HomePage_Banner
HomePage_Banner
HomePage_Banner

ರೋಟರಿ ಸೆಂಟ್ರಲ್, ಎಲೈಟ್, ಸ್ವರ್ಣ, ಇನ್ನರ್‌ವೀಲ್‌ನಿಂದ ಶವ ಸಂಸ್ಕಾರದಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರಿಗೆ ಪಿ.ಪಿ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಮತ್ತು ಇನ್ನರ್‌ವೀಲ್ ಕ್ಲಬ್ ಪುತ್ತೂರು ಇವುಗಳು ಜಂಟಿಯಾಗಿ ಕೊರೊನದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರ ಮಾಡುತ್ತಿರುವ ಜಿಲ್ಲಾಡಳಿತದಿಂದ ಅನುಮತಿ ಮತ್ತು ತರಬೇತಿ ಪಡೆದಿರುವ ಸ್ವಯಂಸೇವಾ ಸಂಸ್ಥೆಗಳಾದ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಪುತ್ತೂರು ವಲಯ ಮತ್ತು ಪುತ್ತೂರು ನಗರ ಕೊರೊನ ಜಾಗೃತಿ ದಳದ ಕಾರ್ಯಕರ್ತರಿಗೆ ಶವ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಉಪಯೋಗಿಸಲು ತಲಾ 8 ಪಿ.ಪಿ. ಕಿಟ್‌ಗಳನ್ನು ಮೆಗಾ ಪ್ರಿಂಟ್ಸ್ ಪುತ್ತೂರು ಇದರ ವಠಾರದಲ್ಲಿ ಜು.30 ರಂದು ನೀಡಲಾಯಿತು.

ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಪುತ್ತೂರು ವಲಯದ ಕೋಶಾಧಿಕಾರಿ ಅಶ್ರಫ್ ಮುಕ್ವೆ, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಜಿಲ್ಲಾ ಸಮಿತಿ ಕನ್ವಿನರ್ ಆಸೀಫ್ ಕಬಕ ಮತ್ತು ಪುತ್ತೂರು ನಗರ ಕೊರೊನ ಜಾಗೃತಿ ದಳದ ಪ್ರಮುಖರ ಪರವಾಗಿ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್‌ರವರು ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ವೆಂಕಟರಾಜ್, ಪುತ್ತೂರು ಸ್ವರ್ಣ ಅಧ್ಯಕ್ಷೆ ಸೆನೋರಿಟಾ ಆನಂದ್, ಪುತ್ತೂರು ಎಲೈಟ್ ನಿಯೋಜಿತ ಅಧ್ಯಕ್ಷ ಮನ್ಸೂರ್, ಇನ್ನರ್‌ವೀಲ್ ಅಧ್ಯಕ್ಷೆ ಸೀಮಾ ನಾಗರಾಜ್‌ರವರಿಂದ ಪಿ.ಪಿ. ಕಿಟ್‌ಗಳನ್ನು ಸ್ವೀಕರಿಸಿದರು. ಅಲ್ಲದೆ ಮುಂದೆಯೂ ಇಂತಹ ಕೊಡುಗೆಗಳನ್ನು ಆಗತ್ಯ ಬಿದ್ದರೆ ನೀಡುವುದಾಗಿ ನಾಲ್ಕು ಸೇವಾ ಸಂಸ್ಥೆಗಳ ಅಧ್ಯಕ್ಷರುಗಳು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಪುತ್ತೂರು ಸೆಂಟ್ರಲ್‌ನ ನಿರ್ಗಮಿತ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ನಾಯ್ಕ, ಪುತ್ತೂರು ಎಲ್ಯೆಟ್‌ನ ಆಸ್ಕರ್ ಆನಂದ್, ರಜಾಕ್ ಕಬಕಕಾರ್ಸ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.