ಉಪಯೋಗದಲ್ಲಿಲ್ಲದ, ಉಪಯೋಗಕ್ಕೆ ಯೋಗ್ಯವಾದ 4ಜಿ ಸ್ಮಾರ್ಟ್ ಫೋನ್ ನೀಡಿ, ಬಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಿ…ಸಂದೇಶ ವೈರಲ್

Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಹಾಮಾರಿ ಕೊರೋನಾ ವೈರಸ್‌ನಿಂದಾಗಿ ಇಡೀ ಜಗತ್ತೇ ತತ್ತರಿಸಿರುವ ಮೂಲಕ ಜನಸಾಮಾನ್ಯರ ವ್ಯಾಪಾರ-ವಹಿವಾಟುಗಳು ಬುಡ ಮೇಲಾಗಿರುವುದು ಸುಳ್ಳಲ್ಲ. ಇದರ ನಡುವೆ ವಿದ್ಯಾರ್ಥಿಗಳ ಭವಿಷ್ಯವೂ ಡೋಲಾಯಮಾನವಾಗುವತ್ತ ಕೊರೋನಾ ವೈರಸ್ ಬಹಳಷ್ಟು ಪ್ರಭಾವ ಬೀರಿರುವುದು ಅಷ್ಟೇ ಸತ್ಯ. ಆದರೂ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗಬಾರದು ಎನ್ನುವ ದೃಷ್ಟಿಯಲ್ಲಿ ಶಿಕ್ಷಣ ಇಲಾಖೆಯು ಆಯಾ ಶಿಕ್ಷಣ ಸಂಸ್ಥೆಗಳಿಗೆ ಆನ್‌ಲೈನ್ ಮೂಲಕ ಕಲಿಕೆಗೆ ಅನುವು ಮಾಡಿಕೊಟ್ಟಿದ್ದರಿಂದ ಆಯಾ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಕಲಿಕೆಯತ್ತ ಕಾರ್ಯಪ್ರವೃತ್ತವಾಗಿವೆ.

