ ಪ್ರೇರಣೆ ಇಲ್ಲ ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆನ್ನಲಾದವರ ವಿರುದ್ದ ಈಗಾಗಲೇ ಸ್ವಯಂ ಪ್ರೇರಿತ ಕೇಸು ದಾಖಲಿಸಲಾಗಿದೆ.ಆರೋಪಿಗಳನ್ನು ರಕ್ಷಿಸಲು ಇದು ಖಾದರ್ ಕಾಲವಲ್ಲ ಎಂದು ಖಾರವಾಗಿ ಪ್ರಕ್ರೀಯೆ ನೀಡಿದ್ದರು.

 

ಇದಕ್ಕೆ ಪ್ರತಿಕ್ರೀಯಿಸಿದ ಯು.ಟಿ ಖಾದರ್ ನಿಮ್ಮ ಕಾಲ ಗುಣದಿಂದ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಅಪಮಾನಕ್ಕೀಡಾಗಿ ವಾಪಾಸ್ ಹೋಗಿದ್ದಾರೆ ನಮ್ಮ ಕಾಲದಲ್ಲಿ ನಾನೇ ಅಧಿಕಾರ ಚಲಾಯಿಸಿದ್ದೆ ಈಗ ಕಾಲ ನಿಮ್ಮದಿದ್ದರೂ ಅಧಿಕಾರ ಬೇರೆಯವರ ಕೈಯಲ್ಲಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಟ್ವೀಟ್ ಮಾಡಿ ಶ್ರೀನಿವಾಸ ಪೂಜಾರಿಯವರೇ ನಮ್ಮ ಕಾಲದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕುವ ಧೈರ್ಯ ಯಾರೂ ಮಾಡಿಲ್ಲ,ಯಾವೊಬ್ಬ ಅಧಿಕಾರಿಯನ್ನೂ ರಾತ್ರೋ ರಾತ್ರಿ ಎತ್ತಂಗಡಿ ಮಾಡಿಸಿಲ್ಲ ಎಂದು ಪರೋಕ್ಷವಾಗಿ ಉಸ್ತುವಾರಿ ಸಚಿವರಿಗೆ ಟಾಂಗ್ ನೀಡಿ ಸುದ್ದಿಯಾಗಿದ್ದಾರೆ.ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆಯೊಂದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.