ರಬ್ಬರ್ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವಂತೆ ಡಿ.ಕೆ.ಶಿವಕುಮಾರ್‌ಗೆ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಮಿತಿ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರಬ್ಬರ್ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಮನವಿ ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 50 ಸಾವಿರ ಕುಟುಂಬಗಳು ರಬ್ಬರ್ ಕೃಷಿಯಲ್ಲಿ ತೊಡಗಿದ್ದಾರೆ. ರಬ್ಬರ್ ಧಾರಣೆಯ ದಾಖಲೆ ಮಟ್ಟದ ಕುಸಿತದಿಂದಾಗಿ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ರಬ್ಬರ್ ಕೃಷಿಕರ ಬದುಕು ಈಗ ತೀರ ದುಸ್ತರವಾಗಿದೆ. 2014ರ ನಂತರ ತೀವ್ರ ಬೆಲೆ ಕುಸಿತ, ಪ್ರಾಕೃತಿಕ ಹಾನಿಗಳಿಂದಾಗಿ ರಬ್ಬರ್ ಬೆಳೆಗಾರರು ತೀರಾ ಸಂಕಷ್ಟದಲ್ಲಿದ್ದಾರೆ. ಕಠಿಣವಾದ ಗುಡ್ಡ ಪ್ರದೇಶದಲ್ಲಿ ಪರಿಶ್ರಮದಿಂದ ರಬ್ಬರ್ ಬೆಳೆದು ಆರ್ಥಿಕ ಅಭಿವೃದ್ಧಿಗೆ ಕಾರಣವಾದ ರಬ್ಬರ್ ಬೆಳೆಗಾರರ ಕುಟುಂಬಗಳು ಈಗ ಬೀದಿ ಪಾಲಾಗುವ ಸ್ಥಿತಿಯಲ್ಲಿವೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪರಿಸ್ಥಿತಿಯೂ ದುಸ್ತರವಾಗಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿ ಹಾಗೂ ವಿದೇಶದಿಂದ ಕಡಿಮೆ ದರ್ಜೆಯ ರಬ್ಬರ್ ಆಮದು ಆಗುತ್ತಿರುವುದೇ ರಬ್ಬರ್ ಬೆಲೆ ಕುಸಿತಕ್ಕೆ ಕಾರಣವಾಗಿದೆ. ವಿದೇಶಿ ಆಮದು ನಿಯಂತ್ರಣ ಮಾಡಿದಲ್ಲಿ ದೇಶದ ರಬ್ಬರ್‌ಗೆ ಉತ್ತಮ ಬೇಡಿಕೆ ಬರಲಿದೆ. ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ವಿದೇಶಿ ರಬ್ಬರ್ ಆಮದಿನ ಮೇಲೆ ಸುಂಕ ವಿಧಿಸಿದ ಕಾರಣ ಇಲ್ಲಿನ ರಬ್ಬರ್‌ಗೆ ಉತ್ತಮ ಬೆಲೆ ಲಭಿಸಿ ರೈತರ ಬಾಳು ಹಸನಾಗಿತ್ತು. ರೈತರ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವ ದ.ಕ.ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ತಮ್ಮ ಮೇಲಿನ ಭರವಸೆಯಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರ ಸಮಸ್ಯೆಗೆ ಧ್ವನಿಯಾದ ತಾವು ಜಿಲ್ಲಾ ರಬ್ಬರ್ ಕೃಷಿಕರ ಸಮಸ್ಯೆಗೂ ಸ್ಪಂದಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಮಿತಿ ಅಧ್ಯಕ್ಷ ಮೋಹನ್ ಗೌಡ, ಕೆಪಿಸಿಸಿ ಕಿಸಾನ್ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಉಸ್ತುವಾರಿ ಯತೀಶ್ ಕುಮಾರ್ ಬಾನಡ್ಕ, ಸೆಬಾಸ್ಟಿನ್ ಕೆ.ಕೆ.ಶಿರಾಡಿ, ಜೋಸ್ ಕೆ.ಜೆ.ನೆಲ್ಯಾಡಿ, ಸುರೇಶ್ ಅಮೈ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.