ಆ.14: ನೂತನ ಕಡಬ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್‌ನಿಂದ ಬೇರ್ಪಟ್ಟು ೧೩ ಕ್ಷೇತ್ರಗಳೊಂದಿಗೆ ಹೊಸದಾಗಿ ರಚನೆಗೊಂಡಿರುವ ಕಡಬ ತಾಲೂಕು ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆ.೧೪ರಂದು ಮಧ್ಯಾಹ್ನ ೧೨ ಗಂಟೆಗೆ ಚುನಾವಣೆ ನಡೆಯಲಿದೆ.

14-10-2019ರಂದು ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಕಡಬ ತಾಲೂಕು ಪಂಚಾಯತ್‌ಗೆ 5 ವರ್ಷಗಳ ಉಳಿದ ಅವಧಿಗೆ ಮಾತ್ರ ಅನ್ವಯವಾಗುವಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿ ಜೂ.18ರ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಅದರಂತೆ ಕಡಬ ತಾಲೂಕು ಪಂಚಾಯತ್‌ನ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 12 ಸದಸ್ಯ ಬಲದ ಕಡಬ ತಾಲೂಕು ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಆ.14ರಂದು ಮಧ್ಯಾಹ್ನ 12 ಗಂಟೆಗೆ ಕಡಬ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.

ಗಣೇಶ್ ಕೈಕುರೆ(ಕುಟ್ರುಪ್ಪಾಡಿ), ಪಿ.ವೈ.ಕುಸುಮಾ(ಐತ್ತೂರು), ಆಶಾ ಲಕ್ಷ್ಮಣ್ (ಬಿಳಿನೆಲೆ), ತೇಜಸ್ವಿನಿಶೇಖರ ಗೌಡ (ಗೋಳಿತ್ತೊಟ್ಟು), ಲಲಿತಾ ಈಶ್ವರ (ಚಾರ್ವಾಕ), ರಾಜೇಶ್ವರಿ ಕನ್ಯಾಮಂಗಲ (ಸವಣೂರು), ಉಷಾ ಅಂಚನ್(ನೆಲ್ಯಾಡಿ), ವಲ್ಸಮ್ಮ ಕೆ.ಟಿ.(ಕೌಕ್ರಾಡಿ), ತಾರಾ ಕೇಪುಳು (ಆಲಂಕಾರು), ಜಯಂತಿ ಆರ್.ಗೌಡ (ರಾಮಕುಂಜ), ಅಶೋಕ್ ನೆಕ್ರಾಜೆ (ಸುಬ್ರಹ್ಮಣ್ಯ), ಶುಭದಾ ಎಸ್.ರೈ.(ಎಣ್ಮೂರು)ಯವರು ಕಡಬ ತಾ.ಪಂ.ಸದಸ್ಯರಾಗಿದ್ದಾರೆ. ಇದರಲ್ಲಿ 7 ಮಂದಿ ಬಿಜೆಪಿ ಹಾಗೂ 5 ಮಂದಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. 12 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿರುವ ಅನುಸೂಚಿತ ಜಾತಿಗೆ ಸೇರಿದ ಚಾರ್ವಾಕ ಕ್ಷೇತ್ರದ ಸದಸ್ಯೆ, ಲಲಿತಾ ಈಶ್ವರ ಹಾಗೂ ಸವಣೂರು ಕ್ಷೇತ್ರದ ಸದಸ್ಯೆ ರಾಜೇಶ್ವರಿ ಕನ್ಯಾಮಂಗಲರವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇಬ್ಬರೂ ಬಿಜೆಪಿ ಸದಸ್ಯರುಗಳೇ ಆಗಿದ್ದಾರೆ.

ಫಝಲ್ ಸದಸ್ಯತ್ವ ರದ್ದು:
ಕಡಬ ತಾಲೂಕು ಪಂಚಾಯಿತಿಗೆ ಒಳಪಟ್ಟಿರುವ ಕಡಬ ಗ್ರಾಮ ಪಂಚಾಯಿತಿಯ ಕಡಬ ಮತ್ತು ಕೋಡಿಂಬಾಳ ಗ್ರಾಮವನ್ನೊಳಗೊಂಡ ಗ್ರಾಮ ಪಂಚಾಯಿತಿ ಪ್ರದೇಶವನ್ನು ಸರಕಾರದ ಅಧಿಸೂಚನೆಯಂತೆ ಕಡಬ ಪಟ್ಟಣ ಪಂಚಾಯಿತಿ ಪ್ರದೇಶ ಎಂದು ಘೋಷಿಸಿರುವುದರಿಂದ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 302(ಎ)ಪ್ರಕಾರ ಕಡಬ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕಡಬ ತಾಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿದ್ದ ಫಝಲ್ ಕೋಡಿಂಬಾಳ ಇವರ ಸದಸ್ಯತ್ವವು ರದ್ದುಗೊಂಡಿದೆ. ಇದರಿಂದಾಗಿ ಕಡಬ ತಾ.ಪಂ. ಸದಸ್ಯರ ಸಂಖ್ಯೆ 13ರಿಂದ 12ಕ್ಕೆ ಇಳಿಕೆಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.