HomePage_Banner
HomePage_Banner
HomePage_Banner
HomePage_Banner

ಕೆದಿಲ: ಅಕ್ರಮ ಗೋ ಮಾಂಸ ಅಡ್ಡೆಗೆ ದಾಳಿ |ಪುತ್ತೂರು ಪೊಲೀಸರ ಕಾರ್ಯಾಚರಣೆ – ಆರೋಪಿಗಳ ಬಂಧನ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಕೆದಿಲ ಗ್ರಾಮದ ಗಡಿಯಾರದಲ್ಲಿ ಮನೆಯೊಂದ ಹಿಂಬದಿಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ  ಜಾನುವಾರಿಗಳ ವಧೆ‌ ಮಾಡಿ ಮಾಂಸ ಮಾಡುವ ಕುರಿತು ಆ.1ರಂದು ನಸುಕಿನ ಜಾವ  ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯ  ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ನೇತ್ರತ್ವದಲ್ಲಿ ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಕ್ರತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.
ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿರುವ ಪಿ ಕೆ ಅಬ್ಬುರವರ  ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಕ್ರತ್ಯ ಬೆಳಕಿಗೆ ಬಂದಿದ್ದು  ಪಿ.ಕೆ ಅಬ್ಬು, ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ಶರೀಫ್,  ಮೊಹಮ್ಮದ್ ಸಿನಾನ್, ಮೊಹಮ್ಮದ್ ಮರ್ಷದ್ ಬಂದಿತ ಆರೋಪಿಗಳು. ಅರೋಪಿಗಳಿಂದ    ಸುಮಾರು 15 ಸಾವಿರ ಮೌಲ್ಯದ 75 ಕಿಲೋ ಗ್ರಾಂ ತೂಕದ ತಲೆ ಸಹಿತ ದನದ ಮಾಂಸ,  ರೂ. 21ಸಾವಿರ ಮೌಲ್ಯದ 4 ಮೊಬೈಲ್‌ ಪೋನುಗಳು, ಹಾಗೂ ದನದ ಮಾಂಸ ಮಾಡಲು ಬಳಸಿದ 3 ಕತ್ತಿ,  ಮರದ ತುಂಡು , ಪ್ಲಾಸ್ಟಿಕ್‌  ಟಾರ್ಪಾಲು ಹಾಗೂ ಪ್ಲಾಸ್ಟಿಕ್‌ ಬಕೆಟ್‌ 1 ನ್ನು ಸ್ವಾಧೀನ ಪಡಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಿಂಜಾವೇ ಮಾಹಿತಿ:
ಹಿಂದೂ ಜಾಗರಣಾ ವೇದಿಕೆ ಕೆದಿಲ ಘಟಕದ‌ ಮಾಹಿತಿಯಂತೆ ಪೊಲೀಸರು‌ ಕಾರ್ಯಾಚರಣೆ ನಡೆಸಿದ್ದು. ಪೊಲೀಸರು ಕಾರ್ಯಾಚರಣೆ ವೇಳೆ ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ವಧೆ ಮಾಡಿ ಮಾಂಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆರೋಪಿ ವಿರುದ್ಧ ಬಂಟ್ವಾಳದಲ್ಲೂ ಪ್ರಕರಣ:
ಆರೋಪಿಗಳ ಪೈಕಿ ಇಸ್ಮಾಯಿಲ್ ಎಂಬವರ ವಿರುದ್ಧ ಈ ಹಿಂದೆ ಅಕ್ರದ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು‌ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಇದೀಗ ಇನ್ನೊಮ್ಮೆ ಬಂಧಿತರಾಗಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.