ದೇವರ ಮೇಲಿನ ಭರವಸೆ ಕಳೆದುಕೊಳ್ಳಬೇಡಿ ಅಲ್ಲಾಹನು ಕರುಣಾಮಯಿ: ಹಕೀಂ ಫೈಝಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಗತ್ತೇ ಕೊರೊನಾ ಮಹಾಮಾರಿಯಿಂದ ತಲ್ಲಣಗೊಂಡಿದೆ, ದೇವರು ಎಲ್ಲಿದ್ದಾನೆ ಎಂದು ಕೇಳುವ ಅನೇಕರು ಇದ್ದಾರೆ. ದೇವರಿದ್ದಾನೆ, ಆತನ ಮೇಲಿನ ಭರವಸೆ ಕಳೆದುಕೊಳ್ಳಬೇಡಿ  ಅಲ್ಲಾಹನು ಕರುಣಾಮಯಿ ಎಂದು ಕುಂಬ್ರ ಬದ್ರಿಯಾ ಜುಮಾ ಮಸೀದಿ ಇಮಾಂ ಲಕ್ಮಾನುಲ್‌ಹಕೀಂ ಫೈಝಿ ಹೇಳಿದರು.ಅವರು ಬಕ್ರೀದ್ ಪ್ರಯುಕ್ತ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಈದ್ ಪ್ರಾರ್ಥನೆಗೆ ನೇತ್ರತ್ವ ವಹಿಸಿ ಈದ್ ಸಂದೇಶ ನೀಡಿದರು.


ನಾವು ನಮ್ಮ ಕಷ್ಟ , ನೋವುಗಳನ್ನು ಅಲ್ಲಾಹನ ಮೇಲೆ ಭಾರ ಹೊರಿಸಿ ಆತನೊಂದಿಗೆ ವಿಶ್ವ ಒಳಿತಿಗಾಗಿ , ಆರೋಗ್ಯವಂತ ಸೌಹಾರ್ಧ ಸಮಾಜಕ್ಕಾಗಿ ಪ್ರಾರ್ಥಿಸಿರಿ. ಒಳ್ಳೆಯ ಮನಸ್ಸುಗಳ ಪ್ರಾರ್ಥನೆಯನ್ನು ಆತ ಖಂಡಿತವಾಗಿ ಸ್ವೀಕರಿಸುತ್ತಾನೆ. ನಾವು ಸತ್ಯವಂತರಾಗಬೇಕು. ನೆರೆಹೊರೆಯವರನ್ನು ಪ್ರೀತಿಸುವ ಮನಸ್ಸು ಉಳ್ಳವರಾಗಬೆಕು, ಹಸಿದವನಿಗೆ ಅನ್ನ ನೀಡುವ ನೊಂದವನಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ಸಜ್ಜನರಾಗಿ ಬಾಳಿ ಬದುಕಬೇಕು. ತ್ಯಾಗಮೀಯಿ ಬದುಕು ನಮಗೆ ಒಳತನ್ನು ಕರುಣಿಸುತ್ತದೆ ಎಂದು ಹೇಳಿದರು.
ಜಮಾತ್ ಕಮಿಟಿ ಅಧ್ಯಕ್ಷ ಹಮೀದ್ ರಾಯಲ್, ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಜೊತೆ ಕಾರ್ಯದರ್ಶಿ ಬಶೀರ್ ಕಡ್ತಿಮಾರ್, ಮಾಜಿ ಅಧ್ಯಕ್ಷ ಅಬ್ದುಲ್ಲ ಕೋಳಿಗದ್ದೆ, ಇಸ್ಮಾಯಿಲ್ ಮಗಿರೆ, ಮಾಜಿ ಕಾರ್ಯದರ್ಶಿ ಅರಬಿಕುಂಞಿ ಮಗಿರೆ, ಅಬ್ದುಲ್‌ರಹಿಮಾನ್ ಕೊಯಿಲ ಮೊದಲಾದವರು ಉಪಸ್ಥಿತರಿದ್ದರು. ಈದ್ ನಮಾಜಿನಲ್ಲಿ ಜಮಾತಿನವರು ಮಾತ್ರ ಭಾಗವಹಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ನಿರ್ವಹಿಸಲಾಯಿತು.

 

 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.