ʼರೋಟರಿ ಕ್ಲಬ್ ಪುತ್ತೂರು ಯುವʼ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ 2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ.ಹರ್ಷ ಕುಮಾರ್ ರೈ ಮಾಡಾವು ಕಾರ್ಯದರ್ಶಿಯಾಗಿ ಉಮೇಶ್ ನಾಯಕ್ ಮತ್ತು ಕೋಶಾಧಿಕಾರಿಯಾಗಿ ಕುಸುಮ್‌ರಾಜ್ ಆಯ್ಕೆಯಾಗಿದ್ದು ಅವರ ಪದಗ್ರಹಣ ಸಮಾರಂಭ ಜು.29 ರಂದು ಸಂಜೆ ಪುತ್ತೂರು ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಿತು.

ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಗೌರವ ಪುರಸ್ಕೃತ ವಿಶ್ವಾಸ್ ಶೆಣೈಯವರು ಪದಗ್ರಹಣ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ರತ್ನಾಕರ ರೈ, ಝೋನಲ್ ಲೆಫ್ಟಿನೆಂಟ್ ಜಗಜೀವನ್‌ದಾಸ್ ರೈ, ರೋಟರಿ ಪುತ್ತೂರು ಈಸ್ಟ್ ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ, ಉಮೇಶ್ ನಾಯಕ್ ಭಾಗವಹಿಸಿದ್ದರು.  ನಿರ್ಗಮಿತ ಅಧ್ಯಕ್ಷ ಚೇತನ್ ಪ್ರಕಾಶ್ ಕಜೆ ಸ್ವಾಗತಿಸಿದರು. ಕಾರ್ಯದರ್ಶಿ ಭರತ್ ಪೈ ವರದಿ ವಾಚಿಸಿದರು. ಸ್ವಸ್ತಿಕಾ ಶೆಟ್ಟಿ ಪ್ರಾರ್ಥಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.