ಶ್ರೀ ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ ಭವಾನಿ ಗೌಡ ಪರಂಗಾಜೆಯವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಂಸ್ಥೆಯ ಮೇಲಿನ ಗೌರವಕ್ಕೆ ಮಾದರಿ – ಚಂದ್ರಶೇಖರ್ ಮುಂಗ್ಲಿಮನೆ
  • ಭವಾನಿ ಗೌಡರು ರೋಲ್ ಮೊಡೆಲ್ – ಯು.ಪಿ.ರಾಮಕೃಷ್ಣ
  • ಪ್ರಾಮಾಣಿಕ ಸೇವೆಗೆ ಸದಾ ಚಿರ ಋಣಿಯಾಗಿದ್ದೇವೆ – ಚಿದಾನಂದ ಬೈಲಾಡಿ
  • ಮುಂದಿನ ದಿನವೂ ನನ್ನಿಂದಾಗುವ ಸೇವೆ ನೀಡಲು ಸಿದ್ಧ – ಭವಾನಿ ಗೌಡ
  • ಸಿಬ್ಬಂದಿಗಳನ್ನು ಹುರಿದುಂಬಿಸುವ ಆಡಳಿತ ವೈಖರಿ – ಉಮೇಶ್
  • ವಿದ್ಯಾರ್ಥಿಗಳಿಗೆ ಉತ್ತಮ ಪ್ರಾಂಶುಪಾಲರು- ಕಿಶೋರ್ ನೆಲ್ಲಿಕಟ್ಟೆ
  • ಶಿಕ್ಷಕ ಯಾವಾಗಲು ಅಪ್‌ಡೇಟ್ ಆಗಿರಬೇಕು – ಪ್ರಕಾಶ್ ಪೈ

ಪುತ್ತೂರು: ಕೊಂಬೆಟ್ಟಿನಲ್ಲಿರುವ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಭವಾನಿ ಗೌಡ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಜು.೩೧ರಂದು ಸಂಸ್ಥೆಯ ವಠಾರದಲ್ಲಿ ಬೀಳ್ಕೊಡುಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಭವಾನಿ ಗೌಡ ಪರಂಗಾಜೆ ಅವರಿಗೆ ಶಾಲು, ಹಾರ, ಪೇಟ ತೊಡಿಸಿ, ಫಲಪುಷ್ಪ ನೀಡಿ ಗೌರವಿಸಿದರು.


ಹುದ್ದೆ, ಸಂಸ್ಥೆಯ ಮೇಲಿನ ಗೌರವಕ್ಕೆ ಮಾದರಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಹಿರಿಯ ನಿರ್ದೇಶಕ ಚಂದ್ರಶೇಖರ್ ಮುಂಗ್ಲಿಮನೆ ಅವರು ಮಾತನಾಡಿ ಕುರುಂಜಿ ವೆಂಕಟ್ರಮಣ ಗೌಡರು ಹುಟ್ಟುಹಾಕಿದ ಈ ಸಂಸ್ಥೆ ಇವತ್ತು ಅತೀ ಎತ್ತರಕ್ಕೆ ಬೆಳೆಯುವಲ್ಲಿ ಭವಾನಿ ಗೌಡರ ಪಾಲು ಇದೆ. ಅವರಿಂದ ಸಂಸ್ಥೆ ಮತ್ತು ಹುದ್ದೆಯ ಮೇಲಿನ ಗೌರವ ಸಂಸ್ಥೆಗೆ ಉತ್ತಮ ಹೆಸರು ತಂದಿದೆ. ಎಷ್ಟೋ ಮಂದಿಗೆ ಸ್ವಂತ ದುಡಿಮೆಯ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರು ಶ್ರೀ ಮಹಾಲಿಂಗೇಶ್ವರ ಐಟಿಐಯ ಬೆಸ್ಟ್ ಪ್ರಾಂಶುಪಾಲರಾಗಿ ಭಾಜನರಾಗಿದ್ದಾರೆ ಎಂದು ಹೇಳಿದರು.


