ಸವಣೂರಿನಲ್ಲಿ ತಾಮ್ರ ಪಾತ್ರೆ ನಿರ್ಮಾಣದಲ್ಲಿ ಯಶಸ್ಸುಗೈದು, ಯುವಪೀಳಿಗೆಗೆ ಮಾದರಿಯಾದ ರೋಶನ್

Puttur_Advt_NewsUnder_1
Puttur_Advt_NewsUnder_1

ಚಿತ್ರ/ ಬರಹ- ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಸರಕಾರಿ ಅಥವಾ ಖಾಸಗಿ ಉದ್ಯೋಗ ಬೇಕು ಎಂಬ ನೆಲೆಯಲ್ಲಿ ಊರು ಬಿಟ್ಟು ಪಟ್ಟಣ ಸೇರುವ ಯುವ ಪೀಳಿಗೆ ನಡುವೆ ತನ್ನ ಹುಟ್ಟೂರಿನಲ್ಲಿ ಸಣ್ಣ ಮಟ್ಟದ ಸ್ವ-ಉದ್ಯೋಗ ಘಟಕವನ್ನು ಸ್ಥಾಪಿಸಿ, ಅದರಲ್ಲಿ ಯಶಸ್ಸು ಕಂಡು, ಯುವ ಪೀಳಿಗೆಗೆ ಮಾದರಿಯಾದ ಸವಣೂರಿನ ಯುವಕ ರೋಶನ್ ಇಂದು ಹತ್ತೂರಲ್ಲಿ ಹೆಸರನ್ನು ಗಳಿಸಿದ್ದಾರೆ.

ಕಡಬ ತಾಲೂಕಿನ ಸವಣೂರು ಮಾಲೆತ್ತಾರು ಕೃಷ್ಣಪ್ಪ ಗೌಡ ಮತ್ತು ಭವಾನಿ ದಂಪತಿ ಪುತ್ರ ರೋಶನ್‌ರವರು ತನ್ನ ಮನೆಯ ಅಂಗಳದಲ್ಲಿಯೇ ತಾಮ್ರ ಪಾತ್ರೆಗಳ ನಿರ್ಮಾಣದ ಘಟಕ” ಭವಾನಿ ಮೆಟಲ್ಸ್” ಸಂಸ್ಥೆಯನ್ನು ಪ್ರಾರಂಭಿಸಿ, ಸ್ವಾವಲಂಬಿ ಬದುಕಿಗೆ ಅರ್ಥ ಬರೆದಿದ್ದಾರೆ.

ಪುತ್ತೂರಿನಲ್ಲಿ ೮ ವರುಷಗಳ ಹಿಂದೆ ಮೆಟಲ್ಸ್ ನಿರ್ಮಾಣ ಮಾಡುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರ್ಪಡೆಯಾಗಿ, ಅಲ್ಲಿ ಸತತ ಪರಿಶ್ರಮದಿಂದ ತಾಮ್ರದ ವಿವಿಧ ಪಾತ್ರೆಗಳನ್ನು ಮಾಡುವ ವಿಧಾನವನ್ನು ಕಲಿತುಕೊಂಡು ಇಧೀಗ ತನ್ನದೇ ಸ್ವಂತ ಉದ್ಯಮವನ್ನು ಹುಟ್ಟೂರಿನಲ್ಲಿ ಸ್ಥಾಪಿಸಿ, ೫ ಮಂದಿಗೆ ಉದ್ಯೋಗವನ್ನು ನೀಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ, ಇವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತು ಪಡೆದುಕೊಂಡು, ಸ್ವುಉದ್ಯೋಗದ ವಿವಿಧ ಅನುಭವವನ್ನು ಕಲಿತುಕೊಂಡಿದ್ದಾರೆ.

