HomePage_Banner
HomePage_Banner
HomePage_Banner
HomePage_Banner

ಕುಂಬ್ರ ಎ.ಟಿ.ಎಂ.ನಲ್ಲಿ ಸಮಸ್ಯೆ ತಪ್ಪಿದ್ದಲ್ಲ| ಹಣ ಡ್ರಾ ಮಾಡಲು ಬಂದರೆ ನಿರಾಶೆ ಖಚಿತ…!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೀವೇನಾದರೂ ನಗದು ಡ್ರಾ ಮಾಡಲು ಕುಂಬ್ರ ಎ.ಟಿ.ಎಂ.ನ್ನು ನಂಬಿಕೊಂಡು ಬಂದ್ರೆ ನೀವು ನಿರಾಶರಾಗುವುದು ಖಚಿತ..! ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ ಎ.ಟಿ.ಎಂ ಆಗಾಗ ಗ್ರಾಹಕರಿಗೆ ಕೈ ಕೊಡುತ್ತಿದೆ. ನಿರಂತರವಾಗಿ ಒಂದಿಲ್ಲೊಂದು ಸಮಸ್ಯೆ ಸದ್ರಿ ಎ.ಟಿ.ಎಂ.ನಲ್ಲಿ ಉಂಟಾಗುತ್ತಿದ್ದು ಗ್ರಾಹಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಮುಖ್ಯವಾಗಿ ಔಟ್ ಆಫ್ ಸರ್ವಿಸ್, ಆಫ್‌ಲೈನ್, ಹಣ ಖಾಲಿಯಾಗಿರುವುದು, ಇತ್ಯಾದಿ ಸಮಸ್ಯೆಗಳು ಈ ಎ.ಟಿ.ಎಂ.ನಲ್ಲಿ ಸಾಧಾರಣವಾಗಿ ಕಂಡು ಬರುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬ್ಯಾಂಕ್‌ನವರು ವಿಫಲರಾಗಿದ್ದಾರೆ ಎನ್ನುವ ಆರೋಪವನ್ನು ಗ್ರಾಹಕರು ಮಾಡುತ್ತಿದ್ದಾರೆ. ಎಟಿಎಂ ಬಾಗಿಲು ಸದಾ ತೆರೆದಿರುವ ಹಿನ್ನೆಲೆಯಲ್ಲಿ ಜನರು ಸಹಜವಾಗಿ ಹಣ ಡ್ರಾ ಮಾಡಲು ಎಟಿಎಂಗೆ ಬರುತ್ತಿರುತ್ತಾರೆ, ಆದರೆ ಎಟಿಎಂ ಒಂದಲ್ಲಾ ಒಂದು ಸಮಸ್ಯೆಯಲ್ಲಿರುವುದನ್ನು ನೋಡಿ ಗ್ರಾಹಕರು ತೊಂದರೆಗೆ ಸಿಲುಕುತ್ತಿದ್ದು ಸ್ಥಳೀಯರಲ್ಲಿ ಎಟಿಎಂ ಬಗ್ಗೆ ವಿಚಾರಿಸಿ, ಎಟಿಎಂ ಸರಿಯಿಲ್ಲ ಎಂದ ಮೇಲೆ ಎಟಿಎಂನ್ನು ತೆರೆದಿಡುವುದಾದರೂ ಯಾಕೆ ಎಂದು ತಮ್ಮೊಳಗೇ ಆಕ್ರೊಶ ವ್ಯಕ್ತಪಡಿಸಿ ತೆರಳುವ ಘಟನೆಗಳು ನಡೆಯುತ್ತಿದೆ.

ಕುಂಬ್ರದಲ್ಲಿ ಏಕಮಾತ್ರ ಎ.ಟಿ.ಎಂ ಇರುವ ಕಾರಣ ಈ ಭಾಗದವರು ಇದನ್ನೇ ನೆಚ್ಚಿಕೊಂಡಿದ್ದಾರೆ. ತುರ್ತಾಗಿ ಹಣ ಡ್ರಾ ಮಾಡಬೇಕೆಂದರೆ ಇದೇ ಎ.ಟಿ.ಎಂನ್ನು ಅವಲಂಬಿಸಬೇಕಾಗಿದೆ. ಹಲವಾರು ಮಂದಿ ಸದ್ರಿ ಎಟಿಎಂಗೆ ಹಣ ಡ್ರಾ ಮಾಡಲು ಬಂದು ನಿರಾಶೆಯಿಂದ ವಾಪಸ್ ಆಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಈ ಎಟಿಎಂ ಹೆಚ್ಚಿನ ಸಂದರ್ಭಗಳಲ್ಲಿ ನಾದುರಸ್ತಿಯಲ್ಲಿರುವುದು ಮತ್ತು ನಗದು ಇಲ್ಲದೇ ಇರುವುದು ಜನರ ಆಕ್ರೊಶಕ್ಕೂ ಕಾರಣವಾಗಿದ್ದು ಮುಂದಿನ ದಿನಗಳಲ್ಲೂ ಇದರ ಸಮಸ್ಯೆ ಮುಂದುವರಿದಲ್ಲಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುವುದಾಗಿಯೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂಬ್ರದಲ್ಲಿರುವ ಎಟಿಎಂಗೆ ಹಣ ಡ್ರಾ ಮಾಡಲು ಬರುವವರಿಗೆ ಆಗಾಗ ಸಮಸ್ಯೆಯಾಗುತ್ತಿದೆ. ನಾದುರಸ್ತಿಯಲ್ಲಿರುವುದು ಮತ್ತು ನಗದು ಇಲ್ಲದೇ ಇರುವುದು ಈ ಎಟಿಎಂನ ಮುಖ್ಯ ಸಮಸ್ಯೆ. ಕುಂಬ್ರದಲ್ಲಿ ಒಂದೇ ಎಟಿಎಂ ಇರುವ ಕಾರಣ ಅದನ್ನು ಸದಾ ಸಮಯ ಸುವ್ಯವಸ್ಥೆಯಲ್ಲಿ ಇಡುವುದರ ಜೊತೆಗೆ ನಗದು ಖಾಲಿಯಾಗದಂತೆ ಬ್ಯಾಂಕ್‌ನವರು ನಿಗಾ ವಹಿಸಬೇಕು. ಒಟ್ಟಿನಲ್ಲಿ ಜನರಿಗೆ ತೊಂದರೆಯಾಗಬಾರದು. -ಶಿವಪ್ಪ ರಾಥೋಡ್ ಗ್ರಾಹಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.