ವಾನಿ ಗೌಡರು ರೋಲ್ ಮೊಡೆಲ್:
ಸಂಸ್ಥೆಯ ಸಂಚಾಲಕ ಯು.ಪಿ.ರಾಮಕೃಷ್ಣ ಅವರು ಮಾತನಾಡಿ ಮನೆಯವರ ಸಹಕಾರ ಇದ್ದಲ್ಲಿ ಸಂಸ್ಥೆಯ ಕೆಲಸ ಒತ್ತಡವಿಲ್ಲದೆ ನಿಭಾಯಿಸಬಹುದು. ಅಂತಹ ಮನೋಸ್ಥಿತಿಯನ್ನು ಮನೆಯವರು ಭವಾನಿ ಗೌಡರಿಗೆ ನೀಡಿದ್ದಾರೆ. ಅವರ ಯಶಸ್ವಿನ ಹಿಂದಿನ ಕ್ಷಣವನ್ನು ನೋಡಿದಾಗ ಅವರೊಬ್ಬ ರೋಲ್ ಮೋಡೆಲ್ ಆಗಿದ್ದಾರೆ. ಮಹಾಲಿಂಗೇಶ್ವರ ಐಟಿಐಯಿಂದ ಅವರಿಗೆ ನಿವೃತ್ತಿ ಆದರೂ ಅವರನ್ನು ವೃತ್ತಿಯಿಂದ ಬಿಡುಗಡೆ ಆಗಿದ್ದಾರೆ. ಆದರೆ ಅವರ ಸಲಹೆ ಮಾರ್ಗದರ್ಶನ ಇನ್ನೂ ಬೇಕಾಗಿದೆ. ಹಾಗಾಗಿ ಅವರು ಮುಂದೆ ನಮ್ಮ ಸಲಹಾ ಸಮಿತಿಯಲ್ಲಿ ಇರುತ್ತಾರೆ ಎಂದು ಹೇಳಿದರು.
ಪ್ರಾಮಾಣಿಕ ಸೇವೆಗೆ ಸದಾ ಚಿರ ಋಣಿಯಾಗಿದ್ದೇವೆ:
ಸಂಸ್ಥೆಯ ನಿರ್ದೇಶಕ ಚಿದಾನಂದ ಬೈಲಾಡಿ ಅವರು ಮಾತನಾಡಿ ಒಂದು ಸಂಸ್ಥೆಯಲ್ಲಿ ಎಷ್ಟು ಸಮಯ ಕೆಲಸ ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಇರುವಷ್ಟು ಸಮಯ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಂತಿಕೆಯ ಬದುಕನ್ನು ಕಲಿಸಿ ಕೊಟ್ಟದ್ದಲ್ಲದೆ ಅವರ ಪ್ರೀತಿಯನ್ನು ಸಂಪಾದಿಸಿದ ಕೀರ್ತಿ ಭವಾನಿ ಗೌಡ ಅವರದ್ದು, ಯಾವುದೇ ಸಮಸ್ಯೆ ಬಂದರೂ ಅದನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಸಾಧಿಸಿದ್ದಾರೆ. ಅವರ ಪ್ರಾಮಾಣಿಕ ಸೇವೆಗೆ ನಾವು ಸದಾ ಚಿರ ಋಣಿಯಾಗಿದ್ದೇವೆ ಎಂದು ಹೇಳಿದ ಅವರು ಮುಂದಿ ದಿನ ನೂತನವಾಗಿ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸುವ ಪ್ರಕಾಶ್ ಪೈ ಅವರಿಗೆ ಹೊಸ ಸವಾಲು ಇದೆ. ಕೋವಿಡ್ ಸವಾಲಿನ ಮುಂದೆ ಅವರು ತನ್ನ ಕಾರ್ಯವೈಖರಿಯನ್ನು ತೋರಿಸಬೇಕಾಗಿದೆ ಎಂದು ಹೇಳಿದ ಅವರು ಶುಭ ಹಾರೈಸಿದರು.
