ಈಶ್ವರಮಂಗಲ: ಶ್ರೀ ಗಜಾನನ ಹಿ.ಪ್ರಾ ಶಾಲೆಯ ನಿವೃತ್ತ ಸಹಶಿಕ್ಷಕ ರತ್ನಪ್ಪ ರಾಠೋಡ್ ರವರಿಗೆ ಸನ್ಮಾನ ಸಮಾರಂಭ

Puttur_Advt_NewsUnder_1
Puttur_Advt_NewsUnder_1

 ಈಶ್ವರಮಂಗಲ: ಜು. 31ರಂದು ಈಶ್ವರಮಂಗಲ ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಿವೃತ್ತಿ ಹೊಂದಿದ ಸಹಶಿಕ್ಷಕ ರತ್ನಪ್ಪ ರಾಠೋಡ್ ರವರನ್ನು   ಗೌರವದೊಂದಿಗೆ ಸನ್ಮಾನಿಸಲಾಯಿತು. ಗಜಾನನ ವಿದ್ಯಾಸಂಸ್ಥೆಗಳ ಗೌರವಾಧ್ಯಕ್ಷರಾದ ಕೋನೆತೋಟ ಜಿ.ಕೆ. ಮಹಾಬಲೇಶ್ವರ ಭಟ್ಟರು ರತ್ನಪ್ಪ ರಾಠೋಡ್ ರವರಿಗೆ ಹಾರ ಹಾಕಿ, ಶಾಲು ಹೊದಿಸಿ,  ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಒಟ್ಟು 25ವರ್ಷ  3ತಿಂಗಳ  ಶಿಕ್ಷಕ ವೃತ್ತಿಯಲ್ಲಿ ಈ ಶಾಲೆಯಲ್ಲಿ 12 ವರ್ಷ, 3 ತಿಂಗಳು ತೃಪ್ತಿಕರ ಸೇವೆ ಸಲ್ಲಿಸಿದ್ದೀರಿ, ನಿಮಗೂ ನಿಮ್ಮ ಕುಟುಂಬದವರಿಗೂ ಒಳಿತಾಗಲೆಂದು ಶುಭಾಶೀರ್ವಾದ ಮಾಡಿದರು.  ಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ ಅಧ್ಯಕ್ಷೀಯ ಮಾತುಗಳಲ್ಲಿ ಸರಳ ಸ್ವಭಾವದ ಪ್ರಾಮಾಣಿಕ ಶಿಕ್ಷಕರೆಂದು ಹೇಳುತ್ತಾ, ನಿಮ್ಮ ಊರಿನಲ್ಲಿ ಸಮಾಜಮುಖೀ ಕಾರ್ಯವನ್ನು ಮಾಡಿರೆಂದು ಸಲಹೆ ನೀಡಿ  ಶುಭ ಹಾರೈಸಿದರು.

 

