ಸಮರ್ಪಣಾ ಮಹಿಳಾ ವೇದಿಕೆಯ ಸಾಂಕೇತಿಕ ವರಮಹಾಲಕ್ಷ್ಮೀಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್-೧೯ಗೆ ಸಂಬಂಧಿಸಿ ಸಾಮಾಜಿಕ ಅಂತರ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮರ್ಪಣಾ ಮಹಿಳಾ ವೇದಿಕೆಯಿಂದ ವರ್ಷಂಪ್ರತಿ ವಿಜ್ರಂಭಣೆಯಿಂದ ನಡೆಯುತ್ತಿದ್ದ ವರಮಹಾಲಕ್ಷ್ಮೀ ಪೂಜೆಯಲ್ಲಿ ಸಾಮೂಹಿಕಕ್ಕೆ ಬ್ರೇಕ್ ಹಾಕಿ ಸಾಂಕೇತಿಕವಾಗಿ ಸಮಿತಿ ಪದಾಧಿಕಾರಿಗಳು ಮಾತ್ರ ಸೇರಿಕೊಂಡು ಪೂಜೆ ನಡೆಸಿದ್ದಾರೆ.

ಜು.31ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ೧೫ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಸಾಂಕೇತಿಕವಾಗಿ ನಡೆಯಿತು. ಸಮರ್ಪಣಾ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಕುಂತಳಾ ಶೆಟ್ಟಿ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ವಜ್ರಮಾತಾ ಮಹಿಳಾ ಭಜನಾ ತಂಡದ ಅಧ್ಯಕ್ಷೆ ನಯನಾ ರೈ ಮತ್ತು ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಜ್ರಮಾತಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಅವರ ಮಾರ್ಗದರ್ಶನದಲ್ಲಿ ರಾಜೇಶ್ ಭಟ್ ಅವರು ಪೂಜಾ ವೈದಿಕ ಕಾರ್ಯಕ್ರಮ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.