ಮುಂದಿನ ದಿನವೂ ನನ್ನಿಂದಾಗುವ ಸೇವೆ ನೀಡಲು ಸಿದ್ಧ:
ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಂದ ಸನ್ಮಾನ ಸ್ವೀಕರಿಸಿದ ನಿರ್ಗಮನ ಪ್ರಾಂಶುಪಾಲ ಭವಾನಿ ಗೌಡ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಿವೃತ್ತಿ ಸಹಜ. ಕೆಲವೊಂದುನಿವೃತ್ತಿ ಸಮಾರಂಭದಲ್ಲಿ ನಾನೆ ಪಾಲ್ಗೊಂಡಿದ್ದೇನೆ. ಆದರೆ ಅದೇ ನಿವೃತ್ತಿ ನನ್ನ ಪಾಲಿಗೆ ಬಂದಾಗ ಕಷ್ಟ ಅನಿಸುತ್ತದೆ. ಸಂಸ್ಥೆಯ ಆಡಳಿತ ಮಂಡಳಿಯ ಈ ಹಿಂದಿನ ಸಂಚಾಲಕರು, ಪ್ರಸ್ತುತ ಇರುವ ಸಂಚಾಲಕರು ಮತ್ತು ನಿರ್ದೇಶಕರು ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಯು.ಪಿ.ರಾಮಕೃಷ್ಣ ಅವರು ಆಡಳಿತದಲ್ಲಿ ಹೊಸ ಬದಲಾವಣೆ ತಂದು ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಒಟ್ಟು ಟೀಮ್ ವರ್ಕ್‌ನಿಂದಾಗಿ ಸಂಸ್ಥೆಯ ಅಭಿವೃದ್ದಿ ಆಗುತ್ತದೆ. ಸಂಸ್ಥೆ ನನಗೆ ಬೇಕಾದಷ್ಟು ಕೊಟ್ಟಿದೆ. ಮುಂದಿನ ದಿನ ಸಂಸ್ಥೆಗೆ ಯಾವ ರೀತಿ ಸೇವೆ ಬೇಕು ಅದನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದು ಅವರು ಭರವಸೆ ನೀಡಿದರು.

6 ತಿಂಗಳು ರಿಕ್ಷಾ ಚಲಾಯಿಸಿದೆ: ನಾನು ತನ್ನ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ದುಡಿಯುವ ಹುಮ್ಮನ್ನಸಿನಿಂದ ೬ ತಿಂಗಳು ಆಟೋ ರಿಕ್ಷಾದಲ್ಲಿ ದುಡಿದಿದ್ದೇನೆ. ಉಪ್ಪಿನಂಗಡಿಯಲ್ಲಿ ರಿಕ್ಷಾವನ್ನು ಓಡಿಸುತ್ತಿದ್ದ ನನಗೆ ಜೀವನ ಪಾಠವನ್ನು ಕಲಿತೆ. ಹೊಸ ಅನುಭವನ್ನೂ ರಿಕ್ಷಾ ತಂದು ಕೊಟ್ಟಿತು. ಬಳಿಕ ತನ್ನ ಅಣ್ಣನ ಸಹಕಾರದೊಂದಿಗೆ ಉನ್ನತ ಶಿಕ್ಷಣಕ್ಕೆ ಹೊರಟೆ. ಐಟಿಐಗೆ ಆರಂಭದ ದಿನದಲ್ಲಿ ಸೇರಿಕೊಂಡಾಗ ಎಲ್ಲಾ ಹುದ್ದೆ ನಿಭಾಯಿಸಿದ್ದೆ. ಒಮ್ಮೆ ಬಿಟ್ಟು ಹೋದಾಗ ಗುಂಡ್ಯ ಅಣ್ಣಯ್ಯ ಗೌಡರು ಮತ್ತೆ ಬರಮಾಡಿಸಿಕೊಂಡರು. ಮತ್ತೊಮ್ಮೆ ರಸ್ತೆ ಅಪಘಾತದಿಂದ ನಡೆಯಲಾಗದ ಪರಿಸ್ಥಿತಿ ಬಂದು ಐಟಿಐ ಕೆಲಸ ಬಿಡುವ ಸಂದರ್ಭ ಒದಗಿದಾಗ ಸಿ.ಪಿ.ಜಯರಾಮ ಗೌಡರು ನನ್ನನ್ನು ಮತ್ತೆ ಐಟಿಐಗೆ ಬರುವಂತೆ ಹುರಿದುಂಬಿಸಿದರು ಎಂದು ಭವಾನಿ ಗೌಡ ಪರಂಗಾಜೆ ಅವರು ತನ್ನ ಅನಿಸಿಕೆಯಲ್ಲಿ ತಿಳಿಸಿದರು.

