ನಿಯಮ ಪಾಲನೆಯೊಂದಿಗೆ ಹಬ್ಬಾಚರಣೆಗೆ ಸಿದ್ದತೆ.. ತ್ಯಾಗ, ಸಮಾನತೆಯ ಸಂಕೇತವೇ ಬಕ್ರೀದ್

Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆ೦ಜಲಾಡಿ

ಮುಸ್ಲಿ೦ ಬಾ೦ಧವರು ಭಕ್ತಿ, ಸಡಗರದೊಂದಿಗೆ ಆಚರಿಸುವ ಹಬ್ಬಗಳ ಪೈಕಿ ಬಕ್ರೀದ್ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಹಬ್ಬಕ್ಕೆ ‘ಈದ್ ಉಲ್ ಅಝ್ಹಾ’ ಎಂಬ ಹೆಸರೂ ಇದೆ.

ನಮಗೆ ಅಮೂಲ್ಯ ಎನಿಸಿದ್ದನ್ನು ತ್ಯಾಗ ಮಾಡುವಂತಿರಬೇಕು ಎಂಬುವುದೂ ಬಕ್ರೀದ್‌ನ ಸಾರವಾಗಿದೆ. ಸುಮಾರು ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ತಮಗೆ ಅತ್ಯಂತ ಪ್ರೀತಿ ಪಾತ್ರರಾದ ಮಗ ಇಸ್ಮಾಯೀಲ್‌ರನ್ನು ದೇವರಿಗಾಗಿ ತ್ಯಾಗ ಮಾಡಲು ಸಿದ್ಧರಿದ್ದರು ಎಂಬುವುದೇ ಬಕ್ರೀದ್‌ನ ಮುಖ್ಯ ಸಾರಾ೦ಶವಾಗಿದೆ.

ಪ್ರವಾದಿ ಇಬ್ರಾಹೀಮರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಆಡೊಂದನ್ನು ಬಲಿಪಡೆದುಕೊಳ್ಳುತ್ತಾರೆ. ತ್ಯಾಗದ ಕುರುಹಾಗಿ ಆಡನ್ನು ಬಲಿ ನೀಡುವುದೇ ಬಕ್ರೀದ್ ಆಗಿದೆ. ಇಲ್ಲಿ ಆಡು ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುವುದೂ ಈ ಹಬ್ಬದ ಸ೦ದೇಶವಾಗಿದೆ.

ಬಕ್ರೀದ್ ಹಬ್ಬವು ಇಸ್ಲಾಂನ ಇತಿಹಾಸ ಸ್ಮರಿಸುವ ಹಬ್ಬವೂ ಆಗಿದೆ. ಹಜ್ ಯಾತ್ರೆಗೆ ಸೌದಿ ಅರೇಬಿಯಾದ ಮಕ್ಕಾಗೆ ತೆರಳಿದವರು ನಡೆಸುವ ಧಾರ್ಮಿಕ ವಿಧಿ, ವಿಧಾನಗಳು ಈ ಹಬ್ಬದೊಂದಿಗೆ ಸಮಾರೋಪಾದಿಯಾಗುತ್ತದೆ.

ಸಮಾನತೆ, ಭ್ರಾತೃತ್ವದ ಸಂದೇಶ:
ಸಾಮಾನ್ಯವಾಗಿ ಮಾಂಸ ಎಂದರೆ ಕೊಂಚ ದುಬಾರಿಯಾಗಿದ್ದು ಮಧ್ಯಮ, ಕೆಳವರ್ಗದ ಜನತೆ ಈ ಪೌಷ್ಟಿಕ ಆಹಾರವನ್ನು ಸೇವಿಸುವಲ್ಲಿ ವಂಚಿತರಾಗಿರುತ್ತಾರೆ. ಆದರೆ ಬಕ್ರೀದ್ ಸಮಯದಲ್ಲಿ ಉಳ್ಳವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಆಡುಗಳನ್ನು ಕುರ್ಬಾನಿ ನೀಡಬೇಕಾಗಿದೆ.
ವಿಶೇಷವಾಗಿ ಬಡಬಗ್ಗರಿಗೆ ಊಟ ಮತ್ತು ಮಾಂಸ ಹಂಚುವುದರಲ್ಲಿ ಮನೆಯ ಸದಸ್ಯರು ಸಮಾನವಾಗಿ ಭಾಗಿಯಾಗಿ ಕರುಣೆ, ಅನುಕಂಪ, ಬಡವರ ಬಗ್ಗೆ ವಾತ್ಸಲ್ಯ, ನೆರವು ನೀಡುವ ಮನಸ್ಸನ್ನು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಮೂಡುವಂತೆ ಮಾಡಲಾಗುತ್ತದೆ.

ಬಕ್ರೀದ್ ದಿನ ಹೊಸ ಹೊಸ ಬಟ್ಟೆ ಬರೆಗಳನ್ನು ಧರಿಸಿ ಮಸೀದಿಗೆ ಬರುವ ಮುಸಲ್ಮಾನ ಬಾ೦ಧವರು ಮಸೀದಿಯಲ್ಲಿ ನಡೆಯುವ ವಿಶೇಷ ನಮಾಜಿನಲ್ಲಿ ಪಾಲ್ಗೊ೦ಡು ನ೦ತರ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಬಳಿಕ ಬ೦ಧು ಮಿತ್ರರ, ನೆ೦ಟರಿಸ್ಟರ ಮನೆಗಳಿಗೆ ತೆರಳಿ ಊಟೋಪಚಾರ ಸ್ವೀಕರಿಸುವ ಮೂಲಕ ಕುಟು೦ಬ ಸ೦ಬ೦ಧವನ್ನು ಗಟ್ಟಿಗೊಳಿಸುವ ಕಾರ್ಯವೂ ನಡೆಯುತ್ತದೆ. ಸರ್ವರಿಗೂ ತ್ಯಾಗ, ಬಲಿದಾನದ ಸ೦ದೇಶ ಸಾರುವ ಬಕ್ರೀದ್ ಹಬ್ಬದ ಶುಭಾಶಯಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.