ಇಳಂತಿಲದಲ್ಲಿ ಸೇತುವೆಯ ಕೆಳಗಡೆ ಗೋಮಾಂಸ ಎಸೆದ ಪ್ರಕರಣ – ಹೊಡೆದಾಟ: ಈರ್ವರು ಪುತ್ತೂರು ಆಸ್ಪತ್ರೆಗೆ ದಾಖಲು – ಪೊಲೀಸರಿಂದ ಮಾಹಿತಿ ಸಂಗ್ರಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಕಡಮ್ಮಾಜೆಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಗಳೀರ್ವರನ್ನು ಪ್ರಶ್ನಿಸಲಾಗಿ ಬಳಿಕದ ಬೆಳವಣಿಗೆಯಲ್ಲಿ ಎಸೆಯಲ್ಪಟ್ಟ ತ್ಯಾಜ್ಯ ಗೋಮಾಂಸದ್ದಾಗಿದೆ ಎಂಬ ಕಾರಣಕ್ಕೆ ಎರಡು ತಂಡಗಳೊಳಗೆ ಘರ್ಷಣೆ ನಡೆದ ಘಟನೆ ಜುಲೈ 30 ರಂದು ರಾತ್ರಿ 11 ಗಂಟೆಯ ವೇಳೆಗೆ ನಡೆದಿದೆ.

ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಲೋಕೇಶ್ ಮತ್ತು ಶಂಕರ

ಘಟನೆಗೆ ಸಂಬಂಧಿಸಿದಂತೆ ಮೊಗ್ರುವಿನ ಲೋಕೇಶ್ ಮತ್ತು ಕಡಮ್ಮಾಜೆಯ ಶಂಕರ ಎಂಬವರು ಪುತ್ತೂರಿನ ಆದರ್ಶ ಆಸ್ಪತ್ರೆಗೆ  ದಾಖಲಾಗಿದ್ದಾರೆ.
ತ್ಯಾಜ್ಯ ಎಸೆದದನ್ನು ಪ್ರಶ್ನಿಸಿದಕ್ಕೆ ಅಶ್ರಫ್ ಮತ್ತು ಅವರೊಂದಿಗಿದ್ದವರು ನಮ್ಮ ಹಲ್ಲೆ ನಡೆಸಿದ್ದಾರೆ ಎಂದು ಲೋಕೇಶ್ ಆರೋಪಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ತಂಡದ ಮುಸ್ತಪಾ ಎಂಬವರು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ರಾತ್ರಿಯೇ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಎಎಸ್ ‌ಐ ಚೋಮರವರು ಆದರ್ಶ ಆಸ್ಪತ್ರೆಗೆ ಬಂದು ಹಲ್ಲೆಗೊಳಗಾದವರ ಮಾಹಿತಿ ಕಲೆಹಾಕಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಉಪ್ಪಿನಂಗಡಿ ಎಸ್ ಐ ಹೀರಯ್ಯ ‘ಸುದ್ದಿ’ ಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.