HomePage_Banner
HomePage_Banner
HomePage_Banner

ಶ್ರೀಧಾಮ ಮಾಣಿಲದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ

Puttur_Advt_NewsUnder_1
Puttur_Advt_NewsUnder_1
  • ಐಕ್ಯಮತ್ಯರಾಗಿ ಮಾನವೀಯ ಮೌಲ್ಯದೊಂದಿಗೆ ಬಾಳಬೇಕು : ಮಾಣಿಲ ಶ್ರೀ

 ವಿಟ್ಲ: ಮಾನಸೀಕವಾಗಿ ಎಲ್ಲರು ಆತ್ಮ ಸ್ಥೈರ್ಯ ಕುಂದಿರ್ತಕ್ಕಂತಹ ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಆಚರಣೆ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯನ್ನು ನಡೆಸುತ್ತಾ ಬರಲಾಗುತ್ತಿದ್ದು, ಈ ದೇಶದ ಪ್ರತಿಯೊಬ್ಬ ಪ್ರಜೆಯ ಒಳಿತಿಗಾಗಿ ಹಾಗೂ ದೇಶಕ್ಕೆ ಬರತಕ್ಕಂತಹ ಗಂಡಾಂತರವನ್ನು ದೂರಮಾಡುವಂತೆ ಮಹಾದೇವಿಯಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಎಲ್ಲರೂ ಮಾತ್ಸರ್ಯವನ್ನು ಬಿಟ್ಟು ಐಕ್ಯಮತ್ಯರಾಗಿ ಮಾನವೀಯ ಮೌಲ್ಯದೊಂದಿಗೆ ಬಾಳಬೇಕು ಎಂದು ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಹೇಳಿದರು. ಅವರು ಜು.31ರಂದು ಶ್ರೀ ಧಾಮದಲ್ಲಿ ನಡೆದ  ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.

ದೇಶದ ನಾನಾ ಕಡೆಗಳಲ್ಲಿ ಜನ ಇದೀಗ ಆರ್ಥಿಕವಾಗಿ, ವ್ಯಾವಹಾರಿಕವಾಗಿಯೂ ಹಿಂದುಳಿದಿರುವ ಪ್ರಸಂಗ ಬಂದಿದೆ. ರೋಗಗ್ರಸ್ಥ ರೋಗಿಗಳನ್ನು ಸಂಶಯದ ದೃಷ್ಠಿಯಿಂದ ನೋಡತಕ್ಕಂತಹ ಪರಿಸ್ಥಿತಿ ಎದುರಾಗಿರುವುದು ಮಾತ್ರವಲ್ಲದೆ ಆಸ್ಪತ್ರೆಗಳಲ್ಲಿ ಬೇರೆ ರೋಗಿಗಳಿಗೂ ಚಿಕಿತ್ಸೆ ನೀಡಲಾಗದ ಸಂಕಷ್ಟದ ದಿನಗಳು ಎದುರಾಗಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಾ ಹೋಗುತ್ತಿದೆ. ಸಂಬಂಧಗಳು ದೂರವಾಗುತ್ತಿದೆ. ಕೊರೋನ ಎನ್ನುವುದು ಒಂದು ಸಾಂಕ್ರಾಮಿಕ ರೋಗವಾದರೂ ದುಃಖ ದುಮ್ಮಾನಗಳಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಈ ಕೊರೋನ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದರೂ ಯಾರೂ ಕೂಡಾ ಮಾನಸೀಕವಾಗಿ ದೃತಿಗೆಡದೆ, ಸರಕಾರದ ನಿಯಮಗಳನ್ನು ಪಾಲಿಸುವುದರೊಂದಿಗೆ ಕೊರೋನದೊಂದಿಗೆ ನಾವು ಹೋರಾಡಬೇಕು. ಕೊರೋನದ ವಿರುದ್ಧ ಹೋರಾಡಲು ದೇಶದ ಪ್ರತಿಯೊಬ್ಬ ಪ್ರಜೆಯು ಜಾತಿ ಭೇದ ಮರೆದು ಕಟಿಬದ್ದರಾಗಬೇಕು. ಸಾಮಾಜಿಕ ಬದ್ಧತೆಯನ್ನು ಕಾಯ್ದುಕೊಂಡಿರುವ ಈ ದೇಶದಲ್ಲಿ ಮಧ್ಯಮ ಉಧ್ಯಮ ಕ್ಷೇತ್ರ, ಮಧ್ಯಮ ವ್ಯವಹಾರ ಕ್ಷೇತ್ರ, ಮಧ್ಯಮ ಕೃಷಿ ಕ್ಷೇತ್ರದಲ್ಲಿ ಎಷ್ಟೋ ನಿರುದ್ಯೋಗದ ಸಮಸ್ಯೆಯನ್ನು ಈ ಸಮಾಜ ಎದುರಿಸುತ್ತಿದೆ. ಎಷ್ಟೋ ಜನ ನಿರುದ್ಯೋಗಿಗಳಾಗಿ ಮನೆಯಲ್ಲಿ ಉಳಿದುಕೊಳ್ಳುವಂತಾಗಿದೆ. ಎಲ್ಲರೂ ಮಾತ್ಸರ್ಯವನ್ನು ಬಿಟ್ಟು ಐಕ್ಯಮತ್ಯರಾಗಿ ಮಾನವೀಯ ಮೌಲ್ಯದೊಂದಿಗೆ ಬಾಳಬೇಕು. ವರಮಹಾಲಕ್ಷ್ಮಿ ನಮಗೆಲ್ಲರಿಗೂ ಆಂತರಿಕ ಸದೃಢತೆ ನೀಡಲಿ ಎಂದರು.

ಶ್ರೀ ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಅಶೋಕ್ ರೈ ಅರ್ಪಿಣಿಗುತ್ತು, ರಾಜೇಶ್ ಕುಮಾರ್ ಬಾಳೆಕಲ್ಲು, ಶ್ರೀಧರಪೂಜಾರಿ ಬಾಳೆಕಲ್ಲು ಇನ್ನಿತರರು ಇದ್ದರು. ಬೆಳಗ್ಗೆ ಗಣಪತಿ ಹೋಮ ನಾನಾ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಚಂಡಿಕಾ ಯಾಗ, ಕನಕಾಧಾರಾ ಯಾಗ ಪೂರ್ಣಹುತಿ ನಡೆಯಿತು. ಭಜನಾ ಸತ್ಸಂಗ ಕಾರ್ಯಕ್ರಮ ಪ್ರಸ್ತುತಗೊಂಡಿತು. ಸಾಯಂಕಾಲ ದುರ್ಗಾಪೂಜೆ, ಆಶ್ಲೇಷ ಬಲಿ ನಡೆದವು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.