HomePage_Banner
HomePage_Banner
HomePage_Banner
HomePage_Banner

ಸಾಮಾಜಿಕ ಕಳಕಳಿಯ “ಮನಸಾಕ್ಷಿ” ಕಿರುಚಿತ್ರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ಪ್ರಣವ ಭಟ್‌ರವರ ನೇಸರ ಪ್ರೊಡಕ್ಷನ್‌ನಲ್ಲಿ ನಿರ್ಮಾಣ

ಪುತ್ತೂರು: ಪ್ರತಿಯೊಬ್ಬರಿಗೂ ಬದುಕಲ್ಲಿ ಸಮಸ್ಯೆಗಳು ಬಂದಾಗ ಆತ್ಮಹತ್ಯೆಯೊಂದೇ ಪರಿಹಾರ ಎಂದು ತಿಳಿದು ಸಾಯುವ ನಿರ್ಧಾರ ಮಾಡಿಬಿಡುತ್ತಾರೆ ಆದರೆ ಅದೊಂದೇ ಪರಿಹಾರವಲ್ಲ ಎಂದು ತಿಳಿಸುವ ಸಾಮಾಜಿಕ ಕಳಕಳಿ ಹೊಂದಿರುವ ಕಿರುಚಿತ್ರ “ಮನಸಾಕ್ಷಿ”. ನೇಸರ ಪ್ರೊಡಕ್ಷನ್ ಮೂಲಕ ನಿರ್ಮಾಣಗೊಂಡು ಪ್ರಣವ ಭಟ್ ಪುತ್ತೂರು ಇವರ ಕಥೆ ಹಾಗೂ ನಿರ್ದೇಶನದಲ್ಲಿ ನೇಸರ ಪ್ರೋಡಕ್ಷನ್ ಯೂಟ್ಯೂಬ್ ಚಾನೆಲ್ ಮೂಲಕ ಕಿರುಚಿತ್ರ ಬಿಡುಗಡೆಯಾಗಿದೆ.

ಈ ಕಿರುಚಿತ್ರ ಜನರಿಗೆ ಒಂದು ಸುಂದರ ನೀತಿಯ ಮೂಲಕ ತನ್ನ ಕಥೆಯನ್ನು ಹೇಳುತ್ತಾ ಹೋಗುತ್ತದೆ. ಒಬ್ಬ ಮನುಷ್ಯ ತಾನು ಅಪ್ಪ ಅಮ್ಮ ವಯಸ್ಸಾದವರೆಂದು ವೃದ್ಧಾಶ್ರಮಕ್ಕೆ ಕಳುಹಿಸಿ ಹೆಂಡತಿಯೊಂದಿಗೆ ಸಣ್ಣ ಕಾರಣಕ್ಕೆ ಜಗಳವಾಡಿ ಡೈವೋರ್ಸ್ ನೀಡಿ ಕೊನೆಗೆ ಒಂಟಿಯಾಗಿ ಬದುಕು ನಡೆಸಲು ಆಗದೆ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಾನೆ. ಆದರೆ ಮುಂದೆ ಈ ಕಥೆ ತಿರುವು ಪಡೆದುಕೊಂಡು ಯಾರೋ ಒಬ್ಬ ಸಾಯುವ ಮನುಷ್ಯನನ್ನು ತಡೆದು ಅವನಿಗೆ ಒಂದೊಂದೇ ನೆನಪುಗಳನ್ನ ತಿಳಿಸುತ್ತಾ ಅಪ್ಪ ಅಮ್ಮನ ಪ್ರೀತಿ, ಹೆಂಡತಿ, ಸಣ್ಣ ಮಗಳ ಪ್ರೀತಿಯನ್ನು ನೆನಪಿಸುತ್ತಾ ಅವನಿಗೆ ತನ್ನ ತಪ್ಪಿನ ಅರಿವು ಮಾಡಿಸಿ ಮತ್ತೆ ಎಲ್ಲರೂ ಒಂದಾಗುವ ಹಾಗೇ ಸಮಸ್ಯೆಗೆ ಪರಿಹಾರ ನೀಡುತ್ತಾನೆ. ಆದರೆ ಕೊನೆಗೆ ತಿಳಿಯುತ್ತದೆ ಅವನ ಒಳ ಮನಸ್ಸು ಮನುಷ್ಯನ ರೂಪದಲ್ಲಿ ಬಂದು ಸಾಯುವ ನಿರ್ಧಾರ ತಪ್ಪಿಸುವಂತೆ ಮಾಡಿದ್ದು ಎಂಬುದು. ಈ ಕಿರುಚಿತ್ರದ ಕಥೆ-ನಿರ್ದೇಶನ ಮಾಡಿದ ಪ್ರಣವ ಭಟ್‌ರವರು ಅನೇಕ ಸಾಮಾಜಿಕ ಕಳಕಳಿ ಹೊಂದಿರುವ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ನಟನೆ ಕೂಡ ಮಾಡಿದ್ದಾರೆ. ಶ್ರೀರಾಮ್ ಅವರು ಮುಖ್ಯವಾದ ಪಾತ್ರವಹಿಸಿದ್ದು ಆದಿತ್ಯ ಹಾಗೂ ವಿನೀತ್ ಕ್ಯಾಮೆರಾ ಕೆಲಸ ನಿರ್ವಹಣೆ ಮಾಡಿ ಶೈಲೇಶ್ ರವರ ಎಡಿಟಿಂಗ್ ಇದೆ. ಈ ಕಿರುಚಿತ್ರವನ್ನು ನೇಸರ ಪ್ರೋಡಕ್ಷನ್ ಯೂಟ್ಯೂಬ್ ಚಾನಲ್ ಮೂಲಕ ನೋಡಬಹುದು ಸಾಮಾಜಿಕ ಕಳಕಳಿ ಹೊಂದಿರುವ ಕಿರುಚಿತ್ರ ನೋಡಿ ಯುವ ತಂಡವನ್ನು ಪ್ರೋತ್ಸಾಹಿಸಿ ಎಂದು ಪ್ರಣವ್ ಭಟ್ ಪುತ್ತೂರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.