ಆತೂರು ಬೈಲ್: ಜಾನುವಾರು ಮಾಂಸ ಮಾರಾಟ | ಓರ್ವ ಬಂಧನ; ಇನ್ನೋರ್ವ ಪರಾರಿ

Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಕೊಲ ಗ್ರಾಮದ ಆತೂರು ಬೈಲು ಎಂಬಲ್ಲಿ ರಬ್ಬರ್ ತೋಟವೊಂದರಲ್ಲಿ ಅಕ್ರಮವಾಗಿ ಜಾನುವಾರು ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿರುವುದಾಗಿ ವರದಿಯಾಗಿದೆ.

ಕೊಯಿಲ ಗ್ರಾಮದ ಆತೂರು ಬೈಲು ಎಂಬಲ್ಲಿ ರಜಾಕ್ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಅಕ್ರಮವಾಗಿ ಜಾನುವಾರಗಳ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜು.೩೦ರಂದು ಬೆಳಿಗ್ಗೆ ೯.೪೫ಕ್ಕೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಆರೋಪಿ ಮಹಮ್ಮದ್ ಮುಕ್ಸಿನ್ ಎಂಬಾತ ಸೆರೆ ಸಿಕ್ಕಿದ್ದು ಮತ್ತೊಬ್ಬ ಆರೋಪಿ ಇಲ್ಯಾಸ್ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಘಟನಾ ಸ್ಥಳದಿಂದ ಪ್ಲಾಸ್ಟಿಕ್ ಕವರ್‌ನಲ್ಲಿ ತಲಾ ೧ ಕೆ.ಜಿ. ಯಂತೆ ತೂಕ ಮಾಡಿ ಕಟ್ಟಿದ್ದ ೩೦ ಮಾಂಸದ ಕಟ್ಟುಗಳು, ೨ ಕೆ.ಜಿ ಯಂತೆ ತೂಕ ಮಾಡಿ ಕಟ್ಟಿರುವ ೧೦ ಮಾಂಸದ ಕಟ್ಟುಗಳು ಹಾಗೂ ಪ್ಲಾಸ್ಟಿಕ್ ಟಾರ್‌ಪಲ್ ಮೇಲೆ ಪ್ಯಾಕ್ ಮಾಡಲು ಬಾಕಿಯಿದ್ದ ಸುಮಾರು ೧೫ ಕೆ.ಜಿ. ತೂಕದ ದನದ ಮಾಂಸವನ್ನು ಮತ್ತು ಮಾಂಸ ಮಾಡಲು ಉಪಯೋಗಿಸುವ ಕಬ್ಬಿಣದ ಚೂರಿ-೦೧, ಪ್ಲಾಸ್ಟಿಕ್ ಬಕೆಟ್-೦೧, ಪ್ಲಾಸ್ಟೀಕ್ ಕೈ ಚೀಲ-೦೨, ಮಾಂಸ ಮಾಡಲು ಉಪಯೋಗಿಸಿದ ಮರದ ತುಂಡು-೦೧ ಸ್ವಾದೀನಕ್ಕೆ ಪಡೆದು ಆರೋಪಿಗಳಾದ ಇಲ್ಯಾಸ್, ಮಹಮ್ಮದ್ ಮುಕ್ಸಿನ್ ಹಾಗೂ ರಜಾಕ್‌ರವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ದನದ ಮಾಂಸದ ಅಂದಾಜು ಮೌಲ್ಯ ೧೬.೨೫೦ ರೂ.,ಎಂದು ಅಂದಾಜಿಸಲಾಗಿದೆ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ. ಕಡಬ ಎಸ್.ಐ.ರುಕ್ಮ ನಾಯ್ಕ್‌ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ಸುರೇಶ್, ಬೀಟ್ ಪೊಲೀಸ್ ಆಗಿರುವ ಹೆಡ್‌ಕಾನ್ಸ್‌ಸ್ಟೇಬಲ್ ಹರೀಶ್, ಕಾನ್ಸ್‌ಸ್ಟೇಬಲ್ ಭವಿತ್ ರೈ ಪಾಲ್ಗೊಂಡಿದ್ದರು.

ಆರೋಪಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.