ಸಿಬ್ಬಂದಿಗಳನ್ನು ಹುರಿದುಂಬಿಸುವ ಆಡಳಿತ ವೈಖರಿ :
ಕಚೇರಿ ಅಧೀಕ್ಷ ಉಮೇಶ್ ಎಮ್ ಅವರು ಮಾತನಾಡಿ ಸಂಸ್ಥೆಗೆ ಉತ್ತಮ ಫಲಿತಾಂಶ ಬರಬೇಕೆಂಬ ಪ್ರಾಂಶುಪಾಲರ ಶ್ರಮ ಮಹತ್ವದ್ದು, ಅವರ ಶ್ರಮದಿಂದಲೇ ಪುತ್ತೂರು ಸಂಸ್ಥೆಯಲ್ಲೇ ಪರೀಕ್ಷಾ ಕೇಂದ್ರ ಆರಂಭಗೊಂಡಿತ್ತು. ಕೇವಲ ಶಿಕ್ಷಣ ಮಾತ್ರವಲ್ಲ ಶಿಕ್ಷಣ ಪಡೆದವರಿಗೆ ಕ್ಯಾಂಪಸ್ ಸೆಲಕ್ಷನ್ ಮೂಲಕ ಉದ್ಯೋಗ ಕೊಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇವೆಲ್ಲ ಅವರ ಆಡಳಿತ ವೈಖರಿಯಿಂದ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮ ಪ್ರಾಂಶುಪಾಲರಾಗಿ ಗುರುತಿಸಿಕೊಂಡವರು:
ದ.ಕ.ಜಿಲ್ಲಾ ಗೌಡ ವಿದ್ಯಾವರ್ದಕ ಸಂಘದ ಜೊತೆಕಾರ್ಯದರ್ಶಿಯಾಗಿರುವ ಸಂಸ್ಥೆಯ ನಿರ್ದೇಶಕ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಅವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಾಂಶುಪಾಲ ವಿದಾಯಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರುವ ಮತ್ತು ಉತ್ತಮ ಸಂದೇಶಗಳನ್ನು ರವಾನಿಸಿದರುವುದು ಗಮನಿಸಿದಾಗ ಭವಾನಿ ಗೌಡ ಅವರು ವಿದ್ಯಾರ್ಥಿಗಳಿಂದ ಉತ್ತಮ ಪ್ರಾಂಶುಪಾಲರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಶಿಕ್ಷಕ ಯಾವಾಗಲು ಅಪ್‌ಡೇಟ್ ಆಗಿರಬೇಕು:
ಸಂಸ್ಥೆಯ ನೂತನ ಪ್ರಾಂಶುಪಾಲರಾಗಿ ಆಯ್ಕೆಗೊಂಡ ಪ್ರಕಾಶ್ ಪೈ ಅವರು ಮಾತನಾಡಿ ಅಜ್ಜನ ಮತ್ತು ತಾಯಿಯ ಪ್ರೇರಣೆ ನನ್ನನ್ನು ಶಿಕ್ಷಣ ವೃತ್ತಿಗೆ ಕಳುಹಿಸಿದೆ. ದೈವ ಸಂಕಲ್ಪದಿಂದ ಈ ಹುದ್ದೆ ಲಭಿಸಿದೆ. ಎಲ್ಲರ ಸಹಕಾರ ನನಗೆ ಬೇಕಾಗಿದೆ ಎಂದ ಅವರು ತರಬೇತಿಯಲ್ಲಿ ಅನುಭವ ಇದೆ. ಹೊರತು ಆಡಳಿತದಲ್ಲಿ ಇಲ್ಲ. ಆದರೂ ಜವಾಬ್ದಾರಿ ವಹಿಸುವ ಸಂದರ್ಭ ಕೋವಿಡ್ ಸವಾಲು ಎದುರಿಸಬೇಕಾಗಿದೆ. ಮಕ್ಕಳಿದ್ದರೂ ವರ್ಚುವಲ್ ಟೈಪ್ ಆಗಿದೆ. ಇಂತಹ ಸಂದರ್ಭದಲ್ಲಿ ನಾವು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದನ್ನು