ಅನ್‌ಲಾಕ್ 3.0; ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ | ಜಿಮ್ ಓಪನ್, ರಾತ್ರಿ ಕರ್ಫ್ಯೂ ಇಲ್ಲ

Puttur_Advt_NewsUnder_1
Puttur_Advt_NewsUnder_1

ಬೆಂಗಳೂರು: ಅನ್‌ಲಾಕ್ 3.0 ಪ್ರಕಟಿಸಿದ್ದು, ಲಾಕ್‌ಡೌನ್ ನಿಯಮಾವಳಿಯನ್ನು ಇನ್ನಷ್ಟು ಸಡಿಲಿಸಲಾಗಿದೆ. ಕೇಂದ್ರ ಗೃಹ ಇಲಾಖೆ ಬುಧವಾರ ಪ್ರಕಟಿಸಿದ 3.0 ಅನ್‌ಲಾಕ್ ಪ್ರಕಾರ, ದೇಶದಲ್ಲಿನ ಕಂಟೋನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಗಸ್ಟ್ 01ರಿಂದ ಇವು ಜಾರಿಗೆ ಬರಲಿದೆ.

ಇದರ ಪ್ರಕಾರ ಯೋಗ ತರಬೇತಿ ಕೇಂದ್ರಗಳನ್ನು ಹಾಗೂ ಜಿಮ್‌ಗಳನ್ನು ಆ.5ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಮತ್ತು ಇವುಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಸದ್ಯದಲ್ಲೇ ಸ್ಟ್ಯಾಂಡರ್ಡ್ ಅಪರೇಷನ್ ಪ್ರೊಸೀಜರ್ ಪ್ರಕಟಿಸಲಿದೆ. ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ನಿರ್ಬಂಧವನ್ನು ಆಗಸ್ಟ್ 01ರಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ.

ಸೂಕ್ತ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಹಾಗೂ ಇನ್ನಿತರ ಆರೋಗ್ಯ ನಿಯಮಾಳಿಗಳನ್ನು ಪಾಲಿಸಿಕೊಂಡು ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನದ ಆಚರಣೆಯನ್ನು ನಡೆಸಲು ಅನ್‌ಲಾಕ್ 3.0 ನಿಯಮಾವಳಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಲಾ ಕಾಲೇಜುಗಳನ್ನು ಆಗಸ್ಟ್ ೩೧ರವರೆಗೆ ತೆರೆಯದೇ ಇರಲು ಕೇಂದ್ರ ಸರಕಾರ ನಿರ್ಧರಿಸಿದೆ. ಜನರು ಮತ್ತು ಸರಕು ಸಾಗಾಟ ವಾಹನಗಳ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ಇವುಗಳಿಗೆ ಪ್ರತ್ಯೇಕ ಅನುಮತಿಯ ಅಗತ್ಯವೂ ಇರುವುದಿಲ್ಲ. ಇನ್ನು ಕಂಟೋನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿದಂತೆ ದೇಶದ ಉಳಿದೆಲ್ಲಾ ಕಡೆಗಳಲ್ಲಿ ಅನ್‌ಲಾಕ್ 3.0 ನಿಯಮಾವಳಿಗಳಲ್ಲಿ ಅನುಮತಿ ನೀಡಲಾಗಿದೆ. ಮಾರ್ಗಸೂಚಿಯಲ್ಲಿ ತಿಳಿಸಿದ ಎಲ್ಲಾ ನಿರ್ಬಂಧ ತೆರವುಗಳು ಕೋವಿಡ್ 19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನ ನಿಯಮಗಳ ಅಡಿಯಲ್ಲೇ ನಡೆಯಬೇಕು ಮತ್ತು ಮಾಸ್ಕ್ ಧಾರಣೆ, ಸಾಮಾಜಿಕ ಅಂತರಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಅನ್‌ಲಾಕ್ ೩.೦ ನಿರ್ದೇಶನದಲ್ಲಿ ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.

  • ಆ.31ರ ತನಕ ಶಾಲಾ, ಕಾಲೇಜುಗಳು ತೆರೆಯುವಂತಿಲ್ಲ
  • ಮೆಟ್ರೋ ರೈಲು ಸೇವೆಗಳಿಗೆ ಅನುಮತಿ ಇಲ್ಲ.
  • ಚಿತ್ರ ಮಂದಿರ, ಸ್ವಿಮ್ಮಿಂಗ್ ಪೂಲ್ಸ್, ಮನರಂಜನಾ ಪಾರ್ಕ್, ಥಿಯೇಟರ್, ಬಾರ್, ಆಡಿಟೋರಿಯಂ, ಸಭಾಂಗಣಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ.
  • ಯಾವುದೇ ರೀತಿಯ ಸಾಮಾಜಿಕ/ ರಾಜಕೀಯ/ ಕ್ರೀಡಾ/ ಮನರಂಜನಾ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಬೃಹತ್ ಪ್ರಮಾಣದ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿಲ್ಲ.
  • ಕಂಟೊನ್ಮೆಂಟ್ ಪ್ರದೇಶಗಳಲ್ಲಿ ಆಗಸ್ಟ್ ೩೧ರವರೆಗೆ ಲಾಕ್ ಡೌನ್ ಪರಿಸ್ಥಿತಿ ಕಟ್ಟು ನಿಟ್ಟಾಗಿ ಮುಂದುವರಿಯಲಿದೆ. ಮತ್ತು ಈ ಪ್ರದೇಶಗಳಲ್ಲಿ ಅಗತ್ಯ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.
  • ಆಯಾಯ ಪ್ರದೇಶಗಳಲ್ಲಿರುವ ಕಂಟೈನ್ಮೆಂಟ್ ಪ್ರದೇಶಗಳ ಮಾಹಿತಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುವುದು.
  • ಕಂಟೋನ್ಮೆಂಟ್ ಪ್ರದೇಶಗಳನ್ನು ಹೊರತಾಗಿಸಿ ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಇನ್ನಿತರ ಕಡೆಗಳಲ್ಲಿ ಯಾವೆಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಬಹುದು ಮತ್ತು ನೀಡಬಾರದೆಂಬುದನ್ನು ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಕೇಂದ್ರ ಗೃಹ ಇಲಾಖೆ ನೀಡಿದೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.