Breaking News

ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ಅಧಿಕಾರ ಹಸ್ತಾಂತರ – ಆಡಳಿತಾಧಿಕಾರಿಯಾಗಿ ತುಳಸಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಂಡೂರು ಗ್ರಾಮದ ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಮುಂಡೂರು ಗ್ರಾಮ ಕರಣಿಕರಾದ ತುಳಸಿ ಅವರ ನೇಮಕ ಮಾಡಲಾಗಿದ್ದು ಅವರಿಗೆ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯ ಜು.೩೦ರಂದು ನಡೆಯಿತು. ವ್ಯವಸ್ಥಾಪನಾ ಸಮಿತಿಯ ನಿರ್ಗಮನ ಅಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಅವರು ಹಸ್ತಾಂತರಿಸಿದರು.

ಅರ್ಚಕ ರಮೇಶ್ ಬೈಪಡಿತ್ತಾಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಜನಾರ್ದನ ಜೋಯಿಸ ಕುತ್ತಿಗದ್ದೆ, ಶಕುಂತಳಾ ನೀಲಪ್ಪ ಪೂಜಾರಿ, ಮುಂಡೂರು ಗ್ರಾ.ಪಂ ಮಾಜಿ ಸದಸ್ಯ, ಅಶೋಕ್ ಕುಮಾರ್ ಪುತ್ತಿಲ, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸುಂದರ ಗೌಡ ನಡುಬೈಲು, ಪ್ರಸಾದ್ ಬೈಪಡಿತ್ತಾಯ, ದೇವಸ್ಥಾನದ ಸಿಬ್ಬಂದಿ ಕೇಶವ ನಾಯ್ಕ, ಐತ್ತಪ್ಪ ಗೌಡ ಪುಣಚ, ಹಾರ್ದಿಕ್ ಪುಣಚ, ಗೋಪಾಲ ನಾಯ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.