ಸವಾಲಾಗಿ ಸ್ವೀಕರಿಸಿ, ಆನ್‌ಲೈನ್ ತರಗತಿಯನ್ನು ಪ್ರಾರಂಭ ಮಾಡಿದಲ್ಲದೆ ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನೂ ನಡೆಸಿದ್ದೇವೆ. ಇದು ನಮ್ಮ ಯಶಸ್ಸಿನ ಹಾದಿಯಾಗಿದೆ ಎಂದ ಅವರು ಮುಂದೆ ಇನ್ನೂ ಅಪ್‌ಡೇಟ್ ಆಗಬೇಕಾಗಿದೆ. ಶಿಕ್ಷಕರು ಯಾವಾಗಲು ಅಪ್‌ಡೇಟ್ ಆಗಿರಬೇಕು ಮತ್ತು ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಹೆಚ್ಚಿನ ಮಾಹಿತಿ ಕೊಡುವಂತಹ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕೆಂದು ಅವರು ಹೇಳಿದರು. ಸಂಸ್ಥೆಯ ತರಬೇತುದಾರರಾದ ಹರಿಕೃಷ್ಣ ಬಿ.ಎನ್, ಹರೀಶ್ ಬಿ.ಕೆ, ವಸಂತಿ, ನಾರಾಯಣ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಸಂಚಾಲಕರಾಗಿದ್ದ ದಿ.ಸಿ.ಪಿ.ಜಯರಾಮ ಗೌಡರ ಪತ್ನಿ ಚಂದ್ರಕಲಾ ಸಿ.ಪಿ, ಜಯರಾಮ ಚಿಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳಾದ ವಸಂತಿ, ಸುಲೋಚನಾ, ದಯಾನಂದ, ಎಸ್ ಕೆ, ಹರಿಕೃಷ್ಣ ಪಿ ಎನ್ ಹರೀಶ್ ಬಿ ಕೆ, ಲೋಹಿತಾಶ್ವ, ರಾಧಾಕೃಷ್ಣ ಎನ್ ಜಯರಾಮ ಗೌಡ, ಪ್ರಕಾಶ್ ಕೆ, ದಾಜಮ್ಮ ಅತಿಥಿಗಳನ್ನು ಗೌರವಿಸಿದರು. ವಸಂತಿ ಪ್ರಾರ್ಥಿಸಿದರು. ತರಬೇತುದಾರ ಪ್ರಶಾಂತ್ ನಾಯಕ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸುಲೋಚನಾ ಎಸ್ ವಂದಿಸಿದರು. ಕಿರಿಯ ತರಬೇತುದಾರ ನಾರಾಯಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನಿವೃಗೊಂಡ ಪ್ರಾಂಶುಪಾಲ ಭವಾನಿ ಗೌಡರ ಪತ್ನಿ ವಿದ್ಯಾವತಿ, ಇನ್ಪೋಸಿಸ್ ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪುತ್ರಿ ಅನುಷಾ ಪಿ.ಬಿ, ಸೈಂಟ್ ಜೋಸೆಫ್ ಮಂಗಳೂರು ಇಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ಪುತ್ರ ಧನುಷ್ ಪಿ.ಬಿ ಮತ್ತು ಶ್ರೀ ಮಹಾಲಿಂಗೇಶ್ವರ ಐಟಿಐ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.