HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ ಶ್ರೀ ಗಜಾನನ ಹಿ.ಪ್ರಾ. ಶಾಲಾ ಸಹಶಿಕ್ಷಕ ರತ್ನಪ್ಪ ರಾಠೋಡ್‌ರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಈಶ್ವರಮಂಗಲ:  ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತಿ ಸಹಶಿಕ್ಷಕ ರತ್ನಪ್ಪ ರಾಠೋಡ್ ರವರಿಗೆ ಸನ್ಮಾನ ಸಮಾರಂಭ ಜು.31ರಂದು ನಡೆಯಿತು. ಗಜಾನನ ವಿದ್ಯಾಸಂಸ್ಥೆಗಳ ಗೌರವಾಧ್ಯಕ್ಷ ಕೋನೆತೋಟ ಜಿ.ಕೆ. ಮಹಾಬಲೇಶ್ವರ ಭಟ್ಟರು ರತ್ನಪ್ಪ ರಾಠೋಡ್ ರವರಿಗೆ ಹಾರ ಹಾಕಿ, ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಒಟ್ಟು 25 ವರ್ಷ 3 ತಿಂಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಹಾಗೂ ಈ ಶಾಲೆಯಲ್ಲಿ 12ವರ್ಷ, 3 ತಿಂಗಳು ತೃಪ್ತಿಕರ ಸೇವೆ ಸಲ್ಲಿಸಿದ್ದೀರಿ, ನಿಮಗೂ ನಿಮ್ಮ ಕುಟುಂಬದವರಿಗೂ ಒಳಿತಾಗಲೆಂದು ಶುಭಾಶೀರ್ವಾದ ಮಾಡಿದರು.

ಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಳ ಸ್ವಭಾವದ ಪ್ರಾಮಾಣಿಕ ಶಿಕ್ಷಕರೆಂದು ಹೇಳುತ್ತಾ, ನಿಮ್ಮ ಊರಿನಲ್ಲಿ ಸಮಾಜಮುಖೀ ಕಾರ್ಯವನ್ನು ಮಾಡಿರೆಂದು ಸಲಹೆ ನೀಡಿ ಶುಭ ಹಾರೈಸಿದರು. ಸಂಚಾಲಕ ಶಿವರಾಮ.ಪಿ. ಮಾತನಾಡಿ ಮಕ್ಕಳೊಂದಿಗೆ, ಪೋಷಕರೊಂದಿಗೆ, ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯದಲ್ಲಿದ್ದ ಶಿಕ್ಷಕರಾಗಿದ್ದರು. ಎಂದು ಹೇಳಿ ಅವರ ಕೆಲಸಗಳನ್ನು ನೆನೆದು ಶುಭ ಹಾರೈಸಿದರು ಶಾಲೆಯ ಮುಖ್ಯೋಪಾಧ್ಯಾಯ ಶಂಕರನಾರಾಯಣ. ಎನ್. ಸ್ವಾಗತಿಸಿ ಮಾತನಾಡಿ ಸಹೋದ್ಯೋಗಿ ಸ್ನೇಹಿತನ ಸಮಯ ಪ್ರಜ್ಞೆ, ಸಹಕಾರ, ಸಹನೆ , ಕರ್ತವ್ಯನಿಷ್ಠೆಯನ್ನು ಸ್ಮರಿಸಿ, ಅವರಿಗೂ, ಅವರ ಕುಟುಂಬದವರಿಗೂ ದೇವರು ಸುಖ, ಶಾಂತಿ, ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸಿದರು. ಕಾರ್ಯಕ್ರಮ ನಿರೂಪಿಸಿದ ಸಹ ಶಿಕ್ಷಕ ಎನ್. ನರೇಂದ್ರ ಭಟ್, ನಿವೃತ್ತ ಮುಖ್ಯಗುರು ಕೆ.ಶಿವರಾಮ ಶರ್ಮ, ನಿವೃತ್ತಿಗೊಳ್ಳುತ್ತಿರುವ ಶಿಕ್ಷಕರಿಗೆ ಶುಭಹಾರೈಸಿದರು.

ಸನ್ಮಾನ ಸ್ವೀಕರಿಸಿ ರತ್ನಪ್ಪ ರಾಠೋಡ್ ರವರು ಮಾತನಾಡಿ ನನಗೆ ಅನ್ನ ನೀಡಿದ ಸಂಸ್ಥೆಯಿದು ಎಂದು ಸ್ಮರಿಸುತ್ತಾ ಗೌರವಾಧ್ಯಕ್ಷರ ಆಶೀರ್ವಾದ ಯಾಚಿಸಿಸಿದರು. ಆಡಳಿತ ಮಂಡಳಿಯವರ ಹಾಗೂ ಎಲ್ಲ ಸಹೋದ್ಯೋಗಿಗಳ ಸಹಕಾರಕ್ಕೆ ಕೃತಜ್ಞತೆ ಸಮರ್ಪಿಸಿ ನೆನಪಿಗಾಗಿ ಶಾಲೆಗೆ ಒಂದು ಕಪಾಟನ್ನು ಕೊಡುಗೆ ನೀಡಿದರು. ಇವರು ಪತ್ನಿ, ಪುತ್ರ, ಪುತ್ರಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಉಷಾಕಿರಣ್ ಕಿರು ಪರಿಚಯ ವಾಚಿಸಿದರು.

ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಶಾಮಣ್ಣ, ಆಡಳಿತ ಮಂಡಳಿ ನಿರ್ದೇಶಕ ನಾಗಪ್ಪ ಮಾಸ್ತರ್ ಬೊಮ್ಮೆಟ್ಟಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಪುಷ್ಪಲತಾ ವಂದಿಸಿದರು. ಸಹಶಿಕ್ಷಕಿ ಆಶಾ, ಅಕ್ಷರದಾಸೋಹ ಸಿಬ್ಬಂದಿಗಳಾದ ನೇತ್ರಾವತಿ ಮತ್ತು ಗೀತಾ ಲಘು ಉಪಹಾರ ವಿತರಿಸಿ ಸಹಕರಿಸಿದರು. ಆಡಳಿತ ಮಂಡಳಿ ನಿರ್ದೇಶಕ ಕೆ. ವೆಂಕಟೇಶ್ವರ ಶರ್ಮ, ಡಿ.ರವಿಕುಮಾರ್, ಸುಕೇಶ್ ರೈ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಗುರು ರಾಮ ನಾಯ್ಕ್, ನಿವೃತ್ತ ಸಹೋದ್ಯೋಗಿಗಳಾದ ಹುಕ್ರಪ್ಪ ಗೌಡ, ಆನಂದ ರೈ, ಕೆ.ಸುಶೀಲ, ಕೆ.ಆರ್.ಸರೋಜಿನಿ ಬೊಮ್ಮೆಟ್ಟಿ ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.