‘ಸಮರ್ಥ ಸಾರಥಿ’ ಬಿರುದು ನೀಡಿ ಶಿಶು ಅಭಿವೃದ್ಧಿ ಇಲಾಖೆ ಚಾಲಕ ದಾಮೋದರ ಕರ್ಕೇರವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯಲ್ಲಿ 26 ವರ್ಷಗಳ ಕಾಲ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ದಾಮೋದರ ಕರ್ಕೇರರವರಿಗೆ ‘ಸಮರ್ಥ ಸಾರಥಿ’ ಎಂಬ ಬಿರುದು ನೀಡಿ  ಅಭಿನಂದಿಸಿ ಬೀಳ್ಕೊಡಲಾಯಿತು.

                                
ಜು.31ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ನಡೆಯಿತು. ಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ನಿವೃತ್ತರನ್ನು ಸನ್ಮಾನಿ ಗೌರವಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ, ದಾಮೋದರ ರವರ ಪತ್ನಿ ರತ್ನಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಲ್ವಿಚಾರಕಿಯರಾದ ವನಿತಾ, ಭಾರತಿ, ಅಂಗನವಾಡಿ ಕಾರ್ಯಕರ್ತೆಯರಾದ ಉಮಾವತಿ, ವಿಜಯ ಈಶ್ವರ ಗೌಡ, ನಿವೃತ್ತ ಮೇಲ್ವಿಚಾರಕಿ ಹೇಮ ರಾಮಚಂದ್ರ, ತಾ.ಪಂ ವಿಷಯ ನಿರ್ವಾಹಕ ಅಡ್ಪಂಗಾಯ, ಪುತ್ರಿ ರಶ್ಮೀತಾ, ನಿವೃತ್ತರ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರು.

ಹಿರಿಯ ಮೇಲ್ವೀಚಾರಕಿ ಭಾರತಿ ಸ್ವಾಗತಿಸಿದರು. ಮೇಲ್ವೀಚಾರಕಿ, ಮಂಗಳಾ,  ಜನಾರ್ದನ ಗಾಣಿಗ, ಪ್ರವೀಣ್, ಸಿಬಂದಿ ಶಶಿಕುಮಾರ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಆಳ್ವ ಹೂ ನೀಡಿ ಸ್ವಾಗತಿಸಿದರು. ತಾ.ಪಂ ಚಾಲಕ‌ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.