ಈ ಆನ್‌ಲೈನ್ ಕಲಿಕೆ ಎಂಬುದಕ್ಕೆ ಸ್ಮಾರ್ಟ್‌ಫೋನ್‌ಗಳ ಅಗತ್ಯ ಬಹಳಷ್ಟಿದೆ. ಶ್ರೀಮಂತರು ತಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್ ತೆಗೆಸಿಕೊಡುವಲ್ಲಿ ಸಫಲರಾಗುವರು. ಆದರೆ ಬಡಜನರ ಮಕ್ಕಳಿಗೆ ಸ್ಮಾರ್ಟ್‌ಫೋನ್ ಹೊಂದಲು ಅಸಾಧ್ಯವಾಗಿರುತ್ತದೆ. ಬಡಜನರ ಮಕ್ಕಳೂ ಆನ್‌ಲೈನ್ ಕಲಿಕೆಯಲ್ಲಿ ಹಿಂದೆ ಬೀಳಬಾರದು ಎನ್ನುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯೊಂದು  `ಉಪಯೋಗದಲ್ಲಿಲ್ಲದ, ಉಪಯೋಗ್ಯ ಯೋಗ್ಯ 4ಜಿ ಸ್ಮಾರ್ಟ್ ಫೋನ್ ನೀಡಿ, ಬಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಿ…’ ಎಂಬ ತಲೆಬರಹದೊಂದಿಗೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ಸಂದೇಶವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಹೌದು, ಕಳೆದ ವರ್ಷವಷ್ಟೇ ಆಸ್ತಿತ್ವಕ್ಕೆ ಬಂದಿರುವ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ಪದಾಧಿಕಾರಿಗಳು ಹಾಗೂ ಸದಸ್ಯರ ತಲೆಯಲ್ಲಿ ಇಂತಹ ವಿಶಿಷ್ಟವಾದ ಆಲೋಚನೆಯೊಂದು ಗರಿಗೆದರಿದ್ದರಿಂದ ತಲೆಯಲ್ಲಿ ಹೊಳೆದ ಆಲೋಚನೆಯನ್ನು ಸಕಾರಾತ್ಮಕವಾಗಿ ಕಾರ್ಯಪ್ರವೃತ್ತಗೊಳಿಸಬೇಕು, ಈ ನಿಟ್ಟಿನಲ್ಲಿ ಬಡಮಕ್ಕಳ ಕಲಿಕಾ ಭವಿಷ್ಯಕ್ಕೆ ನೀರೆರೆಯಬೇಕು ಎಂಬಂತೆ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಯಾರಲ್ಲಿ ಉಪಯೋಗದಲ್ಲಿಲ್ಲದ, ಉಪಯೋಗ್ಯ ಯೋಗ್ಯ 4ಜಿ ಸ್ಮಾರ್ಟ್ ಫೋನ್ ಇದೆಯೋ, ಅವರುಗಳು ತಂದೊಪಿಸಿದ್ದಲ್ಲಿ ಅಂತಹ ಮೊಬೈಲಿನ ದುರಸ್ತಿಯನ್ನು ರೋಟರಿ ಸೆಂಟ್ರಲ್ ಸ್ವತಹ ಮುಂದೆ ನಿಂತು ಮಾಡಿಸಿಕೊಂಡು ಅರ್ಹ ಬಡವಿದ್ಯಾರ್ಥಿಗಳಿಗೆ ನೀಡುವ ಕಾಯಕವನ್ನು ಮಾಡುವ ಮೂಲಕ ಆ ಬಡವಿದ್ಯಾರ್ಥಿಯ ಬಾಳಿನಲ್ಲಿ ದಾರಿದೀಪವಾಗುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಇದೇ ರೋಟರಿ ಸೆಂಟ್ರಲ್ ಸಂಸ್ಥೆಯವರು ವಾಲ್ ಆಫ್ ಹ್ಯುಮ್ಯಾನಿಟಿ(ಮಾನವೀಯತೆಯ ಗೋಡೆ) ಎಂಬ ಹೆಸರಿನಲ್ಲಿ ದಾನಿಗಳಿಂದ ಕಲೆ ಹಾಕಿದ ಅಗತ್ಯ ಹಾಗೂ ಉಪಯೋಗಿಸಲ್ಪಡುವ ವಸ್ತುಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಮನೆಮಾತಾಗಿತ್ತು.

ಎಲ್ಲಿ ನೀಡಬಹುದು…
ಪುತ್ತೂರು-ಬಪ್ಪಳಿಗೆ ಎಂಬಲ್ಲಿನ ಆಶ್ಮಿ ಕಂಫರ್ಟ್‌ನಲ್ಲಿ ಕಳೆದ ವರ್ಷ ಉದ್ಘಾಟನೆಗೊಂಡ `ವಾಲ್ ಆಫ್ ಹ್ಯುಮ್ಯಾನಿಟಿ’ ಕಪಾಟಿನಲ್ಲಿ ಉಪಯೋಗದಲ್ಲಿಲ್ಲದ, ಉಪಯೋಗಕ್ಕೆ ಯೋಗ್ಯ 4ಜಿ ಸ್ಮಾರ್ಟ್ ಫೋನ್‌ನ್ನು ಇಡಬಹುದು. ಈಗಾಗಲೇ ಕೆಲ ದಾನಿಗಳು ಮುಂದೆ ಬಂದು ಸ್ಮಾರ್ಟ್‌ಫೋನ್‌ನ್ನು ನೀಡಿರುತ್ತಾರೆ. ಸಹೃದಯಿ ನಾಗರಿಕರು ಈ ಒಂದು ಉತ್ತಮ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಬಡ ವಿದ್ಯಾರ್ಥಿಗಳ ಕಲಿಕೆಗೆ ಆಧಾರಸ್ತಂಭವಾಗುವಂತೆ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕ್ಲಬ್‌ನ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿ(9448428854), ಕಾರ್ಯದರ್ಶಿ ಅಶೋಕ್ ನಾಯ್ಕ(9480157781), ನಿಕಟಪೂರ್ವ ಅಧ್ಯಕ್ಷ ಸಂತೋಷ್ ಶೆಟ್ಟಿ(9448129464) ನಂಬರಿಗೆ ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.