HomePage_Banner
HomePage_Banner
HomePage_Banner
HomePage_Banner

ಕೆಯ್ಯೂರು: ನೇಣು ಬಿಗಿದು ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.31ರಂದು ಕೆಯ್ಯೂರು ಗ್ರಾಮದ ಕಣಿಯಾರು ತಾಳಿಗದ್ದೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಣಿಯಾರು ತಾಳಿಗದ್ದೆ ನಿವಾಸಿ ಹೊನ್ನಪ್ಪ ಗೌಡ ಅವರ ಪುತ್ರ ಗೋಪಾಲಕೃಷ್ಣ(42ವ)ರವರು ಆತ್ಮಹತ್ಯೆ ಮಾಡಿಕೊಂಡವರು. ಅವರು ಕಳೆದ ಆರು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಜು.31ರಂದು ಬೆಳಿಗ್ಗೆ ಹಟ್ಟಿಗೆ ಸೊಪ್ಪು ತಂದು ಮಧ್ಯಾಹ್ನದ ವೇಳೆ ಮನೆಯ ಪಕ್ಕದಲ್ಲಿರುವ ಬಚ್ಚಲು ಮನೆಯ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಲಕೃಷ್ಣ ಅವರು ಮಧ್ಯಾಹ್ನ ಮನೆಯಲ್ಲಿ ಇರದ ಹಿನ್ನೆಲೆಯಲ್ಲಿ ಪುತ್ರ ಸತ್ಯಪ್ರಸಾದ್ ಹುಡುಕಾಡಿದಾಗ ತಂದೆ ನೇಣು ಬಿಗಿದ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಮೃತ ಗೋಪಾಲಕೃಷ್ಣ ಅವರ ಸಹೋದರ ಆನಂದ ಗೌಡ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದಾರೆ. ಮೃತರು ಪತ್ನಿ ಆಶಾ ಮತ್ತು ಮಕ್ಕಳನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.