ಸಂಚಾಲಕ ಶಿವರಾಮ.ಪಿ. ಮಕ್ಕಳೊಂದಿಗೆ, ಪೋಷಕರೊಂದಿಗೆ, ಸಹೋದ್ಯೋಗಿಗಳೊಂದಿಗೆ  ಉತ್ತಮ ಬಾಂಧವ್ಯದಲ್ಲಿದ್ದ ಶಿಕ್ಷಕರೆಂದು ಹೇಳುತ್ತಾ ಅವರ ಕೆಲಸಗಳನ್ನು ನೆನೆದು ಶುಭ ಹಾರೈಸಿದರು ಶಾಲೆಯ ಮುಖ್ಯೋಪಾಧ್ಯಾಯ ಶಂಕರನಾರಾಯಣ.ಎನ್ . ಎಲ್ಲರನ್ನೂ ಸ್ವಾಗತಿಸಿ, ಸಹೋದ್ಯೋಗಿ ಸ್ನೇಹಿತನ ಸಮಯ ಪ್ರಜ್ಞೆ , ಸಹಕಾರ, ಸಹನೆ , ಕರ್ತವ್ಯನಿಷ್ಠೆಯನ್ನು ಸ್ಮರಿಸಿ, ಅವರಿಗೂ, ಅವರ ಕುಟುಂಬದವರಿಗೂ ದೇವರು ಸುಖ, ಶಾಂತಿ, ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸಿದರು. ಕಾರ್ಯಕ್ರಮ ನಿರೂಪಿಸಿದ ಸಹ ಶಿಕ್ಷಕ ಎನ್. ನರೇಂದ್ರ ಭಟ್, ನಿವೃತ್ತ ಮುಖ್ಯಗುರು ಕೆ.ಶಿವರಾಮ ಶರ್ಮ, ನಿವೃತ್ತಿಗೊಳ್ಳುತ್ತಿರುವ ಶಿಕ್ಷಕರಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಶಾಮಣ್ಣ, ಆಡಳಿತ ಮಂಡಳಿ ನಿರ್ದೇಶಕ ನಾಗಪ್ಪ ಮಾಸ್ತರ್ ಬೊಮ್ಮೆಟ್ಟಿ ಉಪಸ್ಥಿತ ರಿದ್ದರು. ರತ್ನಪ್ಪ ರಾಠೋಡ್ ರವರು ನನಗೆ ಅನ್ನ ನೀಡಿದ ಸಂಸ್ಥೆಯಿದು ಎಂದು ಸ್ಮರಿಸುತ್ತಾ ಗೌರವಾಧ್ಯಕ್ಷರ ಆಶೀರ್ವಾದ ಯಾಚಿಸಿಸಿದರು , ಆಡಳಿತ ಮಂಡಳಿಯವರ ಹಾಗೂ ಎಲ್ಲ ಸಹೋದ್ಯೋಗಿಗಳ ಸಹಕಾರಕ್ಕೆ ಕೃತಜ್ಞತೆ ಸಮರ್ಪಿಸಿದರು. ನೆನಪಿಗಾಗಿ ಒಂದು ಕಪಾಟನ್ನು ಕೊಡುಗೆ ನೀಡಿದರು. ಅವರ ಪತ್ನಿ, ಮಗ, ಮಗಳು ಕಾರ್ಯಕ್ರಮಕ್ಕೆ ನಮ್ಮ ಆಮಂತ್ರಣ ಮನ್ನಿಸಿ ಆಗಮಿಸಿದ್ದರು. ಸನ್ಮಾನಿಸುವ ವೇಳೆ ಸಹಶಿಕ್ಷಕಿ ಉಷಾಕಿರಣ್ ಕಿರು ಪರಿಚಯ ವಾಚಿಸಿದರು. ಸಹಶಿಕ್ಷಕಿ ಪುಷ್ಪಲತಾ ಧನ್ಯವಾದ ಸಮರ್ಪಿಸಿದರು. ಸಹಶಿಕ್ಷಕಿ ಆಶಾ , ಅಕ್ಷರದಾಸೋಹ ಸಿಬ್ಬಂದಿಗಳಾದ ನೇತ್ರಾವತಿ ಮತ್ತು ಗೀತಾ ಲಘು  ಉಪಹಾರ ವಿತರಿಸಿ ಸಹಕರಿಸಿದರು. ಆಡಳಿತ ಮಂಡಳಿ ನಿರ್ದೇಶಕ ಕೆ. ವೆಂಕಟೇಶ್ವರ ಶರ್ಮ, ಡಿ.ರವಿಕುಮಾರ್, ಸುಕೇಶ್ ರೈ, ಆಂಗ್ಲ ಮಾಧ್ಯಮ  ಪ್ರೌಢ ಶಾಲೆಯ ಮುಖ್ಯಗುರು  ರಾಮ ನಾಯ್ಕ್, ನಿವೃತ್ತ ಸಹೋದ್ಯೋಗಿಗಳಾದ ಹುಕ್ರಪ್ಪ ಗೌಡ, ಆನಂದ ರೈ, ಕೆ.ಸುಶೀಲ, ಕೆ.ಆರ್.ಸರೋಜಿನಿ ಬೊಮ್ಮೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.