ಅತ್ಮನಿರ್ಭರ ಭಾರತ್ ಯೋಜನೆಗೆ ಸಾಥ್
ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆಯಲ್ಲಿ ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಿಂದ ಅರ್ಥಿಕ ಸಹಾಯವನ್ನು ಪಡೆದು ಈ ಘಟಕವನ್ನು ಸ್ಥಾಫಿಸಿ, ಯಶಸ್ಸು ಕಾಣುವ ಮೂಲಕ ಪ್ರಧಾನಿ ನರೆಂದ್ರರ ಮೋದಿರವರ ಅತ್ಮನಿರ್ಭರ ಭಾರತ್ ಯೋಜನೆಗೆ ಸಾಥ್ ನೀಡಿದ್ದಾರೆ.

 

ಉತ್ತಮ ಗುಣ ಮಟ್ಟದ ವಸ್ತುಗಳ ತಯಾರಿ
2020ರಲ್ಲಿ ತಾಮ್ರ ಪಾತ್ರೆ ನಿರ್ಮಾಣದ ಘಟಕವನ್ನು ಪ್ರಾರಂಭಿಸಿರುವ ರೋಶನ್‌ರವರು ಶ್ರದ್ಧೆ ಹಾಗೂ ಕಠಿಣ ದುಡಿಮೆಯಿಂದ ಉತ್ಪಾದನೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವುದರಿಂದ ಈ ಉದ್ಯಮ ಬೆಳವಣಿಗೆಗೆ ಪೂರಕವಾಯಿತು. ಬಹೃತ್ ಹಂಡೆಗಳು, ಕೊಡಪಾನ, ತಂಬಿಗೆ, ಕೊಪ್ಪರಿಗೆ, ಪಾವು, ಸೇರು,ಕಲಶ, ದೇವಸ್ಥಾನ ಮತ್ತು ದೈವಸ್ಥಾನಗಳ ಮುಗುಳಿ, ದೈವಗಳ ಮೊಗ, ಮೂರ್ತಿ ಕಡ್ತಲೆ, ಕತ್ತಿ, ಕುಡಿಯುವ ನೀರಿನ ಫಿಲ್ಟರ್ ಹಂಡೆ, ದೇವರ ಹುಂಡಿ, ತಿರುಪತಿ ತಿಮ್ಮಪ್ಪನಿಗೆ ಕಟ್ಟುವ ಮುಡಿಪು ಹುಂಡಿ, ಸಹಿತ ಅನೇಕ ಪರಿಕರಗಳನ್ನು ಇಲ್ಲಿ ಮಾಡಲಾಗುತ್ತದೆ.

ವಿವಿಧ ತಾಲೂಕುಗಳಿಂದ ಬೇಡಿಕೆ
ತಾಮ್ರ ಪಾತ್ರೆಗಳ ಉತ್ಪಾದನೆಗೆ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನಿಂದ ಹೆಚ್ಚು ಬೇಡಿಕೆಗಳು ಬರುತ್ತಿದ್ದು, ಸವಣೂರು ಪೇಟೆಯಿಂದ ಬೆಳ್ಳಾರೆ ರಸ್ತೆಯಲ್ಲಿ 2 ಕಿ.ಮೀ ಕ್ರಮಸಿದಾಗ, ಪರಣೆ ಎಂಬ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಹತ್ತಿರವೇ ಇರುವ ಈ ಘಟಕವನ್ನು ನೀವು ಕಾಣಬಹುದು.

ಅಣ್ಣನ ಕೆಲಸಕ್ಕೆ ಸಾಥ್ ನೀಡುವ ಸಹೋದರ
ಬೆಂಗಳೂರಿನಿಂದ ಮೆಟಲ್ ಶೀಟ್ ತರಿಸಿ, ಇಲ್ಲಿ ಪಾತ್ರೆ ಇನ್ನಿತರ ತಾಮ್ರದ ವಸ್ತುಗಳನ್ನು ತಯಾರಿಸಲಾಗುತ್ತದೆ, ಉತ್ಪಾದಕ ವಸ್ತುಗಳಿಗೆ ಮಾರ್ಕೆಟಿಂಗ್ ಮತ್ತು ಎಲ್ಲಾ ವ್ಯವಹಾರಗಳನ್ನು ರೋಶನ್‌ರವರ ಸಹೋದರ ಪ್ರಕಾಶ್ ಮಾಲೆತ್ತಾರುರವರು ನೋಡಿಕೊಳ್ಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.