- ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು: ಕೊರೋನಾ ನೆಗೆಟಿವ್
ಪುತ್ತೂರು: ಕಳೆದ ಒಂಬತ್ತು ದಿನಗಳಿಂದ ವಿಪರೀತ ಕೆಮ್ಮು, ನೆಗಡಿ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಗರಸಭಾ ಮಾಜಿ ವಿಪಕ್ಷ ನಾಯಕ ಹಾಗೂ ಆರ್ಯಾಪು ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಚ್.ಮಹಮದ್ ಆಲಿಯವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಮಹಮ್ಮದ್ ಆಲಿರವರ ರಿಪೋರ್ಟ್ ನೆಗೆಟಿವ್ ಬಂದಿರುತ್ತದೆ ಎಂದು ತಿಳಿದು ಬಂದಿದೆ. ಆದರೆ ಶ್ವಾಸಕೋಶದಲ್ಲಿ ಕಫ ತುಂಬಿ ನ್ಯುಮೋನಿಯ ಅಟ್ಯಾಕ್ ಆಗುವ ಸಂಭವ ಇರಬಹುದೆಂದು ವೈದ್ಯರ ಸಲಹೆ ಮೇರೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪ್ರಸ್ತುತ ಮಹಮ್ಮದ್ ಆಲಿರವರು ಗುಣಮುಖ ಹೊಂದುತ್ತಿದ್ದಾರೆ ಎಂದು ತಿಳಿದು ಬಂದಿದೆ.