HomePage_Banner
HomePage_Banner
HomePage_Banner
HomePage_Banner

ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಶ್ರೀಧರ್ ಗೌಡ ಅಧಿಕಾರ ಸ್ವೀಕಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಶ್ರೀಧರ್ ಗೌಡ ಪಾನತ್ತಿಲ ರವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಮೊದಲು ಪ್ರಾಂಶುಪಾಲರಾಗಿದ್ದ ಪ್ರೋ.ಝೇವಿಯರ್ ಡಿಸೋಜಾ ಜು.31ರಂದು ನಿವೃತಿಯನ್ನು ಹೊಂದಿದ್ದು, ಅವರು ಡಾ. ಶ್ರೀಧರ್ ಗೌಡ ರವರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಡಾ. ಶ್ರೀಧರ್ ಗೌಡ ಪಿ.ರವರು ಮೂಲತ: ಸುಳ್ಯ ತಾಲೂಕಿನ ಉಬರಡ್ಕದ ಮಿತ್ತೂರಿನವರಾಗಿದ್ದಾರೆ.

ಡಾ. ಶ್ರೀಧರ್ ಗೌಡ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಿಂದ ಎಂ.ಎ ಹಾಗೂ ಪಿ.ಎಚ್.ಡಿ ಪದವಿಯನ್ನು ಪಡೆದುಕೊಂಡಿದ್ದು, ಕಳೆದ 30 ವರ್ಷಗಳಿಂದ ಭೋದನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ವೃತ್ತಿ ಜೀವನದ ಆರಂಭವನ್ನು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಿಂದ ಆರಂಭಿಸಿದ ಅವರು, ನಂತರ ಮಂಗಳೂರಿನ ಯುನಿವರ್ಸಿಟಿ ಕಾಲೇಜು, ಮಂಗಳೂರು ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರ ಸ್ನಾತಕೋತರ ವಿಭಾಗದಲ್ಲಿ ಪ್ರಾಆಧ್ಯಪಕರಾಗಿ ಸೇವೆ ಸಲ್ಲಿಸಿದ್ದರು.

                                                         

1996ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯನ್ನು ಸೇರಿದ ಅವರು ಮೊದಲಿಗೆ ಸರಕಾರಿ ಪ್ರಥಮದರ್ಜೆ ಕಾಲೇಜು ರಾಯಚೂರು, ನಂತರ ಬೆಳ್ಳಾರೆಯ ಸರಕಾರಿ ಪ್ರಥಮದರ್ಜೆ ಕಾಲೇಜು, ಸರಕಾರಿ ಪ್ರಥಮದರ್ಜೆ ಕಾಲೇಜು ನ್ಯಾಮತಿ, ಸರಕಾರಿ ಪ್ರಥಮದರ್ಜೆ ಕಾಲೇಜು ಹೊನ್ನಾಳಿ ಹಾಗೂ ಪುತ್ತೂರಿನ ಜಿಡೆಕಲ್ಲಿನಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಹಾ ಪ್ರಾಧ್ಯಪಕರಾಗಿ ದುಡಿದಿದ್ದಾರೆ. ನಂತರ 1 ವರ್ಷ ಜಿಡೆಕಲ್ಲು ಕಾಲೇಜಿನ ಪ್ರಾಂಶುಪಾಲರಾಗಿ ಹಾಗೂ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ನೋಡಲ್ ಆಫೀಸರ್ ಆಗಿದ್ದ ಅವರು, ಕಳೆದ ಆರು ವರ್ಷಗಳಿಂದ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು.

 

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.